ಅಮೆರಿಕದ ಸಿಯಾಟಲ್ ನಲ್ಲಿ ಈ ವರ್ಷದ ಜನವರಿಯಲ್ಲಿ ಪೊಲೀಸ್ ಗಸ್ತು ವಾಹನ ಡಿಕ್ಕಿ ಹೊಡೆದು ಭಾರತೀಯ ಮೂಲದ ಯುವತಿ ಮೃತಪಟ್ಟಿದ್ದರು. ಯುವತಿ ಸಾವಿನ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಅಪಹಾಸ್ಯ ಮಾಡಿರುವುದು ಬೆಳಕಿಗೆ ಬಂದಿದೆ.
ಅಧಿಕಾರಿ, 23 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಸಾವಿನ ಬಗ್ಗೆ ಅಪಹಾಸ್ಯ ಮಾಡಿರುವುದು ಬಾಡಿ- ವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದು ಬಹಿರಂಗವಾದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸೋಮವಾರ ಬಿಡುಗಡೆಯಾದ ವೀಡಿಯೊದಲ್ಲಿ, “ಆಕೆಯ ಜೀವಕ್ಕೆ ಸೀಮಿತ ಮೌಲ್ಯ ಇತ್ತು” ಎಂದು ಯುವತಿ ಸಾವಿನ ಬಗ್ಗೆ ಅಪಹಾಸ್ಯವಾಡಿದ್ದ ಪೊಲೀಸ್ ಅಧಿಕಾರಿ, “ಒಂದು ಚೆಕ್ ಬರೆದುಕೊಟ್ಟರೆ ಮುಗಿಯಿತು” ಎಂದು ಜೋರಾಗಿ ನಕ್ಕಿರುವುದು ಆಡಿಯೋದಲ್ಲಿ ದಾಖಲಾಗಿದೆ.
ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು ವೇಗವಾಗಿ ವಾಹನ ಚಲಾಯಿಸಿಕೊಂಡು ತೆರಳುವಾಗ ಈಶಾನ್ಯ ವಿಶ್ವವಿದ್ಯಾಲಯದ ಸಿಯಾಟಲ್ ಕ್ಯಾಂಪಸ್‌ನಲ್ಲಿ ಜನವರಿ 23 ರಂದು ಅಪಘಾತ ಸಂಭವಿಸಿತ್ತು. 23 ವರ್ಷದ ಜಾಹ್ನವಿ ಕಂದುಲಾ ಸ್ನಾತಕೋತ್ತರ ವಿದ್ಯಾರ್ಥಿನಿ ಯಾಗಿದ್ದರು. ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರಿಗೆ ಕರೆ ಮಾಡಿದ್ದ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಔಡೆರೆರ್, ಅಪಘಾತದ ಬಗ್ಗೆ ಮಾಹಿತಿ ನೀಡಿದ್ದರು. ಚಾಲನೆ ವೇಳೆ ಬಾಡಿ- ವೋರ್ನ್ ಕ್ಯಾಮೆರಾ ಮೇಲೆ ಗಮನಿಸಿರಲಿಲ್ಲ.
ಪೊಲೀಸ್ ಇಲಾಖೆಯು ರೆಕಾರ್ಡ್ ಆಗಿದ್ದ ಆಡಿಯೋವನ್ನು ಸೋಮವಾರ ಬಿಡುಗಡೆ ಮಾಡಿದೆ. ಕ್ಲಿಪ್‌ನಲ್ಲಿ, ಸಿಯಾಟಲ್ ಪೋಲೀಸ್ ಆಫೀಸರ್ಸ್ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಆಡೆರರ್, ಗಿಲ್ಡ್ ಅಧ್ಯಕ್ಷರ ಜೊತೆ ಮಾತನಾಡುವಾಗ ಜಾಹ್ನವಿ ಕಂಡುಲಾ ಅವರ ಜೀವನಕ್ಕೆ ಇದ್ದಿದ್ದು ಸೀಮಿತ ಬೆಲೆ, ನಗರ ಆಡಳಿತವು ಹನ್ನೊಂದು ಸಾವಿರ ಡಾಲರ್ ಒಂದು ಚೆಕ್ ಬರೆದರೆ ಸಾಕು ಎಂದು ಅಪಹಾಸ್ಯ ಮಾಡಿ ನಗುತ್ತ ಹೇಳಿದ್ದು ಕ್ಯಾಮೆರಾದಲ್ಲಿ ದಾಖಲಾಗಿದೆ.
ಸಿಯಾಟಲ್ ಕಮ್ಯುನಿಟಿ ಪೊಲೀಸ್ ಕಮಿಷನ್ (CPC) ಸೋಮವಾರ ವೀಡಿಯೊ ಬಿಡುಗಡೆಯ ನಂತರ ಹೇಳಿಕೆ ನೀಡಿದ್ದು, ಆಡೆರೆರ್ ಮತ್ತು ಅವರ ಸಹೋದ್ಯೋಗಿ ನಡುವಿನ ಸಂಭಾಷಣೆಯನ್ನು ಆಘಾತಕಾರಿ ಸಂಭಾಷಣೆ ಎಂದು ಕರೆದಿದೆ.
ಏತನ್ಮಧ್ಯೆ, “ಪಾರದರ್ಶಕತೆ ದೃಷ್ಟಿಯಿಂದ ವೀಡಿಯೊವನ್ನು ಬಿಡುಗಡೆ ಮಾಡಿದ ಸಿಯಾಟಲ್ ಪೋಲೀಸ್ ಇಲಾಖೆಯು ಘಟನೆಯ ಕುರಿತು ಪೊಲೀಸ್ ಹೊಣೆಗಾರಿಕೆ ಕಚೇರಿಯು ತನ್ನ ತನಿಖೆಯನ್ನು ಮುಕ್ತಾಯಗೊಳಿಸುವವರೆಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವರಾದ ಜಾಹ್ನವಿ ಕಂದುಲಾ ಅವರು ಸೌತ್ ಲೇಕ್ ಯೂನಿಯನ್‌ನಲ್ಲಿ ಸಿಯಾಟಲ್ ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ