ವೀಡಿಯೊ..| ಆಘಾತಕಾರಿ ಘಟನೆ ; ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವು

ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ.
ಇಂಡೋನೇಷ್ಯಾದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಕ್ರೀಡಾಂಗಣದಲ್ಲೇ ಮೃತಪಟ್ಟಿದ್ದಾನೆ. ಇಂಡೋನೇಷ್ಯಾದ 2 FLO FC ಬಂಡಂಗ್ ಮತ್ತು FBI ಸುಬಾಂಗ್ ನಡುವಿನ ಫುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ಆಘಾತಕಾರಿ ಘಟನೆ ನಡೆಯಿತು.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೌಹಾರ್ದಯುತವಾದ ಪಂದ್ಯದಲ್ಲಿ ಸುಬಾಂಗ್‌ ತಂಡದಲ್ಲಿ ಭಾಗವಹಿಸಿದ್ದ ಸೆಪ್ಟೈನ್ ರಹರ್ಜಾ ಎಂಬ ವ್ಯಕ್ತಿ ಕ್ರೀಡಾಂಗಣದಲ್ಲಿ ಆಟವಾಡುವ ವೇಳೆ ಆತನಿಗೆ ಸಿಡಿಲು ಬಡಿದಿದೆ.

ಸಾಮಾಜಿಕವಾಗಿ ವೈರಲ್ ಆಗಿರುವ ವೀಡಿಯೊದಲ್ಲಿ, ಫುಟ್‌ಬಾಲ್ ಆಟಗಾರನು ಮೈದಾನದಲ್ಲಿ ಆಕಸ್ಮಿಕವಾಗಿ ನಡೆದುಕೊಂಡು ಹೋಗುವುದನ್ನು ಕಾಣಬಹುದು, ನಂತರ ಆತನಿಗೆ ಸಿಡಿಲು ಬಡಿದು ಆತ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ಮೈದಾನದಲ್ಲಿದ್ದ ಇತರ ಆಟಗಾರರು ಸಂಪೂರ್ಣ ಆಘಾತದ ಸ್ಥಿತಿಯಲ್ಲಿದ್ದರು. ತಕ್ಷಣವೇ ಅಲ್ಲಿದ್ದ ಇತರ ಆಟಗಾರರು ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಲಿಲ್ಲ. ಅಷ್ಟೋತ್ತಿಗಾಗಲೇ ಆತ ಮೃತಪಟ್ಟಿದ್ದ.

https://twitter.com/githii/status/1756606815033282759?ref_src=twsrc%5Etfw%7Ctwcamp%5Etweetembed%7Ctwterm%5E1756606815033282759%7Ctwgr%5E9134c54963149f11af92b5aae157c3f49b6e689f%7Ctwcon%5Es1_&ref_url=https%3A%2F%2Fwww.freepressjournal.in%2Fsports%2Fshocking-footballer-dies-after-being-hit-by-lightning-during-a-match-in-indonesia-video-goes-viral

ಫುಟ್ಬಾಲ್ ಪಂದ್ಯದ ವೇಳೆ ಇಂತಹ ದಾರುಣ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ರೆಜಿಲ್‌ನಲ್ಲಿ ನಡೆದ ಪಂದ್ಯದ ವೇಳೆ ಫುಟ್‌ಬಾಲ್ ಪಿಚ್‌ನಲ್ಲಿ ಸಿಡಿಲು ಬಡಿದು ಓರ್ವ ಆಟಗಾರ ಮೃತಪಟ್ಟಿದ್ದ ಹಾಗೂ ಆರು ಮಂದಿ ಗಾಯಗೊಂಡಿದ್ದರು. ಮೈದಾನದಲ್ಲಿ ಕುಸಿದು ಬಿದ್ದ 21 ವರ್ಷದ ಫುಟ್ಬಾಲ್ ಆಟಗಾರನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ನಂತರ ಮೃತಪಟ್ಟಿದ್ದ.
ಇದೇ ರೀತಿಯ ಘಟನೆಯು ಆಗಸ್ಟ್ 2023 ರಲ್ಲಿ ಸಂಭವಿಸಿತ್ತು, ನಿಕರಾಗುವಾದ ಮನಾಗುವಾದಲ್ಲಿ ಸಿಡಿಲು ಬಡಿದು ಯುವ ಫುಟ್ಬಾಲ್ ಆಟಗಾರ ಸಾವಿಗೀಡಾಗಿದ್ದ. ಆಗಸ್ಟ್ 2022 ರಲ್ಲಿ, ಜಾರ್ಖಂಡ್‌ನ ಗೋಮಿಯಾ ಜಿಲ್ಲೆಯ ಹಜಾರಿ ಗ್ರಾಮದಲ್ಲಿ ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 19 ವರ್ಷದ ಯುವಕ ಮೃತಪಟ್ಟಿದ್ದ. ಮೃತನನ್ನು ಹಜಾರಿ ಗ್ರಾಮದ ನಿವಾಸಿ ವಿಶಾಂತ ಎಂದು ಗುರುತಿಸಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement