ವೀಡಿಯೊ..| ಫ್ಲೋರಿಡಾದ ಹೆದ್ದಾರಿಯಲ್ಲಿ ಜೆಟ್‌ ವಿಮಾನ ಅಪಘಾತಕ್ಕೀಡಾದ ಕ್ಷಣವನ್ನು ನಿಖರವಾಗಿ ಸೆರೆ ಹಿಡಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ | ವೀಕ್ಷಿಸಿ

ಫೆಬ್ರವರಿ 10 ರಂದು ಫ್ಲೋರಿಡಾದ ನೇಪಲ್ಸ್ ಬಳಿ ಜನನಿಬಿಡ ಹೆದ್ದಾರಿಯಲ್ಲಿ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ಅಪಘಾತಕ್ಕೀಡಾದ ನಿಖರವಾದ ಕ್ಷಣವನ್ನು ತೋರಿಸುವ ಭಯಾನಕ ವೀಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಕಳೆದ ಶುಕ್ರವಾರ ನೈಋತ್ಯ ಫ್ಲೋರಿಡಾದಲ್ಲಿ ಇಂಟರ್‌ಸ್ಟೇಟ್ 75 ರಲ್ಲಿ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ಇಬ್ಬರು ಸಾವಿಗೀಡಾದ ನಾಟಕೀಯ ಕ್ಷಣಗಳನ್ನು ಡ್ಯಾಶ್‌ಬೋರ್ಡ್ ಕ್ಯಾಮೆರಾ ಸೆರೆ ಹಿಡಿದಿದೆ. ಟ್ರಕ್ಕರ್‌ನ ಕ್ಯಾಮೆರಾದಲ್ಲಿ ಜೆಟ್ ರಸ್ತೆ ಬದಿಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ.
ಬೊಂಬಾರ್ಡಿಯರ್ ಚಾಲೆಂಜರ್ 600 ಬ್ಯುಸಿನೆಸ್ ಜೆಟ್ ವಾಹನ ನಿಬಿಡ ರಸ್ತೆಯಲ್ಲಿ ಪತನವಾಗುವಾಗ ವಿಮಾನದಲ್ಲಿ ಐದು ಜನರಿದ್ದರು, ಅದು ರಸ್ತೆಗೆ ಅಪ್ಪಳಿಸಿ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಭಾರಿ ಬೆಂಕಿ ಹೊತ್ತಿಕೊಂಡಿತು.

ಬಂಬಾರ್ಡಿಯರ್ ಚಾಲೆಂಜರ್ 600 ಬ್ಯುಸಿನೆಸ್ ಜೆಟ್ ಓಹಿಯೋದಿಂದ ನೇಪಲ್ಸ್‌ಗೆ ತೆರಳುತ್ತಿತ್ತು ಎಂದು ಎನ್‌ಟಿಎಸ್‌ಬಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ, ವಿಮಾನದ ಎರಡೂ ಟರ್ಬೋಫ್ಯಾನ್ ಎಂಜಿನ್‌ಗಳು ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ವಿಫಲವಾಗಿದೆ ಎಂದು ಪೈಲಟ್ ವರದಿ ಮಾಡಿದ್ದಾರೆ. ನಂತರದಲ್ಲಿ ಫೋರ್ಟ್ ಲಾಡರ್‌ಡೇಲ್ ಎಕ್ಸಿಕ್ಯುಟಿವ್ ಏರ್‌ಪೋರ್ಟ್‌ಗೆ ಜೆಟ್ ಹೋಗಿ ಲ್ಯಾಂಡ್‌ ಆಗಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ನೈಋತ್ಯ ಫ್ಲೋರಿಡಾದ ರಸ್ತೆಯಲ್ಲಿ ಪತನವಾಗಿದೆ.

ಅಪಘಾತದಲ್ಲಿ ಪೈಲಟ್ ಆಗಿದ್ದ ಓಕ್ಲ್ಯಾಂಡ್ ಪಾರ್ಕ್‌ನ ಎಡ್ವರ್ಡ್ ಡೇನಿಯಲ್ ಮರ್ಫಿ (50) ಮತ್ತು ಸಹ ಪೈಲಟ್ ಆಗಿದ್ದ ಪೊಂಪಾನೊ ಬೀಚ್‌ನ ಇಯಾನ್ ಹಾಫ್‌ಮನ್ (65) ಸಾವಿಗೀಡಾಗಿದ್ದಾರೆ.
ಓಹಿಯೋದ ಕೊಲಂಬಸ್‌ನ ಇಬ್ಬರು ಪ್ರಯಾಣಿಕರಾದ ಆರನ್ ಬೇಕರ್, 35, ಮತ್ತು ಆಡ್ರಾ ಗ್ರೀನ್, 23, ಜೊತೆಗೆ ಸಿಡ್ನಿ ಆನ್ ಬೋಸ್ಮನ್ಸ್, 27 ಅವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು WFTX ಶನಿವಾರ ವರದಿ ಮಾಡಿದೆ.
ಫ್ಲೋರಿಡಾ ಹೈವೇ ಪೆಟ್ರೋಲ್ ಪ್ರಕಾರ, ಅಪಘಾತದಲ್ಲಿ ಹಾನಿಗೊಳಗಾದ ವಾಹನಗಳಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement