ಕರಾಚಿ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಮೋಸ್ಟ್ ವಾಂಟೆಡ್ ನಾಯಕರಲ್ಲಿ ಒಬ್ಬರಾದ ಮುಫ್ತಿ ಕೈಸರ್ ಫಾರೂಕ್ ಎಂಬಾತನನ್ನು ಕರಾಚಿಯಲ್ಲಿ “ಅಪರಿಚಿತ ವ್ಯಕ್ತಿಗಳು” ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ.
ಕೈಸರ್ ಫಾರೂಕ್ ಎಲ್‌ಇಟಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬ ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ನಿಕಟವರ್ತಿ ಎಂದು ಹೇಳಲಾಗಿದೆ.
ಪಾಕಿಸ್ತಾನದ ಡಾನ್ ಪತ್ರಿಕೆಯು, ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ, ಶನಿವಾರ ಸಮನಾಬಾದ್ ಪ್ರದೇಶದ ಧಾರ್ಮಿಕ ಸಂಸ್ಥೆಯೊಂದರ ಬಳಿ ನಡೆದ “ಉದ್ದೇಶಿತ ದಾಳಿ”ಯಲ್ಲಿ 30 ವರ್ಷದ ಕೈಸರ್ ಫಾರೂಕ್‌ಗೆ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ವರದಿ ಮಾಡಿದೆ. ಬೆನ್ನಿಗೆ ಗುಂಡು ತಗುಲಿದ್ದ ಫಾರೂಕ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ. ದಾಳಿಯಲ್ಲಿ 10 ವರ್ಷದ ಬಾಲಕನೂ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ಫಾರೂಕ್ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಸ್ವತಂತ್ರವಾಗಿ ಈ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ