ಏಷ್ಯಾ ಕಪ್ 2023 : W,0,W,W,4,W – ಶ್ರೀಲಂಕಾ ವಿರುದ್ಧ ಭಾರತದ ಮೊಹಮ್ಮದ್ ಸಿರಾಜ್ ಓವರಿಗೆ ಎಲ್ಲರೂ ದಿಗ್ಭ್ರಮೆ | ವೀಕ್ಷಿಸಿ

ಭಾನುವಾರ ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಸೇರಿದಂತೆ ಆರು ವಿಕೆಟ್‌ಗಳನ್ನು ಪಡೆದ ಮೊಹಮ್ಮದ್ ಸಿರಾಜ್ ನೆನಪಿಡುವ ಬೌಲಿಂಗ್‌ನಲ್ಲಿ ದಾಖಲೆ ಬರೆದರು.
ಪಂದ್ಯದ ನಾಲ್ಕನೇ ಓವರ್‌ನಲ್ಲಿ ಸಿರಾಜ್ ಕೇವಲ ನಾಲ್ಕು ರನ್‌ಗಳನ್ನು ಕೊಟ್ಟು ಶ್ರೀಲಂಕಾದ ನಾಲ್ಕು ವಿಕೆಟ್‌ಗಳನ್ನು ಪಡೆದರು. ಆದರೆ ಅವರು ಸ್ವಲ್ಪದರಲ್ಲೇ ಹ್ಯಾಟ್ರಿಕ್‌ನಿಂದ ವಂಚಿತರಾದರು.
ಅವರು ಪಾತುಮ್ ನಿಸ್ಸಾಂಕ ಅವರು ಸಿರಾಜ್‌ ಅವರಿಗೆ ಮೊದಲ ವಿಕೆಟ್‌ ಒಪ್ಪಿಸಿದರು. ರವೀಂದ್ರ ಜಡೇಜಾ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಅದ್ಭುತ ಕ್ಯಾಚ್ ಅನ್ನು ಹಿಡಿದರು. ನಂತರ ಬಂದ ಸದೀರ ಸಮರವಿಕ್ರಮ ಮುಂದಿನ ಎಸೆತದಲ್ಲಿ ಪಾರಾದರು. ಆದರೆ ಓವರ್‌ನ ಮೂರನೇ ಎಸೆತವು ಮಾರಕ ಇನ್-ಸ್ವಿಂಗ್ ಎಸೆತದಿಂದ ಎಲ್‌ಬಿಡಬ್ಲ್ಯು ಬಲೆಗೆ ಕೆಡಹವು ಮೂಲಕ ಓವರ್‌ನಲ್ಲಿ ತಮ್ಮ ಎರಡನೇ ವಿಕೆಟ್‌ ಪಡೆದರು.
ಚರಿತ್ ಅಸಲಂಕಾ ಕ್ರೀಸ್‌ನಲ್ಲಿ ಹೊಸ ಬ್ಯಾಟರ್ ಆಗಿದ್ದರು ಆದರೆ ಅವರು ಕವರ್‌ನಲ್ಲಿ ಕ್ಯಾಚ್‌ಗಾಗಿ ಚೆಂಡನ್ನು ನೇರವಾಗಿ ಇಶಾನ್ ಕಿಶನ್‌ಗೆ ನೀಡಿದರು. ನಂತರ ಧನಂಜಯ ಡಿ ಸಿಲ್ವಾ ಅವರು ಸಿರಾಜ್‌ ಅವರ ಹ್ಯಾಟ್ರಿಕ್ ಬಾಲ್‌ ಅನ್ನು ಎದುರಿಸಿದರು ಹಾಗೂ ಬೌಂಡರಿಗೆ ಅಟ್ಟಿದರು. ಆದರೆ ಸಿ ಮುಂದಿನ ಎಸೆತವು ವೈಡ್ ಔಟ್‌ಸ್ವಿಂಗರ್ ಆಗಿದ್ದು, ಬ್ಯಾಟರ್ ಸ್ಟಂಪ್‌ನ ಹಿಂದೆ ಕೆ.ಎಲ್. ರಾಹುಲ್‌ಗೆ ಸುಲಭ ಕ್ಯಾಚ್ ನೀಡುವ ಮೂಲಕ ಅವರ ಆಟ ಕೊನೆಗೊಂಡಿತು.
ಫೈನಲ್‌ ಪಂದ್ಯದಲ್ಲಿ ಸಿರಾಜ್ 21ಕ್ಕೆ 6 ವಿಕೆಟ್ ಪಡೆದು ಶ್ರೀಲಂಕಾವನ್ನು 50 ರನ್‌ಗಳಿಗೆ ಸೀಮಿತಗೊಳಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಭಾರೀ ಮೋಡ ಕವಿದ ವಾತಾವರಣದ ಹೊರತಾಗಿಯೂ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು ಮತ್ತು ನಿಗದಿತ ಸಮಯಕ್ಕಿಂತ 40 ನಿಮಿಷ ತಡವಾಗಿ ಪಂದ್ಯ ಪ್ರಾರಂಭವಾಯಿತು. ಆದರೆ ಸಿರಾಜ್‌ ಅವರ ಮಾರಕ ಬೌಲಿಂಗ್‌ ಲಂಕಾ ಕೇವಲ 15.2 ಓವರ್‌ಗಳಲ್ಲಿ ಸರ್ವಪತನ ಕಾಣಲು ಕಾರಣವಾಯಿತು. ಇದು ಭಾರತದ ವಿರುದ್ಧ ಶ್ರೀಲಂಕಾದ ಅತಿ ಕಡಿಮೆ ODI ಮೊತ್ತವಾಗಿದೆ.
ಏಕದಿನದ ಪಂದ್ಯದ ಇತಿಹಾಸದಲ್ಲಿ ಸಿರಾಜ್‌ ಒಂದು ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡರು. ಸಿರಾಜ್ ಬೌಲಿಂಗ್ ನ ಸೌಂದರ್ಯ ಕೇವಲ ಅಂಕಿಅಂಶಗಳನ್ನು ಮೀರಿತ್ತು. ಜಸ್ಪ್ರೀತ್ ಬುಮ್ರಾ ಅವರು ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಕುಸಾಲ್ ಪೆರೆರಾ ಅವರನ್ನು ಔಟ್‌ ಮಾಡಿದ ನಂತರ ಲಂಕಾದ ಪತನ ಆರಂಭವಾಯಿತು.

ಸಿರಾಜ್ 4ನೇ ಓವರ್‌ನಲ್ಲಿ 3.1, 3.3, 3.4 ಮತ್ತು 3.6 ಎಸೆತಗಳಲ್ಲಿ ಲಂಕಾದ ನಾಲ್ಕು ವಿಕೆಟ್‌ ಗಳನ್ನು ಪಡೆದರು. ಪಾತುಮ್ ನಿಸ್ಸಾಂಕ, ಸದೀರ ಸಮರಾಯಿವಿಕ್ರಮ, ಚರಿತ್ ಅಸಲಂಕ ಮತ್ತು ಧನಂಜಯ ಡಿ ಸಿಲ್ವ ಆಟಗಾರರು ಸಿರಾಜ್‌ ಮಾರಕ ಬೌಲಿಂಗ್‌ ಮುಂದೆ ನಿಲ್ಲದೆ ಹೋದರು.
ಸಿರಾಜ್ ತನ್ನ ಸ್ಪೆಲ್ ಮುಗಿಸಿದ ನಂತರ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಕಬಳಿಸುವ ಮೂಲಕ ಲಂಕಾ ಇನ್ನಿಂಗ್ಸ್‌ ಅಂತ್ಯಗೊಳಿಸಿದರು. ಲಂಕಾ 50 ರನ್‌ ಗಳಿಗೆ ಆಲೌಟ್‌ ಆಯಿತು. ಭಾರತವು ನಿಗದಿತ ಗುರಿಯನ್ನು ಕೇವಲ ೭.೧ನೇ ಓವರ್‌ನಲ್ಲಿ ತಲುಪಿತು ಹಾಗೂ ೮ನೇ ಬಾರಿಗೆ ಏಷ್ಯಾ ಕಪ್‌ ಕಿರೀಟ್‌ವನ್ನು ಮುಡಿಗೇರಿಸಿಕೊಂಡಿತು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement