ಕ್ರಿಕೆಟ್ ವಿಶ್ವಕಪ್ 2023 : ಪಿಚ್‌ ಒಳಗೆ ಓಡಿ ಬಂದ ‘ಫ್ರೀ ಪ್ಯಾಲೆಸ್ತೈನ್’ ಟೀ ಶರ್ಟ್ ಧರಿಸಿದ ವ್ಯಕ್ತಿ ; ಕೊಹ್ಲಿ ತಬ್ಬಿಕೊಳ್ಳಲು ಯತ್ನ | ವೀಕ್ಷಿಸಿ

ಅಹಮದಾಬಾದ್‌: ಭಾನುವಾರ ಅಹಮದಾಬಾದಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ ಪಂದ್ಯ ನಡೆಯುತ್ತಿರುವಾಗ ‘ಫ್ರೀ ಪ್ಯಾಲೆಸ್ಟೈನ್’ ಟೀ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಪಿಚ್ ಒಳಗೆ ಓಡಿ ಬಂದಿದ್ದಾನೆ. ಆತ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಕೆಂಪು ಬಣ್ಣದ ಚಡ್ಡಿ ಧರಿಸಿದ್ದ ವ್ಯಕ್ತಿ, ಮುಂಭಾಗದಲ್ಲಿ ‘ಸ್ಟಾಪ್ ಬಾಂಬ್ ಪ್ಯಾಲೆಸ್ಟೈನ್’ ಮತ್ತು ಹಿಂಭಾಗದಲ್ಲಿ ‘ಫ್ರೀ ಪ್ಯಾಲೆಸ್ಟೈನ್’ ಎಂಬ ಸಂದೇಶವಿರುವ ಬಿಳಿ ಟೀ ಶರ್ಟ್ ಧರಿಸಿದ್ದ. ಆತ ಪ್ಯಾಲೆಸ್ತೀನ್‌ ಬಣ್ಣಗಳ ಮುಖವಾಡವನ್ನು ಸಹ ಧರಿಸಿದ್ದ.
ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಜಾದ ಮೇಲೆ ವೈಮಾನಿಕ ಮತ್ತು ಭೂ ದಾಳಿಗಳನ್ನು ನಡೆಸುತ್ತಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ಟೀನಿಯರ ವಿರುದ್ಧದ ಹಿಂಸಾಚಾರದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಹಮದಾಬಾದ್‌ನ ಪಿಚ್‌ನ ಒಳಗೆ ಓಡಿಬಂದ ವ್ಯಕ್ತಿ, ಕಾಮನಬಿಲ್ಲಿನ ಧ್ವಜವನ್ನು ಸಹ ಹಿಡಿದಿದ್ದ. ಭದ್ರತಾ ಉಲ್ಲಂಘನೆ ಮಾಡಿದ್ದಕ್ಕಾಗಿ ಆತನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಪಂದ್ಯದ 14ನೇ ಓವರ್‌ನಲ್ಲಿ ಆತ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಕೊಹ್ಲಿಯನ್ನು ತಲುಪುವಲ್ಲಿ ಯಶಸ್ವಿಯಾದ. ಪಿಚ್ ಆಕ್ರಮಣದಿಂದಾಗಿ ಪಂದ್ಯವನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಲಾಯಿತು. ಭದ್ರತಾ ಅಧಿಕಾರಿಗಳು ಒಳನುಗ್ಗುವವರನ್ನು ಬಂಧಿಸಿದ ನಂತರ, ಪಂದ್ಯವನ್ನು ಪುನರಾರಂಭಿಸಲಾಯಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

https://twitter.com/KohliAdorer/status/1726173806987997454?ref_src=twsrc%5Etfw%7Ctwcamp%5Etweetembed%7Ctwterm%5E1726173806987997454%7Ctwgr%5E61a9a533eb3209227b1b75a3aa6cff7f08508f30%7Ctwcon%5Es1_&ref_url=https%3A%2F%2Fwww.hindustantimes.com%2Fcricket%2Fwatch-man-wearing-stop-bombing-palestine-shirt-breaches-security-in-ind-vs-aus-world-cup-final-attempts-to-hug-kohli-101700386546722.html

ಮೊದಲ ಘಟನೆಯಲ್ಲ…
ಮೊದಲ ನಿದರ್ಶನವಲ್ಲಗಮನಾರ್ಹವಾಗಿ, ವಿಶ್ವಕಪ್‌ನಲ್ಲಿ ಈ ಎರಡು ತಂಡಗಳ ನಡುವಿನ ಪಂದ್ಯಕ್ಕೆ ಪಿಚ್ ಒಳಗೆ ಓಡಿಬಂದು ಅಡ್ಡಿಪಡಿಸಿದ್ದು ಎರಡನೇ ನಿದರ್ಶನವಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಆರಂಭಿಕ ಪಂದ್ಯದ ವೇಳೆ, ಡೇನಿಯಲ್ ಜಾರ್ವಿಸ್ (69) ಎಂಬಾತ ಭಾರತೀಯ ಜೆರ್ಸಿಯನ್ನು ಧರಿಸಿ ಆಟದ ಮೈದಾನದ ಸುತ್ತ ಸುತ್ತಾಡಿದ್ದ. ಆತ ಮಾಜಿ ಭಾರತೀಯ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸಂವಾದ ನಡೆಸಿದ. ಜಾರ್ವೋ ಕೋಹ್ಲಿಯೊಂದಿಗೆ ಮಾತನಾಡುತ್ತಿದ್ದಾಗ, ಭದ್ರತಾ ಸಿಬ್ಬಂದಿ ಆಗಮಿಸಿ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದರು.
ಅಹಮದಾಬಾದ್‌ನ ಮೊಟೆರಾದಲ್ಲಿರುವ ಬೃಹತ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement