ವೀಡಿಯೊ…: ಇಸ್ರೇಲ್ ಸಂಗೀತೋತ್ಸವದಲ್ಲಿದ್ದ ಯಾರೂ ಜೀವಂತ ಇರಬಾರದೆಂದು ಶೌಚಾಲಯಗಳಿಗೂ ನಿರಂತರವಾಗಿ ಗುಂಡು ಹಾರಿಸಿದ ಹಮಾಸ್ ಗನ್‌ಮ್ಯಾನ್

ಗಾಜಾದ ಮೇಲೆ ಆಕ್ರಮಣದ ಬೆದರಿಕೆ ತೂಗಾಡುತ್ತಿರುವಾಗಲೇ, ಇಸ್ರೇಲಿ ಸೇನೆಯು ಕಳೆದ ಶನಿವಾರ ವೀಡಿಯೊ ಬಿಡುಗಡೆ ಮಾಡಿದ್ದು, ಇದು ಇಸ್ರೇಲ್‌ನಲ್ಲಿ ನೋವಾ ಸಂಗೀತ ಉತ್ಸವದ ಮೇಲೆ ನಡೆದ ಹಮಾಸ್‌ ಮಾರಣಾಂತಿಕ ದಾಳಿಯನ್ನು ತೋರಿಸುತ್ತದೆ, ಇದರಲ್ಲಿ 260 ಜನರು ಸಾವಿಗೀಡಾದರು. ಮತ್ತು ಹಮಾಸ್‌ ಅನೇಕರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡರು.
ವೀಡಿಯೊ, ಸ್ಪಷ್ಟವಾಗಿ ಹಮಾಸ್ ಕಾರ್ಯಕರ್ತನಿಂದ ಚಿತ್ರೀಕರಿಸಲ್ಪಟ್ಟಿದೆ, ಆತ ಮತ್ತು ಇತರ ಇಬ್ಬರು ಬಂದೂಕುಧಾರಿಗಳನ್ನು ಗಾಜಾ ಗಡಿಗೆ ಹತ್ತಿರವಿರುವ ಕಿಬ್ಬುಟ್ಜ್ ರೀಮ್‌ನ ಹೊರಗಿನ ಹೊಲಗಳಲ್ಲಿ ಹಬ್ಬದ ಸ್ಥಳದಲ್ಲಿ ಪೋರ್ಟಬಲ್ ಶೌಚಾಲಯಗಳ ಸರಣಿಯ ಬಳಿ ತೋರಿಸಲಾಗಿದೆ.

ವೀಡಿಯೊ ಶೂಟ್ ಮಾಡಿದ ಬಂದೂಕುಧಾರಿ ಪ್ರತಿ ಶೌಚಾಲಯಕ್ಕೆ ಒಂದರ ನಂತರ ಒಂದರಂತೆ ಗುರಿಯಿಟ್ಟು ಗುಂಡು ಹಾರಿಸುವುದು ಕಂಡುಬರುತ್ತದೆ, ಬಲದಿಂದ ಎಡಕ್ಕೆ ಹೋಗುವಾಗ, ಬಂದೂಕುಧಾರಿ ಒಂಬತ್ತು ಮೊಬೈಲ್‌ ಶೌಚಾಲಯಗಳಿಗೆ ಕನಿಷ್ಠ ಒಂದು ಬುಲೆಟ್ ಅನ್ನು ಹಾರಿಸುತ್ತಾನೆ.
ವೀಡಿಯೊವನ್ನು ಪೋಸ್ಟ್ ಮಾಡಿದ ಇಸ್ರೇಲ್ ರಕ್ಷಣಾ ಪಡೆಗಳು, ಹಮಾಸ್ ತಾವು ಯಾರನ್ನು ಕೊಲ್ಲುತ್ತೇವೆ ಎಂಬುದರ ಬಗ್ಗೆಯೂ ನೋಡುವುದಿಲ್ಲ ಎಂದು ತೋರಿಸುತ್ತದೆ ಎಂದು ಹೇಳಿವೆ
ಅಕ್ಟೋಬರ್ 7 ರಂದು ಹಮಾಸ್‌ಗಳು 5,000 ರಾಕೆಟ್‌ಗಳನ್ನು ಇಸ್ರೇಲ್‌ ಮೇಲೆ ಹಾರಿಸಿದ್ದಾರೆ. ಅಲ್-ಅಕ್ಸಾ ಫ್ಲಡ್‌ ಎಂದು ಕರೆಯುವ ಕಾರ್ಯಾಚರಣೆಯ ಭಾಗವಾಗಿ ಸಮುದ್ರ ದಾಳಿಯನ್ನೂ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ಗಾಜಾ ನಗರದಲ್ಲಿನ ಗುಂಪಿನ “ವೈಮಾನಿಕ ಕಾರ್ಯಾಚರಣೆಗಳ” ಮುಖ್ಯಸ್ಥರಾಗಿದ್ದ ಹಿರಿಯ ಹಮಾಸ್ ಕಮಾಂಡರ್ ಕೊಲ್ಲಲ್ಪಟ್ಟರು ಎಂದು ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ತಿಳಿಸಿವೆ. ಇಸ್ರೇಲಿ ಫೈಟರ್ ಜೆಟ್‌ಗಳು ಹಮಾಸ್ ಕಾರ್ಯಾಚರಣೆ ಕೇಂದ್ರದ ಮೇಲೆ ನಡೆಸಿದ ದಾಳಿಯಲ್ಲಿ ಮುರಾದ್ ಅಬು ಮುರಾದ್ ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ.
ಶುಕ್ರವಾರ ಗಾಜಾದ 10 ಲಕ್ಷ ಜನರಿಗೆ ದಕ್ಷಿಣಕ್ಕೆ ತೆರಳಲು ಆದೇಶಿಸಿದ ನಂತರ ಇಸ್ರೇಲ್ ಗಾಜಾದಲ್ಲಿ “ಸ್ಥಳೀಯ ದಾಳಿ” ನಡೆಸಿದೆ. ಗಾಜಾ ಗಡಿಯಲ್ಲಿ
ಭಾನುವಾರ ಎಂಟನೇ ದಿನಕ್ಕೆ ಕಾಲಿಟ್ಟ ಸಂಘರ್ಷದಲ್ಲಿ ಕನಿಷ್ಠ 3,700 ಜನರು ಸಾವಿಗೀಡಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement