ಅಯ್ಯೋ ಶಿವನೆ…| ʼಕುಲದೇವತೆಗಳುʼ ಎಂದು ಡೈನೋಸರ್ ಮೊಟ್ಟೆಗಳಿಗೆ ಪೂಜೆ ಸಲ್ಲಿಸುತ್ತಿದ್ದ ಗ್ರಾಮಸ್ಥರು…!

ಭೋಪಾಲ್: ಮಧ್ಯಪ್ರದೇಶದ ಹಳ್ಳಿಯೊಂದರ ನಿವಾಸಿಗಳು ತಮಗೆ ದೊರೆತ ಕಲ್ಲಿನ ಚೆಂಡುಗಳಂತೆ ಕಾಣುವ ವಸ್ತುಗಳನ್ನು “ಕುಲದೇವತೆಗಳು” ಎಂದು ಪೂಜಿಸುತ್ತಿದ್ದರು. ಆದರೆ ಕೆಲ ವರ್ಷಗಳ ನಂತರ ಅದು ಡೈನೋಸಾರ್ ಮೊಟ್ಟೆಗ ಪಳೆಯುಳಿಕೆಗಳು ಎಂದು ಕಂಡುಬಂದಿದೆ…!
“ಕುಲದೇವತೆಗಳು” ತಮ್ಮ ಕೃಷಿಭೂಮಿ ಮತ್ತು ಜಾನುವಾರುಗಳನ್ನು ಕಷ್ಟ ಮತ್ತು ದುರದೃಷ್ಟಗಳಿಂದ ರಕ್ಷಿಸುತ್ತಾರೆ ಎಂಬ ನಂಬಿಕೆಯಂತೆ, ಧಾರ್‌ನ ಪದಲ್ಯದಲ್ಲಿ ಗ್ರಾಮಸ್ಥರು ಕೃಷಿ ಮಾಡುವಾಗ ಸಿಕ್ಕ ಕಲ್ಲುಗಳನ್ನು “ಕಾಕಡ ಭೈರವ” ಅಥವಾ ಭಿಲಾತ್ ಬಾಬಾ ಎಂದು ಪೂಜಿಸುತ್ತಿದ್ದರು.
“ನಾವು ಭಿಲಾತ್ ಬಾಬಾಗೆ ತೆಂಗಿನಕಾಯಿಯನ್ನು ಅರ್ಪಿಸುತ್ತಿದ್ದೆವು ಮತ್ತು ಪೂಜೆಯನ್ನು ಮಾಡುತ್ತಿದ್ದೆವು ಎಂದು ಪಡ್ಲ್ಯಾ ಗ್ರಾಮದ ನಿವಾಸಿ ವೆಸ್ತಾ ಮಂಡಲೋಯಿ ಹೇಳಿದರು.
ಆದಾಗ್ಯೂ, ತಜ್ಞರ ತಂಡವು ಗ್ರಾಮಕ್ಕೆ ಭೇಟಿ ನೀಡಿದಾಗ, ಇವು ಕಲ್ಲುಗಳಲ್ಲ, ಮಿಲಿಯನ್ ವರ್ಷಗಳಷ್ಟು ಹಳೆಯದಾದ ಡೈನೋಸಾರ್ ಮೊಟ್ಟೆಗಳು ಎಂದು ಕಂಡುಕೊಂಡರು.
“ನಮ್ಮಲ್ಲಿ 2011 ರಲ್ಲಿ ನಿರ್ಮಿಸಲಾದ ಡೈನೋಸಾರ್ ಪಾರ್ಕ್ ಇದೆ. ಅನೇಕ ಬಾರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ಅಂತಹ ಪಳೆಯುಳಿಕೆಗಳನ್ನು ಕಂಡು ಅವುಗಳನ್ನು ಪೂಜಿಸಲು ಪ್ರಾರಂಭಿಸುತ್ತಾರೆ” ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಎ.ಎಸ್. ಸೋಲಂಕಿ ಹೇಳಿದರು.
ಧಾರ್ ಜಿಲ್ಲೆಯ ಬಾಗ್ ಪ್ರದೇಶದಲ್ಲಿ ಪಳೆಯುಳಿಕೆಗಳ ಸಂಗ್ರಹಣೆ ಮತ್ತು ಸಂರಕ್ಷಣೆಯ ಕೇಂದ್ರವಿದೆ. ಡೈನೋಸಾರ್ ಪಳೆಯುಳಿಕೆ ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲ್ಪಡುವ ಇದು ಹಳೆಯ ಕಾಲದ ವಿವಿಧ ಪಳೆಯುಳಿಕೆಗಳನ್ನು ಸಂಗ್ರಹಿಸುತ್ತದೆ.
ಜಿಲ್ಲೆಯಲ್ಲಿ ಈವರೆಗೆ 250ಕ್ಕೂ ಹೆಚ್ಚು ಡೈನೋಸಾರ್ ಮೊಟ್ಟೆಗಳು ಪತ್ತೆಯಾಗಿವೆ. ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೈನೋಸಾರ್‌ಗಳು ಇದ್ದವು ಎಂದು ನಂಬಲಾಗಿದೆ. ಸುಮಾರು 175 ಮಿಲಿಯನ್ ವರ್ಷಗಳ ಹಿಂದೆ ಡೈನೋಸಾರ್‌ಗಳು ಭೂಮಿಯಲ್ಲಿ ಸಂಚರಿಸುತ್ತಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಜಾತಿಗಳು ನಂತರ ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಅಳಿದುಹೋದವು.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement