ನಮ್ಮ ಭೂ ಸೈನ್ಯದಿಂದ ಗಾಜಾದ ಮೇಲೆ ದಾಳಿ ಆರಂಭ : ಇಸ್ರೇಲಿ ಸೇನೆ

ಜೆರುಸಲೇಂ: ಜನನಿಬಿಡ ಪ್ಯಾಲೆಸ್ತೀನ್ ಪ್ರದೇಶದ ಮೇಲೆ ನಿರೀಕ್ಷಿತ ಭೂ ಆಕ್ರಮಣಕ್ಕಿಂತ ಮುಂಚಿತವಾಗಿ ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ಭೂ ಸೈನ್ಯ ಗಾಜಾದ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್‌ ಮಿಲಿಟರಿ ಶುಕ್ರವಾರ ತಿಳಿಸಿದೆ.
“ಕಳೆದ 24 ಗಂಟೆಗಳಲ್ಲಿ, IDF (ಇಸ್ರೇಲಿ ಮಿಲಿಟರಿ) ಪಡೆಗಳು ಭಯೋತ್ಪಾದಕರು ಮತ್ತು ಶಸ್ತ್ರಾಸ್ತ್ರಗಳ ಪ್ರದೇಶ ನಾಶಗೊಳಿಸುವ ಪ್ರಯತ್ನ ಪೂರ್ಣಗೊಳಿಸಲು ಗಾಜಾ ಪಟ್ಟಿಯ ಪ್ರದೇಶದೊಳಗೆ ಸ್ಥಳೀಯವಾಗಿ ದಾಳಿಗಳನ್ನು ನಡೆಸಿತು” ಎಂದು ಸೇನೆಯ ಹೇಳಿಕೆ ತಿಳಿಸಿದೆ.
“ಈ ಕಾರ್ಯಾಚರಣೆಗಳ ಸಮಯದಲ್ಲಿ, ಕಾಣೆಯಾದ ಇಸ್ರೇಲಿ ವ್ಯಕ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನವೂ ಇತ್ತು ಎಂದು ಅದು ತಿಳಿಸಿದೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ರಾಕೆಟ್‌ಗಳಿಂದ ಪ್ರತಿಯಾಗಿ ಗುಂಡು ಹಾರಿಸುವುದರೊಂದಿಗೆ ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ನಿರಂತರ ವೈಮಾನಿಕ ದಾಳಿಗಳು ನಡೆದವು.
ಹಮಾಸ್ ಉಗ್ರಗಾಮಿಗಳು ಇಸ್ರೇಲ್‌ನಲ್ಲಿ ಸಮುದಾಯಗಳ ಮೇಲೆ ದಾಳಿ ಮಾಡಿ 1,300 ಕ್ಕೂ ಹೆಚ್ಚು ಜನರನ್ನು ಕೊಂದ ನಂತರ ಕಳೆದ ಶನಿವಾರ ಹಮಾಸ್‌ ಮತ್ತು ಇಸ್ರೇಲ್‌ ನಡುವೆ ಯುದ್ಧ ಪ್ರಾರಂಭವಾಯಿತು. ಮೃತಪಟ್ಟವರಲ್ಲಿ ಅವರಲ್ಲಿ ಹೆಚ್ಚಿನವರು ನಾಗರಿಕರು.

ಹಮಾಸ್‌ ಗುಂಪಿನಿಂದ ಅಂದಾಜು 150 ಇಸ್ರೇಲಿಗಳು-ವಿದೇಶಿಯರ ಅಪಹರಣ
ಇಸ್ರೇಲಿ ಸೇನೆಯು ಹೆಚ್ಚಿನ ವಿವರಗಳನ್ನು ನೀಡದೆ, ಗಾಜಾದ ಮೇಲಿನ ದಾಳಿಯ ಸಮಯದಲ್ಲಿ ಪಡೆಗಳು ” ಹಮಾಸ್‌ ಇರಿಸಿಕೊಂಡಿರುವ ಒತ್ತೆಯಾಳುಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಸಹಾಯ ಮಾಡುವ ಅನೇಕ ಪುರಾವೆಗಳನ್ನು ಸಂಗ್ರಹಿಸಿದೆ” ಎಂದು ಹೇಳಿದೆ.
“ಇಸ್ರೇಲಿ ಪ್ರದೇಶದ ಕಡೆಗೆ ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ಹಾರಿಸಿದ ಹಮಾಸ್ ಘಟಕ ಸೇರಿದಂತೆ ಸೈನಿಕರು ಆ ಪ್ರದೇಶದಲ್ಲಿ ನೆಲೆಗೊಂಡಿರುವ ಭಯೋತ್ಪಾದಕ ಘಟಕಗಳು ಮತ್ತು ಮೂಲಸೌಕರ್ಯಗಳನ್ನು ನಾಶಗೊಳಿಸಿದರು ಎಂದು ಹೇಳಿಕೆ ತಿಳಿಸಿದೆ.
ಗಾಜಾದ ಮೇಲಿನ ಪ್ರತೀಕಾರದ ದಾಳಿಗಳು ಸುಮಾರು 1,800 ಜನರನ್ನು ಕೊಂದಿವೆ ಮತ್ತು ಅಲ್ಲಿನ ಜನರ ಸಾಮೂಹಿಕ ಸ್ಥಳಾಂತರಕ್ಕೆ ಕಾರಣವಾಗಿವೆ. ನಿರೀಕ್ಷಿತ ಭೂ ಆಕ್ರಮಣಕ್ಕೆ ಮುಂಚಿತವಾಗಿ ಶುಕ್ರವಾರ ಇಸ್ರೇಲ್ ಉತ್ತರ ಗಾಜಾದ 11 ಲಕ್ಷ ನಿವಾಸಿಗಳಿಗೆ ತಮ್ಮ ಸ್ಥಳ ತೊರೆಯುವಂತೆ ಸೂಚಿಸಿದೆ. ವಿಶ್ವಸಂಸ್ಥೆಯು ಈ ಕ್ರಮವನ್ನು ಖಂಡಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement