ಇಸ್ರೇಲ್‌ ಮೇಲೆ ಹಮಾಸ್‌ ದಾಳಿಯಲ್ಲಿ 100 ಜನರು ಸಾವು, 740ಕ್ಕೂ ಹೆಚ್ಚು ಜನರಿಗೆ ಗಾಯ : ಇಸ್ರೇಲ್‌ ಪ್ರತಿದಾಳಿ, ಗಾಜಾದಲ್ಲಿ 198 ಮಂದಿ ಸಾವು, 1,610 ಮಂದಿಗೆ ಗಾಯ

ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್ ಉಗ್ರಗಾಮಿ ಗುಂಪು ಶನಿವಾರ ಬೆಳಗಿನ ಜಾವದಲ್ಲಿ ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿತು. ಗಾಜಾ ಪ್ರದೇಶದಿಂದ ಇಸ್ರೇಲ್‌ ಮೇಲೆ ಸಾವಿರಾರು ರಾಕೆಟ್‌ಗಳನ್ನು ಹಾರಿಸಿದರು. ಶನಿವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಕನಿಷ್ಠ 100 ಜನರು ಸಾವಿಗೀಡಾಗಿದ್ದಾರೆ ಮತ್ತು 740 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಏತನ್ಮಧ್ಯೆ, ಹಮಾಸ್ ದಾಳಿಯ ನಂತರ ಇಸ್ರೇಲ್‌ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಗಾಜಾದಲ್ಲಿ ಕನಿಷ್ಠ 198 ಮಂದಿ ಸಾವಿಗೀಡಾಗಿದ್ದಾರೆ, 1,610 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಎಪಿ ವರದಿ ಮಾಡಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಯುದ್ಧ ಘೋಷಣೆಯ ನಂತರ ಗಾಜಾದ ಮೇಲೆ ಇಸ್ರೇಲ್ ನಡೆಸಿದ ಪ್ರತೀಕಾರದ ದಾಳಿಗಳನ್ನು ನಡೆಸಿದವು. ಹಮಾಸ್ ಗುಂಪಿನ ಅನಿರೀಕ್ಷಿತ ರಾಕೆಟ್ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯಲ್ಲಿ ತಮ್ಮ ಗುರಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು.

ಕನಿಷ್ಠ 2,500 ರಾಕೆಟ್‌ಗಳನ್ನು ಇಸ್ರೇಲ್‌ಗೆ ಹಾರಿಸಲಾಗಿದೆ ಮತ್ತು ಶಸ್ತ್ರಸಜ್ಜಿತ ಬಂದೂಕುಧಾರಿಗಳು ಗಾಜಾದೊಂದಿಗಿನ ಇಸ್ರೇಲ್‌ನ ಪರಿಧಿಯ ಉದ್ದಕ್ಕೂ ಹಲವಾರು ಸ್ಥಳಗಳಲ್ಲಿ ಗಡಿ ಬೇಲಿಯನ್ನು ದಾಟಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇಸ್ರೇಲಿ ಮಿಲಿಟರಿ ವಕ್ತಾರರ ಪ್ರಕಾರ, ಶನಿವಾರ ಬೆಳಿಗ್ಗೆ ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಕನಿಷ್ಠ ಏಳು ಇಸ್ರೇಲಿ ಸಮುದಾಯಗಳು ಮತ್ತು ಸೇನಾ ನೆಲೆಗಳಿಗೆ ನುಸುಳಿದ್ದಾರೆ. ಉಗ್ರರು ಸ್ಡೆರೋಟ್ ನಗರವನ್ನು ತಲುಪಿದ್ದಾರೆ ಎಂದು ಅವರು ಹೇಳಿದರು

ಪ್ರಮುಖ ಸುದ್ದಿ :-   ಬಾಂಗ್ಲಾದೇಶ Vs ನ್ಯೂಜಿಲೆಂಡ್ ಟೆಸ್ಟ್ : ಬಾಲ್‌ ಸ್ಟಂಪಿಗೆ ಬಡಿಯದಂತೆ ತಡೆಯಲು ಚೆಂಡನ್ನು ಕೈಯಲ್ಲಿ ಹಿಡಿದು ಔಟಾದ ಬಾಂಗ್ಲಾದೇಶದ ಬ್ಯಾಟರ್ | ವೀಕ್ಷಿಸಿ

. ಗಾಜಾದೊಂದಿಗಿನ ಇಸ್ರೇಲ್‌ನ ಗಡಿಯುದ್ದಕ್ಕೂ ವಾರಗಳ ಉದ್ವಿಗ್ನತೆ ಮತ್ತು ಇಸ್ರೇಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಭಾರೀ ಹೋರಾಟದ ನಂತರ ಈ ದಾಳಿ ನಡೆದಿದೆ. ಗಾಜಾ ಪಟ್ಟಿಯಿಂದ ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಒಳನುಸುಳಿದ್ದಾರೆ ಎಂದು ಇಸ್ರೇಲ್ ಹೇಳಿದೆ, ನಿವಾಸಿಗಳು ಮನೆಯೊಳಗೆ ಇರಲು ಸೂಚಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ದೇಶವು ಯುದ್ಧದಲ್ಲಿದೆ ಮತ್ತು ಹಮಾಸ್ ಭಾರೀ ಬೆಲೆ ತೆರಲಿದೆ ಎಂದು ಹೇಳಿದ್ದಾರೆ. “ಇಸ್ರೇಲ್ ನಾಗರಿಕರೇ, ನಾವು ಯುದ್ಧದಲ್ಲಿದ್ದೇವೆ. ಇದು ಕಾರ್ಯಾಚರಣೆಯಲ್ಲ, – ಇದು ಯುದ್ಧ. ಮತ್ತು ನಾವು ಗೆಲ್ಲುತ್ತೇವೆ ಎಂದು ಅವರು ವೀಡಿಯೊ ಸಂದೇಶದಲ್ಲಿ ಹೇಳಿದರು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement