ಹೊನ್ನಾವರ : ಕಾಸರಕೋಡ ಕಡಲತೀರದಲ್ಲಿ ಸುಮಾರು 60 ಅಡಿ ಉದ್ದದ ಬೃಹತ್‌ ತಿಮಿಂಗಿಲದ ಕಳೆಬರ ಪತ್ತೆ, ವಾರದಲ್ಲಿ ಇದು ಎರಡನೇ ಘಟನೆ | ವೀಡಿಯೊ ವೀಕ್ಷಿಸಿ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕ ಪ್ರದೇಶದ ಅರಬ್ಬೀ ಸಮುದ್ರದ ತೀರದಲ್ಲಿ ಶನಿವಾರ ಬೆಳಿಗ್ಗೆ ಶನಿವಾರ ಭಾರೀ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ.
ಇದು ಸುಮಾರು ಮೂರು ವರ್ಷದ ಹೆಣ್ಣು ತಿಮಿಂಗಲ ಎಂದು ಹೇಳಲಾಗಿದೆ. ಹಾಗೂ 16ರಿಂದ 18 ಮೀಟರ್ ಉದ್ದವಿದೆ. ದೇಹದ ಭಾಗಗಳು ಕೊಳೆತು ಹೋಗಿದ್ದು, ಭಾರೀ ಗಾತ್ರ ಹೊಂದಿದೆ. ಶನಿವಾರ ಹೊನ್ನಾವರ ಮೀನುಗಾರ ಮುಖಂಡ ರಾಜು ತಾಂಡೇಲ ಹಾಗೂ ಇತರರು ಅದನ್ನು ನೋಡಿ, ಕಡಲ ವಿಜ್ಞಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಎಸಿಎಫ್ ಎಸ್.ಎಸ್.ನಿಂಗನಿ, ಆರ್.ಎಫ್.ಓ. ವಿಕ್ರಮ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದು ಸಹ ಬಲೀನ್‌ ಜಾತಿಯ ತಿಮಿಂಗಿಲವಾಗಿದೆ. ಅದರ ಸಮೀಪವೇ ಕೊಳೆತ ರೀತಿಯಲ್ಲಿ ಮತ್ತೊಂದು ಕಳೆಬರ ಪತ್ತೆಯಾಗಿದ್ದು, ಅದು ಮರಿ ತಿಮಿಂಗಿಲವಾಗಿರಬಹುದು ಎಂದು ಊಹಿಸಲಾಗಿತ್ತು. ಆದರೆ ತಿಮಿಂಗಿಲ ಪರೀಕ್ಷಿಸಿದ ವೈದ್ಯರು ಅದು ಈ ಬೃಹತ್‌ ತಿಮಿಂಗಿಲದ ಭಾಗವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಒಂದು ವಾರದ ಹಿಂದೆ ತಾಲೂಕಿನ ಗುಣವಂತೆ ಮುಗಳಿ ಸಮೀಪ ಕೊಳೆತ ರೀತಿಯಲ್ಲಿ ಇದೇ ರೀತಿಯ ಬಲೀನ್‌ ಜಾತಿಯ ಬೃಹತ್‌ ತಿಮಿಂಗಿಲದ ಮೃತದೇಹ ಪತ್ತೆಯಾಗಿತ್ತು. ಒಂದೇ ವಾರದಲ್ಲಿ ಬಲೀನ್ ಪ್ರಭೇದದ ತಿಮಿಂಗಿಲಗಳ ಮೃತದೇಹ ಪತ್ತೆಯಾಗಿದೆ. ತಿಮಿಂಗಿಲಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿಯ ಕಾಲದಲ್ಲಿ ಶೀತ ಸಮುದ್ರದಿಂದ ಸಮಶೀತೋಷ್ಣ ಸಮುದ್ರದ ತೀರಕ್ಕೆ ಬರುತ್ತವೆ. ಆದರೆ ಸಮುದ್ರದ ನೀರು ಇಳಿದಾಗ ವಾಪಸ್ ಹೋಗಲಾಗದೇ ಕೆಲವೊಮ್ಮೆ ಸಾವಿಗೀಡಾಗುತ್ತವೆ ಅಥವಾ ಹಡಗು ಡಿಕ್ಕಿ ಹೊಡೆದಿರುವ ಸಾಧ್ಯೆತಯೂ ಇರುತ್ತದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ನಟ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ ನಿಧನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement