ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಮುಂಬೈ..| ಪಾಕಿಸ್ತಾನಕ್ಕೆ ತೆರಳುತ್ತಿದ್ದ ಚೀನಾದ ಹಡಗು ತಡೆದ ಭಾರತದ ಭದ್ರತಾ ಅಧಿಕಾರಿಗಳು : ಅಧಿಕಾರಿಗಳಿಗೆ ಸಿಕ್ಕಿದ್ದೇನು ಗೊತ್ತೆ..?

ಮುಂಬೈ : ಚೀನಾದಿಂದ ಪಾಕಿಸ್ತಾನದ ಕರಾಚಿಗೆ ಭಾರೀ ಸರಕು ಹೊತ್ತು ಹೊರಟಿದ್ದ ಹಡಗನ್ನು ಭಾರತದ ಭದ್ರತಾ ಸಂಸ್ಥೆಯ ಅಧಿಕಾರಿಗಳು ಮುಂಬೈನ ನ್ಹಾವಾ ಶೇವಾ ಬಂದರಿನಲ್ಲಿ ವಶಕ್ಕೆ ಪಡೆದಿದ್ದಾರೆ.ಈ ಹಡಗು ಪಾಕಿಸ್ತಾನಕ್ಕೆ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಬಳಸಬಹುದಾದ ಸರಕು ಹೊಂದಿರುವ ಅನುಮಾನದ ಮೇರೆಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇರೆಗೆ ಮಾಲ್ಟಾ ದೇಶದ ಧ್ವಜ ಹೊಂದಿದ್ದ ‘ಸಿಎಂಎ ಸಿಜಿಎಂ ಆ್ಯಟಿಲಾ’ ಹೆಸರಿನ ಹಡಗನ್ನು ಜನವರಿ 23 ರಂದು ಕಸ್ಟಮ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಡಗಿನಲ್ಲಿ ನಾಗರಿಕ ಮತ್ತು ಸೇನಾ ಬಳಕೆ ಇವೆರಡಕ್ಕೂ ಉಪಯೋಗವಾಗುವ ತಂತ್ರಜ್ಞಾನದ ಸರಕು ಇರುವುದು ದೃಢಪಟ್ಟಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಡಗಿನಲ್ಲಿ ಇಟಲಿಯ ಕಂಪನಿಯೊಂದು ತಯಾರಿಸಿರುವ ಕಂಪ್ಯೂಟರ್‌ ನ್ಯೂಮರಿಕಲ್‌ ಕಂಟ್ರೋಲ್‌ (ಸಿಎನ್‌ಸಿ) ಯಂತ್ರಗಳು ಇದ್ದವು. ಹಡಗಿನಲ್ಲಿ ಸಾಗಿಸುತ್ತಿದ್ದ ಸರಕುಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹಡಗಿನಲ್ಲಿ ಪತ್ತೆಯಾದ ಸಿಎನ್‌ಸಿ ಯಂತ್ರಗಳನ್ನು ಪಾಕ್ ತನ್ನ ಪರಮಾಣು ಕಾರ್ಯಕ್ರಮಗಳಿಗೆ ಬಳಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಈ ಹಡಗಿನಲ್ಲಿ ಸುಮಾರು 22,180 ಕೆ.ಜಿಯಷ್ಟು ಸರಕನ್ನು ಸಾಗಿಸಲಾಗುತ್ತಿತ್ತು. ದಾಖಲೆಗಳ ಹಾಗೂ ಸರಕು ಸಾಗಣೆಯ ಬಿಲ್ ಪ್ರಕಾರ ಈ ಸರಕನ್ನು ಚೀನಾದ ‘ಶಾಂಘೈ ಜೆಎಕ್ಸ್‌ಇ ಗ್ಲೋಬಲ್‌ ಲಾಜಿಸ್ಟಿಕ್ಸ್‌’ ಕಂಪನಿಯು ಪಾಕಿಸ್ತಾನದ ಸಿಯಾಲ್‌ಕೋಟ್‌ನ ‘ಪಾಕಿಸ್ತಾನ್ ವಿಂಗ್ಸ್ ಪ್ರೈವೇಟ್‌ ಲಿಮಿಟೆಡ್‌’ ಕಂಪನಿಗೆ ಕಳುಹಿಸಿದೆ ಎಂದು ಎನ್ನಲಾಗಿದೆ.

ಪ್ರಮುಖ ಸುದ್ದಿ :-   ವಿಜಯವಾಡ : ರೋಡ್ ಶೋ ವೇಳೆ ಕಲ್ಲೆಸೆತ ; ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement