ವೀಡಿಯೊ….| ಕುಮಟಾ : ಕಡ್ಲೆಯ ಸಮುದ್ರ ತೀರದಲ್ಲಿ ಬೃಹತ್‌ ಆಮೆ ಕಳೇಬರ ಪತ್ತೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನ ಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಆಲಿವರ್ ರಿಡ್ಲೆ ತಳಿಯ ಬೃಹತ್‌ ಆಮೆಯ ಕಳೇಬರ ಪತ್ತೆಯಾಗಿದೆ. ಆಮೆಯು ಮೂರು ಅಡಿಗಿಂತ ಹೆಚ್ಚು ( 96 ಸೆಂಮೀ) ಉದ್ದವಿದೆ. ಇದರ ವಯಸ್ಸು 30 ರಿಂದ 40 ವರ್ಷ ಆಗಿರಬಹುದು. ಈ ಜಾತಿಯ ಬೃಹತ್‌ ಆಮೆಗಳು ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ವಾಸಿಸುತ್ತವೆ.
ಮೀನುಗಾರಿಕೆಗಾಗಿ ಆಳೆ ಸಮುದ್ರದಕ್ಕೆ ಹೋದಾಗ ಅಪರೂಪಕ್ಕೆ ಮೀನುಗಾರಿಕಾ ಬೊಟುಗಳ ಬಲೆಯಲ್ಲಿ ಸಿಕ್ಕಿ ಬೀಳುತ್ತವೆ. ಬಲೆಯಲ್ಲಿ ಸಿಕ್ಕಿ ಬಿದ್ದ ಆಮೆಗಳನ್ನು ಮೀನುಗಾರರು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡುತ್ತಾರೆ. ಆದರೆ ಕೆಲವೊಮ್ಮೆ ಮೀನಿನ ಬಲೆಯ ದಾರಗಳು ಆಮೆಗಳ ಕುತ್ತಿಗೆಗೆ ಸಿಕ್ಕಿ ಅವು ಸಾಯುತ್ತವೆ. ಸತ್ತ ನಂತರ ಕೆಲವಷ್ಟು ಈ ರೀತಿ ತೀರಕ್ಕೆ ತೇಲಿ ಬರುತ್ತದೆ ಎಂದು ಮೀನುಗಾರರಾದ ಮಂಜುನಾಥ ಅಂಬಿಗ, ಮಹಾದೇವ ಅಂಬಿಗ ಹೇಳುತ್ತಾರೆ.

ಮೀನುಗಾರರಿಗೆ ಆಮೆ ಎಂದರೆ ದೇವರ ರೂಪ. ಹೀಗಾಗಿ ಅವರು ಇದನ್ನು ತಿನ್ನುವುದಿಲ್ಲ ಹಾಗೂ ಮಾರಾಟವನ್ನು ಮಾಡುವುದಿಲ್ಲ ಎಂದು ಮಂಜುನಾಥ ಅಂಬಿಗ ಹೇಳುತ್ತಾರೆ.
ಸಹಾಯಕ ಅರಣ್ಯ ಅಧಿಕಾರಿಗಳಾದ ಲೋಹಿತ ಅವರು ಆಮೆಯ ಕಳೆಬರಹವನ್ನು ಗುರುತಿಸಿ ಇದು ಆಲಿವರ್ ರಿಡ್ಲೆ ವರ್ಗಕ್ಕೆ ಸೇರಿದ ಆಮೆಯಾಗಿದೆ ಎಂದು ಹೇಳಿದ್ದಾರೆ. ಈ ಜಾತಿಯ ಆಮೆಗಳು ಅರಬ್ಬೀ ಸಮುದ್ರ ತೀರದಲ್ಲಿ ಹೇರಳ ಸಂಖ್ಯೆಯಲ್ಲಿದೆ. ಇವು ಸಮುದ್ರ ತೀರಕ್ಕೆ ಬಂದು ಮೊಟ್ಟೆ ಇಟ್ಟು ಹೋಗುತ್ತವೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸರ್ಕುಳಿ ಸೇತವೆ ಮೇಲೆ 3 ಅಡಿಗಳಷ್ಟು ನೀರು

ಅರಬ್ಬಿ ಸಮುದ್ರದ ಕಡ್ಲೆ ಯ ತೀರದಲ್ಲಿ ಇರುವ ಅಮೆಯ ಕಳೆಬರಹವನ್ನು ಸೋಮವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆಮೆಯ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅರಣ್ಯ ಅಧಿಕಾರಿ ರಾಘವೇಂದ್ರ ಹೇಳುವ ಪ್ರಕಾರ ಆಮೆಗೆ 40 ವರ್ಷಕ್ಕೂ ಹೆಚ್ಚು ವರ್ಷವಾಗಿದೆ. ಇದು 96 ಸೆಂಟಿ ಮೀಟರ್‌ ಉದ್ದವಿದೆ ಎಂದು ತಿಳಿಸಿದ್ದಾರೆ.

ಚಿಪ್ಪಿನ ಉದ್ದ (ಚಿಪ್ಪಿನ ವಕ್ರರೇಖೆಯ ಉದ್ದ) ಹಿಡಿದರೆ ಸುಮಾರು 61 ಸೆಂಮೀ (2 ಅಡಿ) ವರೆಗೆ ಬೆಳೆಯುವ ಆಲಿವ್ ರಿಡ್ಲಿ ಸಮುದ್ರ ಆಮೆಯು ಅದರ ಆಲಿವ್-ಬಣ್ಣದ ಚಿಪ್ಪಿನಿಂದಾಗಿ ಈ ಹೆಸರನ್ನು ಪಡೆದಿದೆ, ಇದು ಸ್ವಲ್ಪಮಟ್ಟಿಗೆ ಇದರ ಚಿಪ್ಪು ಹೃದಯದ ಆಕಾರದಲ್ಲಿರುತ್ತದೆ. ಗಂಡು ಮತ್ತು ಹೆಣ್ಣು ಒಂದೇ ಗಾತ್ರದಲ್ಲಿ ಬೆಳೆಯುತ್ತವೆ, ಆದರೆ ಗಂಡುಗಳಿಗೆ ಹೋಲಿಸಿದರೆ ಹೆಣ್ಣುಗಳು ಸ್ವಲ್ಪ ಹೆಚ್ಚು ದುಂಡಾದ ಚಿಪ್ಪನ್ನು ಹೊಂದಿರುತ್ತವೆ. ಹೀಗಾಗಿ ಇಲ್ಲಿ ಸಿಕ್ಕ ಆಲಿವರ್‌ ರಿಡ್ಲೆ ಜಾತಿ ಕಡಲ ಆಮೆಯ ಕಳೇಬರ  3 ಅಡಿ(ಫೂಟ್‌)ಗಳಿಗಿಂತ ಉದ್ದವಿದೆ. ಇದು ಬಲು ಅಪರೂಪದ ವಿದ್ಯಮಾನವಾಗಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement