ಡಜನ್ ಗಟ್ಟಲೆ ನಾಯಿಗಳ ಮೇಲೆ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡ ಖ್ಯಾತ ಮೊಸಳೆ ತಜ್ಞ

ಸಿಡ್ನಿ: ಬ್ರಿಟನ್‌ ಮೂಲದ ಖ್ಯಾತ ಮೊಸಳೆ ತಜ್ಞ ಆಡಮ್ ಬ್ರಿಟನ್ ಎಂಬಾತ ನಾಯಿಗಳ ಮೇಲೆ ಅತ್ಯಾಚಾರ ಎಸಗಿ ಅವುಗಳನ್ನು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಆಸ್ಟ್ರೇಲಿಯಾದಲ್ಲಿ 2022ರ ಏಪ್ರಿಲ್‌ನಲ್ಲಿ ಬಂಧಿತನಾಗಿದ್ದ ಬ್ರಿಟನ್, ತನ್ನ ವಿರುದ್ಧದ 60 ಆರೋಪಗಳಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಪ್ರಾಣಿಗಳ ನಿಂದನೆಗಾಗಿ ಏಪ್ರಿಲ್ 2022 ರಲ್ಲಿ ಬಂಧಿತನಾಗಿದ್ದ ಪ್ರಸಿದ್ಧ ಬ್ರಿಟಿಷ್ ಮೊಸಳೆ ತಜ್ಞ ಆಡಮ್ ಬ್ರಿಟನ್, ಮೃಗೀಯತೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ 60 ಆರೋಪಗಳನ್ನು ಒಪ್ಪಿಕೊಂಡಿದ್ದಾನೆ.
ಬಿಬಿಸಿ ವರದಿಯ ಪ್ರಕಾರ, ಬ್ರಿಟನ್ ಡಜನ್‌ಗಟ್ಟಲೆ ನಾಯಿಗಳನ್ನು ಸಾಯುವವರೆಗೂ ಹಿಂಸಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಮತ್ತು ಆಕ್ಟ್ ಅನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾನೆ. ಶ್ವಾನಗಳ ಮೇಲೆ ಅತ್ಯಾಚಾರ ಎಸಗುವ ವಿಡಿಯೋಗಳನ್ನು ಆತ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದ್ದಲ್ಲದೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವಿಡಿಯೋಗಳನ್ನು ಕೂಡ ಆನ್‌ಲೈನ್‌ನಿಂದ ಪಡೆದುಕೊಂಡು ವೀಕ್ಷಿಸಿದ್ದಾಗಿ ತಿಳಿಸಿದ್ದಾನೆ.

ಪ್ರಸಿದ್ಧ ಪ್ರಾಣಿ ವಿಜ್ಞಾನಿಯಾಗಿರುವ ಆಡಂ ಬ್ರಿಟನ್, ಬಿಬಿಸಿ ಮತ್ತು ನ್ಯಾಷನಲ್ ಜಿಯಾಗ್ರಫಿಕ್‌ನ ಸರಣಿಗಳಲ್ಲಿ ಸಹ ಕೆಲಸ ಮಾಡಿದ್ದಾನೆ. ಒಟ್ಟಾರೆ 60 ಪ್ರಕರಣಗಳಲ್ಲಿ ಈತ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಸ್ವಂತ ಜಾಗದಲ್ಲಿ ಶಿಪ್ಪಿಂಗ್ ಕಂಟೇನರ್ ಒಂದನ್ನು ನಿಲ್ಲಿಸಿದ್ದ ಈತ, ಈ ಕಂಟೇನರ್ ಒಳಗೆ ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅದರಲ್ಲಿ ಆತ ರೆಕಾರ್ಡಿಂಗ್ ಸಾಧನ ಅಳವಡಿಸಿದ್ದ. ಅದಕ್ಕೆ ‘ಟಾರ್ಚರ್ ರೂಂ’ ಎಂದು ಕರೆಯುತ್ತಿದ್ದನಂತೆ.
8 ತಿಂಗಳಲ್ಲಿ ಆತ 42 ನಾಯಿಗಳ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಹಾಗೂ ಅವುಗಳಲ್ಲಿ 39 ಮೃತಪಟ್ಟಿವೆ. ಸೋಮವಾರ ವಿಚಾರಣೆ ವೇಳೆ ನಾರ್ದರ್ನ್ ಟೆರಿಟರಿ ಸುಪ್ರೀಂಕೋರ್ಟ್, ಆಡಂ ಬಿಟನ್‌ನ ಅಪರಾಧಗಳು ಪ್ರಕಟಿಸುವುದಕ್ಕೆ ಸೂಕ್ಷ್ಮ ವಿಷಯವಾಗಿರುವುದರಿಂದ ಜನರಿಗೆ ಹೊರ ಹೋಗುವಂತೆ ಸೂಚಿಸಿತ್ತು. ಪ್ರಕರಣದ ಕೆಲವು ಸಂಗತಿಗಳು ಜನರಲ್ಲಿ ಆಘಾತ ಉಂಟುಮಾಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಮೈಕಲ್ ಗ್ರ್ಯಾಂಟ್ ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   1,000 ವರ್ಷದ ಹಿಂದಿನ 154 ಅಡಿ ಎತ್ತರದ 'ಒಲವಿನ ಗೋಪುರ' ಕುಸಿತದ ಭೀತಿಯಲ್ಲಿ : ಇಟಲಿ ನಗರದಲ್ಲಿ ಹೈ ಅಲರ್ಟ್‌

ಕನಿಷ್ಠ 2014ರಿಂದ ಈತ ಪ್ರಾಣಿಗಳ ಕಡೆಗೆ ‘ಹಿಂಸಾತ್ಮಕ ಲೈಂಗಿಕ ಆಸಕ್ತಿ’ ಹೊಂದಿದ್ದ ಎಂದು ಪ್ರಾಸಿಕ್ಯೂಟರ್ ಆರೋಪಿಸಿದೆ. ತನ್ನದೇ ಸಾಕು ನಾಯಿಗಳನ್ನು ಶೋಷಿಸಿದ ನಂತರ, ಬೇರೆ ನಾಯಿಗಳ ಮಾಲೀಕರಿಂದಲೂ ಆತ ಸಾಕು ನಾಯಿಗಳನ್ನು ತರುತ್ತಿದ್ದ. ಪ್ರಯಾಣ ಅಥವಾ ಕೆಲಸದ ಒತ್ತಡಗಳ ಕಾರಣ ತಮ್ಮ ನಾಯಿಗಳನ್ನು ಬಿಟ್ಟುಹೋಗಲು ಸಿದ್ಧರಿರುವ ಮಾಲೀಕರನ್ನು ಆತ ಆನ್‌ಲೈನಲ್ಲಿ ಹುಡುಕುತ್ತಿದ್ದ. ನಂತರ ಅವರನ್ನು ಸಂಪರ್ಕಿಸಿ ತನ್ನ ಬಳಿ ಸಾಕು ಪ್ರಾಣಿಗಳನ್ನು ಬಿಟ್ಟುಹೋಗುವಂತೆ ಮಾಡಲು ಅವರು ನಂಬುವಂತಾಗಲು ಅವರ ಜತೆ ಉತ್ತಮ ಬಾಂಧವ್ಯ ಬೆಳೆಸುತ್ತಿದ್ದ. ಈತ ಪ್ರಸಿದ್ಧ ಮೊಸಳೆ ತಜ್ಞನಾಗಿರುವುದರಿಂದ ಜನರು ಸುಲಭವಾಗಿ ಈತನನ್ನು ನಂಬುತ್ತಿದ್ದರು.

ಈ ಮಾಲಿಕರು ತಮ್ಮ ನಾಯಿಗಳ ಬಗ್ಗೆ ವಿಚಾರಿಸಿಕೊಂಡು ಅವರು ಬಂದಾಗ, ಅವರಿಗೆ ಹಳೆಯ ಫೋಟೋ ತೋರಿಸಿ ಕಟ್ಟು ಕಥೆಗಳನ್ನು ಹೇಳಿ ಅವರನ್ನು ನಂಬಿಸಿ ಸಾಗಹಾಕುತ್ತಿದ್ದ. ಬ್ರಿಟಿಷ್ ಮೂಲದವನಾದರೂ ಆತ, ಮೊಸಳೆಗಳ ಕುರಿತು ಅಧ್ಯಯನ ನಡೆಸಲು 20ಕ್ಕೂ ಹೆಚ್ಚು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದ.
ಚಾರ್ಲ್ಸ್ ಡಾರ್ವಿನ್ ವಿವಿಯಲ್ಲಿ ಅಕಾಡೆಮಿಕ್ ಹುದ್ದೆ ಹೊಂದಿರುವ ಈತ, ಪ್ರಾಣಿ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡಿದ್ದಾನೆ. ಆತ ಪ್ರಾಣಿಗಳಿಗೆ ಲೈಂಗಿಕ ದೌರ್ಜನ್ಯ ಎಸಗುವ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಪೊಲೀಸರ ಗಮನಕ್ಕೆ ಬಂದ ನಂತರ ಆತನ ವಿಚಾರಣೆ ನಡೆಸಿ ಬಂಧಿಸಿದ ಬಳಿಕ, ಆತ ಹಲವಾರು ವರ್ಷಗಳಿಂದ ಎಸಗುತ್ತಿದ್ದ ಕ್ರೌರ್ಯ ಬೆಳಕಿಗೆ ಬಂದಿದೆ. ಡಿಸೆಂಬರ್‌ನಲ್ಲಿ ಆತನ ವಿರುದ್ಧದ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ಫಿಲಿಪೈನ್ಸ್‌ನಲ್ಲಿ 7.5 ತೀವ್ರತೆ ಭೂಕಂಪದ ನಂತರ ಸುನಾಮಿ ಅಪ್ಪಳಿಸುವ ಎಚ್ಚರಿಕೆ

 

 

4 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement