X’ ನಲ್ಲಿ 2 ಹೊಸ ಚಂದಾದಾರಿಕೆ ಯೋಜನೆ ಪ್ರಕಟಿಸಿದ ಎಲೋನ್ ಮಸ್ಕ್ : ಮಾಹಿತಿ ಇಲ್ಲಿದೆ

ಎಕ್ಸ್ (ಹಿಂದೆ ಟ್ವಿಟರ್) ಶೀಘ್ರದಲ್ಲೇ ಎರಡು ಹೊಸ ಚಂದಾದಾರಿಕೆ ಶ್ರೇಣಿಗಳನ್ನು ಪರಿಚಯಿಸಲಿದೆ ಎಂದು ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ.
ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ ಫಾರ್ಮ್ ಎರಡು ಆಯ್ಕೆಗಳಲ್ಲಿ ಒಂದು ಕಡಿಮೆ-ವೆಚ್ಚದ ಆಯ್ಕೆಯನ್ನು ಪರಿಚಯಿಸುತ್ತದೆ, ಅದು ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ, ಆದರೆ ಜಾಹೀರಾತುಗಳೊಂದಿಗೆ ಇರಲಿದೆ.ಮತ್ತೊಂದೆಡೆ, ಹೆಚ್ಚು ದುಬಾರಿ ಶುಲ್ಕದ ಯೋಜನೆಯಾಗಿದ್ದು, ಇದು ನಿಮ್ಮ ಫೀಡ್‌ನಲ್ಲಿ ಜಾಹೀರಾತುಗಳನ್ನು ತೋರಿಸುವುದನ್ನು ತಡೆಯುತ್ತದೆ.
ಈ ಕುರಿತು ಬಗ್ಗೆ ಮಾಡಿರುವ ಕಂಪನಿಯ ಮಾಲೀಕ ಎಲೋನ್ ಮಸ್ಕ್, “ಎಕ್ಸ್ ಪ್ರೀಮಿಯಂ ಚಂದಾದಾರರ ಎರಡು ಹೊಸ ಶ್ರೇಣಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಅದರಲ್ಲಿ ಒಂದು ಆಯ್ಕೆಯು ಎಲ್ಲಾ ವೈಶಿಷ್ಟ್ಯಗಳೊಂದಿಗೆ ಕಡಿಮೆ ವೆಚ್ಚದ್ದಾಗಿರುತ್ತದೆ, ಆದರೆ ಜಾಹೀರಾತುಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ, ಮತ್ತು ಇನ್ನೊಂದು ಹೆಚ್ಚು ದುಬಾರಿಯಾಗಿದೆ, ಆದರೆ ಜಾಹೀರಾತುಗಳು ಇರುವುದಿಲ್ಲ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ಮತ್ತು ಫಿಲಿಪೈನ್ಸ್ ಬಳಕೆದಾರರಿಗೆ ವರ್ಷಕ್ಕೆ 1 ಡಾಲರ್ ‘ನಾಟ್-ಎ-ಬಾಟ್’ ಚಂದಾದಾರಿಕೆ ಯೋಜನೆಯನ್ನು ವಿಧಿಸುವ ಪ್ರಾಯೋಗಿಕ ಯೋಜನೆಯನ್ನು ಎಕ್ಸ್ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಈ ಪ್ರಕಟಣೆ ಹೊರಬಿದ್ದಿದೆ.
ಎಕ್ಸ್ ಪ್ರೊ ಮೋನಿಕರ್ ಅಡಿಯಲ್ಲಿ ಟ್ವಿಟರ್ ಈವರೆಗೆ ಒಂದೇ ಚಂದಾದಾರಿಕೆ ಮಾದರಿಯನ್ನು ಹೊಂದಿತ್ತು. ಎಕ್ಸ್ ಪ್ರೊ ವೆಬ್ಸೈಟ್ ಮೂಲಕ ಖರೀದಿಸಿದಾಗ ಒಂದು ತಿಂಗಳಿಗೆ 650 ರೂ. ಎಕ್ಸ್ ನ ಐಒಎಸ್ ಅಥವಾ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಚಂದಾದಾರರಾದರೆ ಚಂದಾದಾರರು 900 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ನಾಟ್-ಎ-ಬಾಟ್ ಯೋಜನೆ
ಈ ವಾರದ ಆರಂಭದಲ್ಲಿ, ಕಂಪನಿಯು ‘ನಾಟ್-ಎ-ಬಾಟ್’ ಎಂಬ ಚಂದಾದಾರಿಕೆ ಯೋಜನೆಯನ್ನು ಪ್ರಾಐೋಗಿಕವಾಗಿ ಪರೀಕ್ಷಿಸುತ್ತಿದೆ ಎಂದು ಎಲೋನ್ ಮಸ್ಕ್ ದೃಢಪಡಿಸಿದರು. ಎಕ್ಸ್ ನಲ್ಲಿ ಬಾಟ್ ಗಳ ಸಮಸ್ಯೆಯನ್ನು ಎದುರಿಸಲು ಈ ರೀತಿ ಯೋಜಿಸಲಾಗಿದೆ. ಈ ಯೋಜನೆಯಡಿ, ಅಪ್ಲಿಕೇಶನ್‌ನ ಮೂಲಭೂತ ವೈಶಿಷ್ಟ್ಯಗಳಿಗೆ ಪ್ರವೇಶ ಪಡೆಯಲು ಬಳಕೆದಾರರು ವರ್ಷಕ್ಕೆ ಕೇವಲ 1 ಡಾಲರ್ (82 ರೂ.) ಪಾವತಿಸಬೇಕಾಗುತ್ತದೆ. ಬಳಕೆದಾರರು ಈ ಮೊತ್ತವನ್ನು ಪಾವತಿಸದಿದ್ದರೆ ಅವರ ಪ್ರೊಫೈಲ್ ‘ಓದಲು ಮಾತ್ರ (ರೀಡ್‌ ಒನ್ಲಿ’) ಆಗಿ ಬದಲಾಗುತ್ತದೆ. ಅವರು ತಮ್ಮ ಖಾತೆಯಿಂದ ಲೈಕ್ ಮಾಡಲು, ಕಾಮೆಂಟ್ ಮಾಡಲು ಮತ್ತು ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ.

ಪ್ರಮುಖ ಸುದ್ದಿ :-   2100ರ ಹೊತ್ತಿಗೆ ಭಾರತದ ಜನಸಂಖ್ಯೆಯಲ್ಲಿ ಕುಸಿತ, ಆದ್ರೂ ಚೀನಾಕ್ಕಿಂತ 2.5 ಪಟ್ಟು ಹೆಚ್ಚು...! ಭಾರತದ ಜನಸಂಖ್ಯೆ ಎಷ್ಟಾಗಲಿದೆ ಗೊತ್ತಾ..?

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement