ಗಾಜಾ ಆಸ್ಪತ್ರೆಯಲ್ಲಿನ ಸ್ಫೋಟದಲ್ಲಿ 500 ಜನರು ಸಾವು : ಘಟನೆಗೆ ಇಸ್ರೇಲ್-ಹಮಾಸ್ ಆರೋಪ-ಪ್ರತ್ಯಾರೋಪ

ಖಾನ್ ಯೂನಿಸ್ (ಗಾಜಾ ಪಟ್ಟಿ) : ಮಂಗಳವಾರ ಗಾಜಾ ಆಸ್ಪತ್ರೆಯಲ್ಲಿ ನಡೆದ ಸ್ಫೋಟದಲ್ಲಿ ಸುಮಾರು 500 ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದಾರೆ. ಪ್ಯಾಲೆಸ್ತೀನಿಯನ್ ಆರೋಗ್ಯ ಅಧಿಕಾರಿಗಳು ಇದು ಇಸ್ರೇಲಿ ವೈಮಾನಿಕ ದಾಳಿಯಿಂದ ಸಂಭವಿಸಿದೆ ಎಂದು ಆರೋಪಿಸಿದೆ. ಆದರೆ ಇಸ್ರೇಲಿ ಮಿಲಿಟರಿ ಪ್ಯಾಲೇಸ್ತೀನಿಯನ್ ಉಗ್ರಗಾಮಿ ಗುಂಪು ಹಾರಿಸಿದ ರಾಕೆಟ್‌ ವಿಫಲವಾಗಿ ಅದು ಆಸ್ಪತ್ರೆ ಮೇಲೆ ಬಿದ್ದು ಈ ಘಟನೆ ಸಂಭವಿಸಿದೆ ಎಂದು ಹೇಳಿದೆ.
ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲಿ ಸಮುದಾಯಗಳ ಮೇಲೆ ಮಾರಣಾಂತಿಕ ಗಡಿಯಾಚೆಗಿನ ಹಮಾಸ್ ದಾಳಿಗೆ ಪ್ರತೀಕಾರವಾಗಿ ಗಾಜಾ ಮೇಲೆ ಇಸ್ರೇಲ್ ನಿರಂತರ ವೈಮಾನಿಕ ದಾಳಿಯ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ಈ ಸ್ಫೋಟವು ಗಾಜಾದಲ್ಲಿ ಅತ್ಯಂತ ರಕ್ತಸಿಕ್ತ ಘಟನೆಯಾಗಿದೆ.
ʼಇಸ್ಲಾಮಿಕ್ ಜಿಹಾದ್ʼ ಸಂಘಟನೆಯ ರಾಕೆಟ್ ಉಡಾವಣೆಯಲ್ಲಿನ ವೈಫಲ್ಯವೇ ಗಾಜಾದ ಆಸ್ಪತ್ರೆಯಲ್ಲಿನ ಸಾವುನೋವಿಗೆ ಕಾರಣ. ಆ ವಿಫಲವಾದ ರಾಕೆಟ್‌ ಆಸ್ಪತ್ರೆ ಮೇಲೆ ಬಿದ್ದಿದೆ ಎಂದು ನಾವು ಅನೇಕ ಮೂಲಗಳಿಂದ ಕಂಡುಕೊಂಡಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಆ ಸಮಯದಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿರಲಿಲ್ಲ ಎಂದು ವಕ್ತಾರ ಡೇನಿಯಲ್ ಹಗರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆಸ್ಪತ್ರೆಯ ಸಮೀಪ ಯಾವುದೇ ವೈಮಾನಿಕ ಕಾರ್ಯಾಚರಣೆಗಳು ಮತ್ತು ಬಳಸಲಾದ ರಾಕೆಟ್‌ಗಳು ಇಸ್ರೇಲ್‌ ಬಳಸುತ್ತಿದ್ದ ಉಪಕರಣಗಳಿಗೆ ಹೊಂದಿಕೆಯಾಗಲಿಲ್ಲ ಎಂದು ಅವರು ಹೇಳಿದ್ದಾರೆ.
“ಐಡಿಎಫ್ ಕಾರ್ಯಾಚರಣಾ ವ್ಯವಸ್ಥೆಗಳ ವಿಶ್ಲೇಷಣೆಯು ಗಾಜಾದಲ್ಲಿ ಭಯೋತ್ಪಾದಕರು ರಾಕೆಟ್‌ಗಳ ಸುರಿಮಳೆಗೈದಿದ್ದಾರೆ ಎಂದು ಸೂಚಿಸುತ್ತದೆ, ಅದು ರಾಕೆಟ್‌ಗಳನ್ನು ಉಡಾವಣೆ ಮಾಡುವ ಸಮಯದಲ್ಲಿ ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಸಮೀಪದಲ್ಲಿ ಹಾದುಹೋಯಿತು” ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ತಿಳಿಸಿದ್ದಾರೆ.
ನಮ್ಮ ಕೈಯಲ್ಲಿರುವ ಬಹು ಮೂಲಗಳ ಗುಪ್ತಚರವು ಇಸ್ಲಾಮಿಕ್ ಜಿಹಾದ್ ರಾಕೆಟ್ ಉಡಾವಣೆ ವಿಫಲವಾಗಿ ಅದು ಗಾಜಾದಲ್ಲಿ ಆಸ್ಪತ್ರೆ ಮೇಲೆ ಬಿದ್ದಿದೆ ಎಂದು ಸೂಚಿಸುತ್ತದೆ” ಎಂದು ವಕ್ತಾರರು ಹೇಳಿದ್ದಾರೆ.

ಹಮಾಸ್ ಮಿತ್ರ ಗುಂಪಾದ ಇಸ್ಲಾಮಿಕ್ ಜಿಹಾದ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಜಿಯೋನಿಸ್ಟ್ ಶತ್ರು ಗಾಜಾದ ಬ್ಯಾಪ್ಟಿಸ್ಟ್ ಅರಬ್ ನ್ಯಾಶನಲ್ ಹಾಸ್ಪಿಟಲ್ ಮೇಲೆ ಬಾಂಬ್ ಸ್ಫೋಟಿಸುವ ಮೂಲಕ ತಾನು ಮಾಡಿದ ಕ್ರೂರ ಹತ್ಯಾಕಾಂಡದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಹಾಗೂ ಪ್ಯಾಲೆಸ್ತೈನ್‌ನಲ್ಲಿನ ಇಸ್ಲಾಮಿಕ್ ಜಿಹಾದ್ ಆಂದೋಲನದತ್ತ ಬೆರಳು ತೋರಿಸುತ್ತಿದೆ ಎಂದು ಆರೋಪಿಸಿದೆ.
ಇಸ್ಲಾಮಿಕ್ ಜಿಹಾದ್‌ ಗುಂಪಿನ ವಕ್ತಾರ ದಾವೂದ್ ಶೆಹಾಬ್ ಅವರು, ಇದು ಸುಳ್ಳು ಮತ್ತು ಕಟ್ಟುಕಥೆ. ಅವರು ನಾಗರಿಕರ ವಿರುದ್ಧ ಮಾಡಿದ ಭಯಾನಕ ಅಪರಾಧ ಮತ್ತು ಹತ್ಯಾಕಾಂಡ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.
ಆದಾಗ್ಯೂ, ಇಸ್ರೇಲಿ ಮಿಲಿಟರಿಯು ಗಾಜಾ ನಗರದ ಅಲ್-ಅಹ್ಲಿ ಅಲ್-ಅರಬಿ ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ ಎಂದು ಹೇಳಿದೆ. ಹಾಗೂ ಆಸ್ಪತ್ರೆಯಲ್ಲಿ ಸಂಭವಿಸಿದ ಸ್ಫೋಟವು ಪ್ಯಾಲೇಸ್ಟಿನಿಯನ್ ʼಇಸ್ಲಾಮಿಕ್ ಜಿಹಾದ್ʼ ಗುಂಪಿನಿಂದ ರಾಕೆಟ್ ಉಡಾವಣೆ ವಿಫಲವಾಗಿ ಇದು ಸಂಭವಿಸಿದೆ ಎಂದು ಹೇಳಿದೆ.
2021 ರಲ್ಲಿ ಕೊನೆಯ ಇಸ್ರೇಲಿ-ಹಮಾಸ್ ಸಂಘರ್ಷದ ಸಮಯದಲ್ಲಿ, ಹಮಾಸ್, ಇಸ್ಲಾಮಿಕ್ ಜಿಹಾದ್ ಮತ್ತು ಇತರ ಉಗ್ರಗಾಮಿ ಗುಂಪುಗಳು ಗಾಜಾದಿಂದ ಸುಮಾರು 4,360 ರಾಕೆಟ್‌ಗಳನ್ನು ಹಾರಿಸಿದ್ದವು. ಅವುಗಳಲ್ಲಿ 680 ರಾಕೆಟ್‌ಗಳು ವಿಫಲವಾಗಿ ಗಾಜಾ ಪ್ರದೇಶದಲ್ಲಿಯೇ ಬಿದ್ದಿತ್ತು ಎಂದು ಇಸ್ರೇಲ್ ಹೇಳಿದೆ.

ಪ್ರಮುಖ ಸುದ್ದಿ :-   ಖ್ಯಾತ ಗಜಲ್‌ ಗಾಯಕ ಪಂಕಜ ಉಧಾಸ್ ನಿಧನ

ಗಾಜಾ ಪಟ್ಟಿ ಆಳುವ ಹಮಾಸ್‌ನೊಂದಿಗಿನ ಯುದ್ಧದಲ್ಲಿ ನಾಗರಿಕ ಸಾವುನೋವುಗಳನ್ನು ಕಡಿಮೆ ಮಾಡಲು ಇಸ್ರೇಲ್ ಹೇಗೆ ಯೋಜಿಸುತ್ತಿದೆ ಎಂಬುದನ್ನು ಕೇಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್‌ಗೆ ಭೇಟಿ ನೀಡಿದ ಮುನ್ನಾದಿನ ಮಂಗಳವಾರ ಈ ಘಟನೆ ನಡೆದಿದೆ.
ಆಸ್ಪತ್ರೆಯ ಸ್ಫೋಟಕ್ಕೆ ಯಾರು ಹೊಣೆಗಾರರಾಗಿದ್ದರೂ, ರೋಗಿಗಳು, ಮಹಿಳೆಯರು ಮತ್ತು ಮಕ್ಕಳು ಮತ್ತು ಇತರರು ಇಸ್ರೇಲಿ ಬಾಂಬ್ ದಾಳಿಯಿಂದ ನಿರಾಶ್ರಿತರಾಗಿದ್ದಾರೆ ಎಂದು ಹಮಾಸ್ ಹೇಳಿದೆ. ಹಾಗೂ ಬಿಕ್ಕಟ್ಟನ್ನು ನಿಯಂತ್ರಿಸಲು ಇನ್ನಷ್ಟು ಸಂಕೀರ್ಣವಾದ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತದೆ ಎಂದು ಹೇಳಿದೆ.
ಗಾಜಾದಲ್ಲಿನ ಹಮಾಸ್ ಸರ್ಕಾರದ ಆರೋಗ್ಯ ಸಚಿವ ಮೈ ಅಲ್ಕೈಲಾ ಅವರು, ಆಸ್ಪತ್ರೆ ಮೇಲೆ ನಡೆದ ಬಾಂಬ್‌ ದಾಳಿಯನ್ನು ಇಸ್ರೇಲ್ ಹತ್ಯಾಕಾಂಡ ಎಂದು ಆರೋಪಿಸಿದರು. ಗಾಜಾ ನಾಗರಿಕ ರಕ್ಷಣಾ ಮುಖ್ಯಸ್ಥರು 300 ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಿದರೆ, ಈ ಘಟನೆಯಲ್ಲಿ 500 ಜನರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಮಂಗಳವಾರದ ಘಟನೆಗೆ ಮೊದಲು, ಗಾಜಾದಲ್ಲಿನ ಆರೋಗ್ಯ ಅಧಿಕಾರಿಗಳು ಇಸ್ರೇಲ್‌ನ 11 ದಿನಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 3,000 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಹಮಾಸ್ ಉಗ್ರಗಾಮಿಗಳು ಅಕ್ಟೋಬರ್ 7 ರಂದು ಇಸ್ರೇಲಿ ಪಟ್ಟಣಗಳು ಮತ್ತು ಕಿಬ್ಬೂತ್‌ಗಳ ಮೇಲೆ ದಾಳಿ ಮಾಡಿ 1,300 ಕ್ಕೂ ಹೆಚ್ಚು ಜನರನ್ನು ಕೊಂದ ನಂತರ ಇಸ್ರೇಲ್‌ ಗಾಜಾ ಮೇಲೆ ದಾಳಿ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ‘ತಪ್ಪು ಮಾಡಿದ್ದೇನೆ....’: ವೀಡಿಯೊ ರಿಟ್ವೀಟ್ ಮಾಡಿದ್ದಕ್ಕೆ ಸುಪ್ರೀಂ ಕೋರ್ಟಿನಲ್ಲಿ ಅರವಿಂದ ಕೇಜ್ರಿವಾಲ್ ತಪ್ಪೊಪ್ಪಿಗೆ

ಆಕ್ರಮಿತ ವೆಸ್ಟ್ ಬ್ಯಾಂಕ್ ನಗರವಾದ ರಮಲ್ಲಾದಲ್ಲಿ, ಸ್ಫೋಟದ ನಂತರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ಯಾಲೆಸ್ತೈನ್‌ ಅಧ್ಯಕ್ಷ ಮಹಮೂದ್ ಅಬ್ಬಾಸ್ ವಿರುದ್ಧ ಕಲ್ಲುಗಳನ್ನು ಎಸೆದಿದ್ದಾರೆ ಮತ್ತು ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪ್ಯಾಲೇಸ್ಟಿನಿಯನ್ ಭದ್ರತಾ ಪಡೆಗಳು ಅಶ್ರುವಾಯು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಹಾರಿಸಿದರು.ಸ್ಫೋಟದ ನಂತರ ಪ್ಯಾಲೆಸ್ತೈನ್‌ ಅಧ್ಯಕ್ಷ ಅಬ್ಬಾಸ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗಿನ ಯೋಜಿತ ಸಭೆ ರದ್ದುಗೊಳಿಸಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ಸಭೆಯು ಜೋರ್ಡಾನ್‌ನಲ್ಲಿ ನಡೆಯಬೇಕಿತ್ತು, ಆದರೆ ಪ್ಯಾಲೇಸ್ಟಿನಿಯನ್ ಅಧಿಕಾರಿ ಪ್ಯಾಲೆಸ್ತೈನ್‌ ಅಧ್ಯಕ್ಷರು ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಅವರ ಸರ್ಕಾರದ ಸ್ಥಾನವಾದ ರಾಮಲ್ಲಾಗೆ ಹಿಂದಿರುಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಮಾಸ್ ಅಧಿಕಾರಿಗಳು ಆರಂಭದಲ್ಲಿ ಮಂಗಳವಾರದ ಆಸ್ಪತ್ರೆ ಸ್ಫೋಟಕ್ಕೆ ಇಸ್ರೇಲಿ ವೈಮಾನಿಕ ದಾಳಿ ಕಾರಣ ಎಂದು ದೂಷಿಸಿದ ನಂತರ, ಅರಬ್ ರಾಷ್ಟ್ರಗಳು, ಇರಾನ್ ಮತ್ತು ಟರ್ಕಿ ಖಂಡಿಸಿದವು. ಪ್ಯಾಲೇಸ್ಟಿನಿಯನ್ ಪ್ರಧಾನಿ ಇದನ್ನು “ಭಯಾನಕ ಅಪರಾಧ, ನರಮೇಧ” ಎಂದು ಕರೆದರು ಮತ್ತು ಇಸ್ರೇಲ್ ಅನ್ನು ಬೆಂಬಲಿಸುವ ದೇಶಗಳು ಸಹ ಜವಾಬ್ದಾರಿಯನ್ನು ಹೊರಬೇಕು ಎಂದು ಹೇಳಿದರು.

ಆಸ್ಪತ್ರೆಯ ಬಾಂಬ್ ಸ್ಫೋಟದ ನಂತರ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಾರೆ. “ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ನಡೆದ ಸ್ಫೋಟ ಮತ್ತು ಅದರ ಪರಿಣಾಮವಾಗಿ ಸಂಭವಿಸಿದ ಭೀಕರ ಪ್ರಾಣಹಾನಿಯಿಂದ ನಾನು ಆಕ್ರೋಶಗೊಂಡಿದ್ದೇನೆ ಮತ್ತು ತೀವ್ರ ದುಃಖಿತನಾಗಿದ್ದೇನೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಮಾರಣಾಂತಿಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು “ಭಯಾನಕ” ದಾಳಿ ಎಂದು ಕರೆದರು. “ನನ್ನ ಹೃದಯವು ಸಂತ್ರಸ್ತರ ಕುಟುಂಬಗಳೊಂದಿಗೆ ಇದೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ರಕ್ಷಿಸಲಾಗಿದೆ” ಎಂದು ಗುಟೆರೆಸ್ ಹೇಳಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement