ಆಪಾದಿತ ಇಸ್ರೇಲಿ ದಾಳಿಯಲ್ಲಿ ಹತನಾದ ಪ್ರಮುಖ ಹಿಜ್ಬುಲ್ಲಾ ಕಮಾಂಡರ್ ವಿಸ್ಸಾಮ್ ಅಲ್-ತವಿಲ್

ಸೋಮವಾರ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಪ್ರಮುಖ ಹಿಜ್ಬುಲ್ಲಾ ಕಮಾಂಡರ್ ಹತನಾಗಿದ್ದಾನೆ. ಎಸ್‌ಯುವಿ (SUV)ಯ ಮೇಲಿನ ದಾಳಿಯಲ್ಲಿ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುವ ರಹಸ್ಯ ಹೆಜ್ಬೊಲ್ಲಾ ಪಡೆಗಳ ಕಮಾಂಡರ್ ಒಬ್ಬರನ್ನು ಕೊಂದಿತು ಎಂದು ಲೆಬನಾನಿನ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೆಚ್ಚಿನ ವಿವರಗಳನ್ನು ನೀಡದೆಯೇ ಹತ್ಯೆಗೀಡಾದ ಹೋರಾಟಗಾರನನ್ನು ವಿಸ್ಸಾಮ್ ಅಲ್-ತಾವಿಲ್ ಎಂದು ಹೆಜ್ಬುಲ್ಲಾ ಗುರುತಿಸಿದೆ. ದಕ್ಷಿಣ ಇಸ್ರೇಲ್‌ ಮೇಲೆ ಹಮಾಸ್‌ನ ಅಕ್ಟೋಬರ್ 7 ರ ದಾಳಿ ನಂತರ ಗಾಜಾದ ಮೇಲೆ ಇಸ್ರೇಲಿನ ಸಂಪೂರ್ಣ ಯುದ್ಧವನ್ನು ಪ್ರಚೋದಿಸಿದೆ, ಇದೇವೇಳೆ ಇಸ್ರೇಲ್ ಮತ್ತು ಲೆಬಾನಿನಲ್ಲಿರುವ ಹೆಜ್ಬೊಲ್ಲಾ ನಡುವಿನ ಕಡಿಮೆ-ತೀವ್ರತೆಯ ಹೋರಾಟಕ್ಕೂ ಕಾರಣವಾಗಿದೆ. ಈತ ಇಸ್ರೇಲ್‌ ದಾಳಿಯಲ್ಲಿ ಕೊಲ್ಲಲ್ಪಟ್ಟ ಸಶಸ್ತ್ರ ಗುಂಪಿನಲ್ಲಿ ಅತ್ಯಂತ ಹಿರಿಯ ಉಗ್ರಗಾಮಿ ಎಂದು ಹೇಳಲಾಗಿದೆ. ಕಳೆದ ವಾರ ಬೈರುತ್‌ನಲ್ಲಿ ಹಿರಿಯ ಹಮಾಸ್ ನಾಯಕ ಹತನಾಗಿದ್ದ.

ಉತ್ತರ ಗಾಜಾದಲ್ಲಿ ಪ್ರಮುಖ ಸೈನ್ಯ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಈಗ ಕೇಂದ್ರ ಗಾಜಾ ಮತ್ತು ದಕ್ಷಿಣ ಗಾಜಾ ನಗರವಾದ ಖಾನ್ ಯೂನಿಸ್ ಮೇಲೆ ದಾಳಿ ಕೇಂದ್ರೀಕರಿಸಿದೆ ಎಂದು ಇಸ್ರೇಲ್ ಹೇಳಿದೆ. ಹಮಾಸ್ ಅನ್ನು ಸಂಪೂರ್ಣ ಮಟ್ಟ ಹಾಕಲು ಮತ್ತು ಹಮಾಸ್‌ ಗುಂಪಿನ ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಗಾಜಾಕ್ಕೆ ಕರೆದೊಯ್ದ ಒತ್ತೆಯಾಳುಗಳನ್ನು ಕರೆತರಲು ಸೈನ್ಯವು ಪ್ರಯತ್ನಿಸುತ್ತಿದ್ದು, ಹೋರಾಟವು ಇನ್ನೂ ಹಲವು ತಿಂಗಳುಗಳವರೆಗೆ ಮುಂದುವರಿಯುತ್ತದೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ.
ಆಕ್ರಮಣವು ಈಗಾಗಲೇ 23,000 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ, ಗಾಜಾ ಪಟ್ಟಿಯ ವಿಶಾಲವಾದ ಪ್ರದೇಶಗಳನ್ನು ಧ್ವಂಸಗೊಳಿಸಿದೆ, ಅದರ 23 ಲಕ್ಷ ಜನಸಂಖ್ಯೆಯ ಸುಮಾರು 85% ರಷ್ಟು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಅದರ ನಿವಾಸಿಗಳಲ್ಲಿ ಕಾಲು ಭಾಗದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement