ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾದ ಈ ವ್ಯಕ್ತಿ : ಈತನಿಗೆ ಮತ್ತಷ್ಟು ಮದುವೆಯಾಗುವ ಬಯಕೆ ಇದೆಯಂತೆ…!

ಉಗಾಂಡಾದಲ್ಲಿ ಉದ್ಯಮಿ ಸ್ಸಾಲೊಂಗೊ ಎನ್ಸಿಕೊನೆನ್ನೆ ಹಬೀಬ್ ಸೆಜ್ಜಿಗು ಎಂಬವರು ಒಂದೇ ದಿನ ಏಳು ಯುವತಿಯರನ್ನು ವಿವಾಹವಾಗುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಈ ಮದುವೆ ಸಮಾರಂಭವನ್ನು ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ಭಾನುವಾರ ಸೆಪ್ಟೆಂಬರ್ 10ರಂದು ನಡೆಸಲಾಯಿತು. ಮದುವೆಯಾದ ಏಳು ಯುವತಿಯರಲ್ಲಿ ಇಬ್ಬರು ಜೈವಿಕ ಸಹೋದರಿಯರು ಸೇರಿದ್ದಾರೆ. ಬೆಳಿಗ್ಗೆ ಸುಮಾರು 8 ಗಂಟೆಗೆ ಮದುವೆ ಕಾರ್ಯವು ಪ್ರಾರಂಭವಾಯಿತು. … Continued

ನಿಫಾ ಮುನ್ನೆಚ್ಚರಿಕೆ: ಕೇರಳಕ್ಕೆ ಅನಗತ್ಯ ಪ್ರವಾಸ ಬೇಡ ಎಂದ ಸರ್ಕಾರದ ಸುತ್ತೋಲೆ

ಬೆಂಗಳೂರು : ಕೇರಳದಲ್ಲಿ ನಿಫಾ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಕೇರಳದ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಾರ್ವಜನಿಕರು ಕೇರಳಕ್ಕೆ ಅನಗತ್ಯ ಪ್ರವಾಸ ಮಾಡಬೇಡಿ ಎಂದು ರಾಜ್ಯ ಸರ್ಕಾರ ಹೇಳಿದೆ. ಕೇರಳದಲ್ಲಿ ಈಗ ನಿಫಾ ವೈರಸ್ ಭೀತಿ ಹೆಚ್ಚಾಗಿದೆ.ಕೇರಳದಲ್ಲಿ ಸೋಂಕು ಕಾಣಿಸಿಕೊಂಡ ಕೋಯಿಕ್ಕೋಡ್‌ನ 7 ಗ್ರಾಮಗಳನ್ನು ಕ್ವಾರಂಟೈನ್ ಮಾಡಲಾಗಿದೆ. … Continued

ಮಳೆ ಕೊರತೆ : ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಸರ್ಕಾರದ ಅನುಮತಿ

ಬೆಳಗಾವಿ : ಜಿಲ್ಲೆಯ ಬೆಳಗಾವಿ ಹಾಗೂ ಖಾನಾಪುರ ತಾಲೂಕುಗಳನ್ನು ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲ ತಾಲೂಕುಗಳಲ್ಲಿ ಈ ಬಾರಿ ಮಳೆಯ ತೀವ್ರ ಅಭಾವ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಎರಡು ತಾಲೂಕುಗಳನ್ನು ಹೊರತುಪಡಿಸಿ ಉಳಿದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಮಳೆಯ ತೀವ್ರ ಅಭಾವ ಎದುರಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೋಡ … Continued

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ

ಹುಬ್ಬಳ್ಳಿ : ಗಣೇಶನ ಹಬ್ಬದ ನಿಮಿತ್ತ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಶುಕ್ರವಾರ ರಾತ್ರಿ ಈ ಕುರಿತು ಆದೇಶ ಮಾಡಿದರು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಎರಡು ದಿನದಿಂದ … Continued