ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ವೀಡಿಯೊ…| ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದ ಮೇಲೆ ಬಾಂಬ್‌ ದಾಳಿ : ಅದನ್ನು ಹಮಾಸ್ ತರಬೇತಿ ಶಿಬಿರವಾಗಿ ಬಳಸತ್ತಿತ್ತು ಎಂದ ಇಸ್ರೇಲ್‌

ಗಾಜಾದಲ್ಲಿರುವ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಮೇಲೆ ಬಾಂಬ್‌ ದಾಳಿ ನಡೆಸಿದ ಇಸ್ರೇಲಿ ರಕ್ಷಣಾ ಪಡೆಗಳು (IDF) ಅದನ್ನು ಧೂಳಿನ ಮಟ್ಟಕ್ಕೆ ಇಳಿಸಿದೆ ಎಂದು ಹೇಳಲಾಗಿದೆ. ಅದನ್ನು ” ಹಮಾಸ್‌ ಮಿಲಿಟರಿ ಗುಪ್ತಚರ ಕಾರ್ಯಕರ್ತರಿಗೆ ತರಬೇತಿ ಶಿಬಿರವಾಗಿ ಬಳಸುತ್ತಿದ್ದಾರೆ” ಎಂದು ಇಸ್ರೇಲ್‌ ಹೇಳಿದೆ.
ಸ್ವಲ್ಪ ಸಮಯದ ಹಿಂದೆ, IDF ಫೈಟರ್ ಜೆಟ್‌ಗಳು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಯ ಪ್ರಮುಖ ಕಾರ್ಯಾಚರಣೆ ಮತ್ತು ಮಿಲಿಟರಿ ಕೇಂದ್ರವಾಗಿದ್ದ ಇಸ್ಲಾಮಿಕ್ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿದೆ ಎಂದು ಐಡಿಎಫ್‌ (IDF) ಬಿಡಗಡೆ ಹೇಳಿದೆ.
ತನ್ನ ಕಾರ್ಯಾಚರಣೆಗಳಿಗೆ ಹಣವನ್ನು ಸಂಗ್ರಹಿಸಲು ಸಮ್ಮೇಳನಗಳನ್ನು ಆಯೋಜಿಸುವುದರ ಜೊತೆಗೆ, ಶಸ್ತ್ರಾಸ್ತ್ರಗಳ ಸಂಶೋಧನೆ ಮತ್ತು ತಯಾರಿಕೆಗೆ ಇಸ್ಲಾಮಿಕ್ ವಿಶ್ವವಿದ್ಯಾಲಯದ ಸೌಲಭ್ಯವನ್ನು ಬಳಸಿಕೊಳ್ಳಲಾಗಿದೆ ಎಂದು ಅದು ಹೇಳಿಕೊಂಡಿದೆ.

ವಿಶ್ವವಿದ್ಯಾನಿಲಯವು ಹಮಾಸ್‌ನ ಹಿರಿಯ ನಾಯಕತ್ವದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಇಸ್ರೇಲ್ ಗಾಜಾ ಪಟ್ಟಿಯಲ್ಲಿ ರಾತ್ರೋರಾತ್ರಿ ನೂರಾರು ವೈಮಾನಿಕ ಬಾಂಬ್ ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಕನಿಷ್ಠ 30 ಸಾವುಗಳು ಮತ್ತು ನೂರಾರು ಗಾಯಗಳು ಸಂಭವಿಸಿವೆ ಎಂದು ಹಮಾಸ್ ಆಡಳಿತದ ವಕ್ತಾರರು ಬುಧವಾರ AFP ಗೆ ತಿಳಿಸಿದ್ದಾರೆ.
ಸರ್ಕಾರದ ಸಂವಹನ ಕಚೇರಿಯ ಮುಖ್ಯಸ್ಥ ಸಲಾಮಾ ಮಾರೂಫ್ ಪ್ರಕಾರ, ಡಜನ್ಗಟ್ಟಲೆ ಮನೆಗಳು, ಕಾರ್ಖಾನೆಗಳು, ಮಸೀದಿಗಳು ಮತ್ತು ಅಂಗಡಿಗಳು ಹಾನಿಗೊಳಗಾಗಿವೆ. ಹಮಾಸ್‌ನ ಹಲವಾರು ಸ್ಥಳಗಳ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಸೇನೆ ಒಪ್ಪಿಕೊಂಡಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಪ್ರತೀಕಾರವಾಗಿ ಇರಾನ್​ನಿಂದ ಇಸ್ರೇಲ್​ ಮೇಲೆ 200 ಡ್ರೋನ್-ಕ್ಷಿಪಣಿಗಳಿಂದ ದಾಳಿ : ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ

ಶಸ್ತ್ರಸಜ್ಜಿತ ವಿಮಾನಗಳನ್ನು ಪತ್ತೆಹಚ್ಚಲು ಹಮಾಸ್ ಬಳಸುತ್ತಿದ್ದ “ಸುಧಾರಿತ ಪತ್ತೆ ವ್ಯವಸ್ಥೆಗಳು” ಇಸ್ರೇಲಿನ ಫೈಟರ್ ಜೆಟ್‌ಗಳಿಂದ ನಾಶವಾಯಿತು ಎಂದು ಅದು ಹೇಳಿಕೊಂಡಿದೆ.
ಅಲ್ಲದೆ, ಇಸ್ರೇಲ್‌ ಮಿಲಿಟರಿ ಪ್ರಕಾರ, ʼಹಮಾಸ್‌ ಭಯೋತ್ಪಾದನೆಗೆ ನಿಧಿʼ ಗೆ ಬಳಸುತ್ತಿದ್ದ ಎರಡು ಬ್ಯಾಂಕ್ ಶಾಖೆಗಳನ್ನು ಒಳಗೊಂಡಂತೆ ಉತ್ತರ ಗಾಜಾ ಪಟ್ಟಿಯ ಬೀಟ್ ಹನೌನ್ ಪ್ರದೇಶದಲ್ಲಿ 80 ಹಮಾಸ್ ಸ್ಥಳಗಳ ಮೇಲೆ ದಾಳಿ ಮಾಡಿದೆ.
ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಜಿಹಾದ್‌ನ ಕಾರ್ಯಾಚರಣಾ ಕಮಾಂಡ್ ಸೆಂಟರ್ ಮತ್ತು ಶಸ್ತ್ರಾಸ್ತ್ರ ಸಂಗ್ರಹ ತಾಣದ ಮೇಲೆಯೂ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಪ್ರತೀಕಾರವಾಗಿ ಇರಾನ್​ನಿಂದ ಇಸ್ರೇಲ್​ ಮೇಲೆ 200 ಡ್ರೋನ್-ಕ್ಷಿಪಣಿಗಳಿಂದ ದಾಳಿ : ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement