ನ್ಯೂಜಿಲೆಂಡಿನ ಅತ್ಯಂತ ಕಿರಿಯ ಸಂಸದೆ ಸಂಸತ್ತಿನಲ್ಲಿ ಪ್ರದರ್ಶಿಸಿದ ಸ್ಥಳೀಯ ‘ಯುದ್ಧದ ಕೂಗು’ ವೀಡಿಯೊ ಭಾರೀ ವೈರಲ್

ನ್ಯೂಜಿಲೆಂಡ್‌ ಸಂಸತ್ತಿನ ಅತ್ಯಂತ ಕಿರಿಯ ಸಂಸದೆಯ ಭಾಷಣದ ವೈಖರಿ ಭಾರೀ ವೈರಲ್ ಆಗುತ್ತಿದೆ. 170 ವರ್ಷಗಳ ನ್ಯೂಜಿಲೆಂಡ್‌ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ಕಿರಿಯ ಸಂಸದೆಯಾಗಿರುವ 21 ವರ್ಷದ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ (Hana-Rawhiti Maipi-Clarke) ಅವರ ವೀಡಿಯೊದಲ್ಲಿ ಅವರು ಭಾಷಣ ಮಾಡಿದ ರೀತಿ ಎಲ್ಲರ ಗಮನ ಸೆಳೆದಿದೆ. ಮೈಪಿ ಕ್ಲಾರ್ಕ್ ಅವರು ಹೌರಾಕಿ-ವೈಕಾಟೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಹಾಗೂ ಅತ್ಯಂತ ಗೌರವಾನ್ವಿತ ಸಂಸದರಾಗಿದ್ದ ನಾನಿಯಾ ಮಹುತಾ ಅವರನ್ನು ಸೋಲಿಸಿ, ಕಳೆದ ಅಕ್ಟೋಬರ್‌ ತಿಂಗಳಲ್ಲಿ ನ್ಯೂಜಿಲೆಂಡ್‌ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಅವರು ಸ್ಥಳೀಯ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಮೈಪಿ ಕ್ಲಾರ್ಕ್ ಅವರು ಕಳೆದ ತಿಂಗಳು ಮಾಡಿದ ಭಾವೋದ್ರಿಕ್ತ ಭಾಷಣವು ಸಾಂಪ್ರದಾಯಿಕ ‘ಹಕಾ’ ಸಂಹವನದಲ್ಲಿತ್ತು. ಹಕಾ ಎಂದರೆ ಯುದ್ಧದ ಕೂಗು ಎಂದರ್ಥ. “ನಾನು ನಿಮಗಾಗಿ ಸಾಯುತ್ತೇನೆ … ಆದರೆ ನಾನು ನಿಮಗಾಗಿ ಬದುಕುತ್ತೇನೆ ಕೂಡ” ಎಂದು ತಮ್ಮ ಭಾಷಣದಲ್ಲಿ ಮತದಾರರಿಗೆ ಭರವಸೆ ನೀಡಿದರು.

ಯಾವುದನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದು ನನಗೆ ಸಂಸತ್ತಿಗೆ ಪ್ರವೇಶಿಸುವ ಮೊದಲು ಕೆಲವು ಸಲಹೆಗಳನ್ನು ನೀಡಲಾಯಿತು. ಆದರೆ, ಈ ಚೇಂಬರ್‌ನಲ್ಲಿ ಹೇಳಲಾದ ಎಲ್ಲವನ್ನೂ ನಾನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಇರಲಾರೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ತಮ್ಮ ಜೀವನದುದ್ದಕ್ಕೂ ತಮ್ಮ ತರಗತಿಯ ಹಿಂಭಾಗದಲ್ಲಿ ಕುಳಿತಿರುವ ತಮರಿಕಿ ಮಾವೋರಿಗೆ, ತಮ್ಮ ಮಾತೃಭಾಷೆಯನ್ನು ಕಲಿಯಲು ಹಂಬಲಿಸುವ ವಾಕಾಮಾ ಪೀಳಿಗೆಗಳಿಗೆ, ಇನ್ನೂ ತಮ್ಮ ಪೆಪೆಹಾಕ್ಕೆ ಹೋಗದ ತಮರಿಕಿಗಳ ಪರವಾಗಿ ನಾನಿದ್ದೇನೆ. ಈ ಕೆಲಸಗಳು ತೆರೆದ ಬಾಹುಗಳಿಂದ ನಿಮಗಾಗಿ ಕಾಯುತ್ತಿವೆ ಎಂದು ಮೈಪಿ ಕ್ಲಾರ್ಕ್ ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಪ್ರಮುಖ ಸುದ್ದಿ :-   ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಹೊಸ ಪಕ್ಷ ಘೋಷಿಸಿದ ಎಲೋನ್‌ ಮಸ್ಕ್‌...

https://twitter.com/Enezator/status/1743003735112962184?ref_src=twsrc%5Etfw%7Ctwcamp%5Etweetembed%7Ctwterm%5E1743003735112962184%7Ctwgr%5Ea52ab171b50c3b6eab1241b1026d6d060abcf2d1%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fvideo-of-new-zealand-politicians-powerful-speech-goes-viral-4804409

ಕೇವಲ ಒಂದೆರಡು ವಾರಗಳಲ್ಲಿ… ಈ ಸರ್ಕಾರವು ನನ್ನ ಇಡೀ ಪ್ರಪಂಚದ ಮೇಲೆ ದಾಳಿ ಮಾಡಿದೆ. ಆರೋಗ್ಯ, ತಯಾವೋ (ಪರಿಸರ), ವೈ (ನೀರು), ವೇನುವಾ (ಭೂಮಿ), ನೈಸರ್ಗಿಕ ಸಂಪನ್ಮೂಲಗಳು, ಮಾವೋರಿ ವಾರ್ಡ್‌ಗಳು, ರಿಯೋ (ಭಾಷೆ), ತಮರಿಕಿ, ಮತ್ತು ಟೆ ತಿರಿಟಿ ಅಡಿಯಲ್ಲಿ ಈ ದೇಶದಲ್ಲಿರಲು ನನ್ನ ಮತ್ತು ನಿಮ್ಮ ಹಕ್ಕು ಎಂದು ಮೈಪಿ-ಕ್ಲಾರ್ಕ್ ಹೇಳಿದರು. ಮನೆಯಿಂದ ನೋಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಹೇಳಲಿಚ್ಛಿಸುತ್ತೇನೆ, ಈ ಕ್ಷಣ ನನ್ನದಲ್ಲ, ಇದು ನಿಮ್ಮದು ಎಂದು ಅವರು ತಮ್ಮ ಭಾಷಣದ ಕೊನೆಯಲ್ಲಿ ಹೇಳಿದರು.
21 ವರ್ಷ ವಯಸ್ಸಿನ ಮೈಪಿ ಕ್ಲಾರ್ಕ್ ಅವರು ಆಕ್ಲೆಂಡ್ ಮತ್ತು ಹ್ಯಾಮಿಲ್ಟನ್ ನಡುವಿನ ಸಣ್ಣ ಪಟ್ಟಣವಾದ ಹಂಟ್ಲಿಯವರು. ಮೈಪಿ ಕ್ಲಾರ್ಕ್ ತಮ್ಮನ್ನು ರಾಜಕಾರಣಿಯಾಗಿ ಗುರುತಿಸಿಕೊಳ್ಳಲು ಬಯಸುವುದಿಲ್ಲ. ಆದರೆ ತಮ್ಮನ್ನು ಮಾವೋರಿ ಭಾಷೆಯ ರಕ್ಷಕರಾಗಿ ನೋಡುತ್ತಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement