ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ : ಬಿಜೆಪಿ-ಆರ್‌ಎಲ್‌ಡಿ ಮೈತ್ರಿ ಅಂತಿಮ; ಉತ್ತರ ಪ್ರದೇಶದ ೨ ಲೋಕಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿ ಸ್ಪರ್ಧೆ-ಮೂಲಗಳು

ಲಕ್ನೋ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ರಾಷ್ಟ್ರೀಯ ಲೋಕದಳ (RLD) ಹೆಜ್ಜೆ ಹಾಕಲಿದೆ ಎಂದು ವರದಿಗಳು ತಿಳಿಸಿವೆ. ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಲಿದ್ದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ಆರ್‌ಎಲ್‌ಡಿಯೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. 2+1 ಸೂತ್ರವನ್ನು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ವರದಿಗಳು ತಿಳಿಸಿವೆ.
2+1 ಸೂತ್ರ  
ಉಭಯ ಪಕ್ಷಗಳು ಒಪ್ಪಿಕೊಂಡಿರುವ 2+1 ಸೂತ್ರದ ಪ್ರಕಾರ, ಆರ್‌ಎಲ್‌ಡಿಗೆ ಉತ್ತರ ಪ್ರದೇಶದ ಬಾಗ್‌ಪತ್ ಮತ್ತು ಬಿಜ್ನೋರ್ ಸೇರಿದಂತೆ ಎರಡು ಲೋಕಸಭಾ ಸ್ಥಾನಗಳನ್ನು ನೀಡಲಾಗಿದೆ. ವಾಸ್ತವವಾಗಿ, ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಅವರ ಪತ್ನಿ ಚಾರು ಅವರು ಬಾಗ್ಪತ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವು ಈಗಾಗಲೇ ಘೋಷಿಸಿದೆ.
ಬಿಜೆಪಿ ಮತ್ತು ಆರ್‌ಎಲ್‌ಡಿ ನಡುವಿನ ಈ ಮೈತ್ರಿಯು ಲೋಕಸಭೆ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಬಂದಿದ್ದರಿಂದ ಉತ್ತರ ಪ್ರದೇಶದ ರಾಜಕೀಯದಲ್ಲಿ ಮಹತ್ವವನ್ನು ಹೊಂದಿದೆ. ಪ್ರಸ್ತುತ ವರದಿಗಳ ಪ್ರಕಾರ, ಬಿಜೆಪಿ ಎರಡು ಲೋಕಸಭಾ ಸ್ಥಾನಗಳನ್ನು ಆರ್‌ಎಲ್‌ಡಿಗೆ ನೀಡುತ್ತದೆ ಮತ್ತು ಪಕ್ಷಕ್ಕೆ ಒಂದು ರಾಜ್ಯಸಭಾ ಸ್ಥಾನವನ್ನೂ ನೀಡುತ್ತದೆ. ಆರಂಭದಲ್ಲಿ, ಆರ್‌ಎಲ್‌ಡಿ ನಾಲ್ಕು ಲೋಕಸಭಾ ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು, ಆದರೆ ಇದೀಗ ಎರಡು ಲೋಕಸಭಾ ಸ್ಥಾನಗಳು ಹಾಗೂ ಒಂದು ರಾಜ್ಯಸಭಾ ಸ್ಥಾನದ ಸೂತ್ರಕ್ಕೆ ಒಪ್ಪಿಕೊಂಡಿದೆ,

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

ಅಲ್ಲದೆ ಪಕ್ಷಕ್ಕೆ ಉತ್ತರ ಪ್ರದೇಶದ ಒಂದು ವಿಧಾನ ಪರಿಷತ್‌ ಸ್ಥಾವನವನ್ನೂ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ, ಕೇಂದ್ರ ಮತ್ತು ಉತ್ತರ ಪ್ರದೇಶ ಸಚಿವ ಸಂಪುಟದಲ್ಲೂ ಆರ್‌ಎಲ್‌ಡಿ ಪಕ್ಷಕ್ಕೆ ಸ್ಥಾನ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 2019 ರ ಚುನಾವಣೆಯಲ್ಲಿ, ಆರ್‌ಎಲ್‌ಡಿ ಅಖಿಲೇಶ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಬಾಗ್ಪತ್ ಮತ್ತು ಬಿಜ್ನೋರ್ ಎರಡೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬರುತ್ತವೆ, ಇದು ಆರ್‌ಎಲ್‌ಡಿ (RLD) ಪ್ರಾಬಲ್ಯ ಹೊಂದಿರುವ ಪ್ರದೇಶವಾಗಿದೆ. ಈ ಎರಡು ಸ್ಥಾನಗಳ ಹೊರತಾಗಿ ಒಂದು ರಾಜ್ಯಸಭಾ ಸ್ಥಾನವನ್ನು ಆರ್‌ಎಲ್‌ಡಿಗೆ ನೀಡಲಾಗುತ್ತಿದೆ. ಈ ಸ್ಥಾನದಿಂದ ಪಕ್ಷದ ನಾಯಕ ಸೋಮಪಾಲ ಶಾಸ್ತ್ರಿ ಆಯ್ಕೆಯಾಗುತ್ತಾರೆ ಎಂದು ನಂಬಲಾಗಿದೆ. ಜಯಂತ್ ಚೌಧರಿ ಅವರ ಪತ್ನಿಯನ್ನು ಬಾಗ್‌ಪತ್‌ನಿಂದ ಅಭ್ಯರ್ಥಿಯಾಗಿ ಅಂತಿಮಗೊಳಿಸಲಾಗಿದೆ, ಆದರೆ ಇದುವರೆಗೆ ಬಿಜ್ನೋರ್ ಸ್ಥಾನಕ್ಕೆ ಯಾವುದೇ ಹೆಸರನ್ನು ಪ್ರಕಟಿಸಲಾಗಿಲ್ಲ.

ಅಖಿಲೇಶ್ ಯಾದವಗೆ ಹಿನ್ನಡೆ
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಜಯಂತ್ ಚೌಧರಿ ಅವರ ನಿರ್ಧಾರವು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ ಯಾದವಗೆ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ. ಏಕೆಂದರೆ ಆರ್‌ಎಲ್‌ಡಿ ಬಹಳ ಹಿಂದಿನಿಂದಲೂ ಸಮಾಜವಾದಿ ಪಕ್ಷ (ಎಸ್‌ಪಿ)ದ ಮಿತ್ರ ಪಕ್ಷವಾಗಿದೆ. ಎಸ್‌ಪಿ ಮತ್ತು ಆರ್‌ಎಲ್‌ಡಿ ಎರಡೂ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ. ಕೆಲವೇ ದಿನಗಳ ಹಿಂದೆ, ಎರಡೂ ಪಕ್ಷಗಳು – ಎಸ್‌ಪಿ ಮತ್ತು ಆರ್‌ಎಲ್‌ಡಿ – ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವುದಾಗಿ ಘೋಷಿಸಿದ್ದವು.
ಮತ್ತೊಮ್ಮೆ ಎನ್‌ಡಿಎ ತೆಕ್ಕೆಗೆ ಮರಳಿದ ಪಕ್ಷಗಳ ಸುದೀರ್ಘ ಪಟ್ಟಿಯಲ್ಲಿ ಆರ್‌ಎಲ್‌ಡಿ ಈಗ ಜೆಡಿಯು ಮತ್ತು ಅಕಾಲಿದಳವನ್ನು ಸೇರಿಕೊಂಡಿದೆ. ಜೆಡಿಯು ಮಹಾಘಟಬಂಧನ ಮತ್ತು ಇಂಡಿಯಾ ಮೈತ್ರಿಕೂಟದಿಂದ ಹೊರ ಬಂದ ಜನತಾ ದಳ (ಯುನೈಟೆಡ್‌) ಪಕ್ಷವು ಪುನಃ ಎನ್‌ಡಿಎಯ ಭಾಗವಾಗಿ ಸರ್ಕಾರವನ್ನು ರಚಿಸಿದೆ. ಈಗ ಅಕಾಲಿದಳ ಕೂಡ ಎನ್‌ಡಿಎ ಭಾಗವಾಗಲಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಸೀಟು ಹಂಚಿಕೆಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆಂದು ತೋರುತ್ತದೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement