ಮನೋಹರಲಾಲ ಖಟ್ಟರ್ ರಾಜೀನಾಮೆ ನಂತರ ಹರಿಯಾಣದ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಆಯ್ಕೆ

ನವದೆಹಲಿ : ನಯಾಬ್ ಸಿಂಗ್ ಸೈನಿ ಅವರು ಹರಿಯಾಣದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮಂಗಳವಾರ ಮಧ್ಯಾಹ್ನ ಪ್ರಕಟಿಸಿದೆ. ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ , ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ಜೆಜೆಪಿಯ ಮೂವರು ಸದಸ್ಯರು ಸೇರಿದಂತೆ ಮನೋಹರ ಖಟ್ಟರ್‌ ಅವರ ಇಡೀ ಸಚಿವ ಸಂಪುಟ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ನೂತನ ಮುಖ್ಯಮಂತ್ರಿ ಆಯ್ಕೆ ನಡೆದಿದೆ.
54 ವರ್ಷದ ಸೈನಿ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿ ಮಾಡಿದ್ದಾರೆ.
ಇತರೆ ಹಿಂದುಳಿದ ವರ್ಗಗಳ ಸಮುದಾಯ(ಒಬಿಸಿ)ದ ಪ್ರಭಾವಿ ವ್ಯಕ್ತಿಯಾಗಿರುವ ನಯಾಬ್ ಸೈನಿ ಅವರು ಕುರುಕ್ಷೇತ್ರದಿಂದ ಬಿಜೆಪಿಯ ಲೋಕಸಭಾ ಸಂಸದರಾಗಿದ್ದಾರೆ ಮತ್ತು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಜೆಪಿಯ ಹರಿಯಾಣದ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರು ಖಟ್ಟರ್ ಅವರ ಅತ್ಯಂತ ಆಪ್ತರೂ ಆಗಿದ್ದಾರೆ. ಬಿಜೆಪಿ ಸರ್ಕಾರದ ಎರಡನೇ (ಸತತ) ಅವಧಿಯು ಈ ವರ್ಷ ಕೊನೆಯಲ್ಲಿ ಮುಕ್ತಾಯವಾಗಲಿದೆ.

ಕೃಷಿ ಸಚಿವ ಅರ್ಜುನ ಮುಂಡಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಭಾಗವಹಿಸಿದ್ದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯ ನಂತರ ನಯಾಬ್‌ ಸೈನಿ ಅವರನ್ನು ಆಯ್ಕೆ ಮಾಡಲಾಯಿತು.
ಶಾಸಕರು ಮತ್ತು ರಾಜ್ಯ ಘಟಕವು ಚುಕ್ಕಾಣಿ ಹಿಡಿಯಲುಹೊಸ ನಾಯಕತ್ವ ಬಯಸುತ್ತದೆ ಎಂದು ವರದಿಯಾಗಿದೆ, ಏಪ್ರಿಲ್ / ಮೇ ಲೋಕಸಭೆ ಚುನಾವಣೆ ಮತ್ತು ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆಗೆ ಮೊದಲು ಪಕ್ಷವನ್ನು ಪುನಶ್ಚೇತನಗೊಳಿಸಲು ಬಿಜೆಪಿ ಹೈಕಮಾಂಡ್‌ ಬದಲಾವಣೆಗೆ ಮುಂದಾಗಿದೆ. ಗುಜರಾತ್ ಮತ್ತು ಉತ್ತರಾಖಂಡದಲ್ಲಿಯೂ ಚುನಾವಣೆಗೂ ಮುನ್ನ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಪ್ರಮುಖ ಸುದ್ದಿ :-   ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ; ನಾಲ್ವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಬಿಜೆಪಿಯು ಕರ್ನಾಟಕದಲ್ಲಿ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿತ್ತು. 2023ರ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬಿಎಸ್ ಯಡಿಯೂರಪ್ಪ ಅವರನ್ನು ಬದಲಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಯಿತು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಅಚ್ಚರಿಯ ಗೆಲುವು ದಾಖಲಿಸುವ ಮೂಲಕ ಪಕ್ಷಕ್ಕೆ ಹಿನ್ನಡೆಯಾಯಿತು.
ನಯಾಬ್ ಸಿಂಗ್ ಸೈನಿ ಅವರ ಆಯ್ಕೆಯು ಲೋಕಸಭೆ ಚುನಾವಣೆಯ ಮೊದಲು ಪ್ರತಿ ರಾಜ್ಯದಲ್ಲಿ ಜಾತಿ ಮತ್ತು ಒಬಿಸಿ(OBC) ಸಮೀಕರಣಗಳ ಮೇಲೆ ಬಿಜೆಪಿಯ ಗಮನವನ್ನು ಕೇಂದ್ರೀಕರಿಸುತ್ತದೆ. ಮಧ್ಯಪ್ರದೇಶ, ರಾಜಸ್ಥಾನ, ಮತ್ತು ಛತ್ತೀಸ್‌ಗಢ ಚುನಾವಣೆಗಳ ನಂತರ ಬಿಜೆಪಿಯು ಇದೇ ರೀತಿಯ ನಡೆಗಳನ್ನು ಅನುಸರಿಸಿದೆ.

ಲೋಕಸಭೆ ಸೀಟು ಹಂಚಿಕೆಯ ಮಾತುಕತೆ ವಿಫಲವಾದ ನಂತರ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿ ಮುರಿದುಬಿದ್ದ ನಂತರ ಹರಿಯಾಣದಲ್ಲಿನ ರಾಜಕೀಯ ಚಿತ್ರಣ ಬದಲಾಗದಂತೆ ನೋಡಿಕೊಳ್ಳಲು ಈ ಕ್ರಮ ಬಂದಿದೆ. ಈಗ ಮಾಜಿ ಉಪಮುಖ್ಯಮಂತ್ರಿಯಾಗಿರುವ ದುಶ್ಯಂತ್ ಚೌತಾಲಾ ಅವರ ಜೆಜೆಪಿ (JJP) ರಾಜ್ಯದ 10 ಲೋಕಸಭಾ ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಬಯಸಿತ್ತು, ಆದರೆ ಬಿಜೆಪಿ ಒಂದು ಸ್ಥಾನ ಕೊಡಲು ಒಪ್ಪಿತ್ತು.
Jಹರಿಯಾಣವು ಕೇವಲ 10 ಲೋಕಸಭಾ ಸ್ಥಾನಗಳನ್ನು ಹೊಂದಿರಬಹುದು, ಆದರೆ ಇದು ಹಿಂದಿ ಹೃದಯ ಭಾಗದ ರಾಜ್ಯವಾಗಿದೆ ಮತ್ತು ಬಿಜೆಪಿಗೆ ನಿರ್ಣಾಯಕ ಯುದ್ಧಭೂಮಿಯಾಗಿದೆ. ಮಾಜಿ ಸಿಎಂ ಖಟ್ಟರ್ ಈಗ ಲೋಕಸಭಾ ಚುನಾವಣೆಗೆ ಪಾದಾರ್ಪಣೆ ಮಾಡಬಹುದು. ಈಗ ತೆರವಾಗಲಿರುವ ಕುರುಕ್ಷೇತ್ರ ಸ್ಥಾನದಲ್ಲಿ ಅವರು ಸ್ಪರ್ಧಿಸಬಹುದು.

ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement