ವೀಡಿಯೊ…: ಹಡಗು ಡಿಕ್ಕಿ ಹೊಡೆದ ನಂತರ ಕುಸಿದುಬಿದ್ದ ಪ್ರತಿದಿನ 30 ಸಾವಿರಕ್ಕೂ ಹೆಚ್ಚು ವಾಹನ ಓಡಾಡುವ 2.6 ಕಿಮೀ ಉದ್ದದ ಬೃಹತ್‌ ಸೇತುವೆ..!

ವಾಷಿಂಗ್ಟನ್: ಮಂಗಳವಾರ ಮುಂಜಾನೆ ಅಮೆರಿಕದ ಬಾಲ್ಟಿಮೋರ್‌ ನಗರದಲ್ಲಿದ್ದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ದೊಡ್ಡ ಬೃಹತ್‌ ಹಡಗು ಡಿಕ್ಕಿ ಹೊಡೆದ ನಂತರ ಅದು ಕುಸಿದು ಬಿದ್ದಿದೆ. 1.6-ಮೈಲಿ (2.6-ಕಿಲೋಮೀಟರ್), ಚತುಷ್ಪಥಧ ಸೇತುವೆಯು ಮುನ್ಸಿಪಲ್ ಬಾಲ್ಟಿಮೋರ್‌ನ ನೈಋತ್ಯಕ್ಕೆ ಪಟಾಪ್ಸ್ಕೋ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು.
ಡಿಕ್ಕಿಯ ರಭಸಕ್ಕೆ ಸೇತುವೆ ಮೇಲಿದ್ದ ಹಲವು ವಾಹನಗಳು ಸಹ ನೀರಿಗೆ ಬಿದ್ದಿವೆ. ಕನಿಷ್ಠ ಇಪ್ಪತ್ತು ಜನರು ನೀರಿಗೆ ಬಿದ್ದಿದ್ದು ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸೈಟ್ ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ತುಣುಕಿನ ಪ್ರಕಾರ, ದೊಡ್ಡ ಹಡಗು ಸೇತುವೆಗೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಸೇತುವೆ ಕುಸಿದುಬಿದ್ದು ಮುಳುಗುವ ಮೊದಲು ಬೆಂಕಿ ಹೊತ್ತಿಕೊಂಡಿತು ಮತ್ತು ಅನೇಕ ವಾಹನಗಳು ಪಟಾಪ್ಸ್ಕೋ ನದಿಗೆ ಬೀಳಲು ಕಾರಣವಾಯಿತು.

ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಸಂವಹನ ನಿರ್ದೇಶಕ ಕೆವಿನ್ ಕಾರ್ಟ್‌ರೈಟ್ ಅವರು, ಕನಿಷ್ಠ ಇಪ್ಪತ್ತು ಜನರು ನೀರಿಗೆ ಬಿದ್ದಿದ್ದಾರೆ ಎಂದು ನಂಬಲಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು. ಕಾರ್ಟ್‌ರೈಟ್ ಪ್ರಕಾರ, ತುರ್ತು ಸ್ಪಂದನೆ ಏಜೆನ್ಸಿಗಳು 1:30am (ಸ್ಥಳೀಯ ಸಮಯ) ಸುಮಾರಿಗೆ 911 ಕರೆಗಳನ್ನು ಸ್ವೀಕರಿಸಿವೆ. ಫೋನ್‌ ಮಾಡಿದವರು ಬಾಲ್ಟಿಮೋರ್‌ನಿಂದ ಹೊರಹೋಗುತ್ತಿದ್ದ ಹಡಗು ಸೇತುವೆಯ ಕಾಲಂಗೆ ಬಡಿದು ಸೇತುವೆ ಕುಸಿಯಲು ಕಾರಣವಾಯಿತು ಎಂದು ಹೇಳಿದರು. ಆ ಸಮಯದಲ್ಲಿ ಸೇತುವೆಯ ಮೇಲೆ ಹಲವಾರು ವಾಹನಗಳು ಇದ್ದವು, ಅದರಲ್ಲಿ ಒಂದು ಟ್ರಾಕ್ಟರ್-ಟ್ರೇಲರ್ ಸಹ ಇತ್ತು ಎಂದು ನಂಬಲಾಗಿದೆ ಎಂದು ಅವರು ಹೇಳಿದ್ದಾರೆ.
“ಈಗ ನಮ್ಮ ಗಮನವು ಈ ಜನರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾರ್ಟ್‌ರೈಟ್ ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿ ಅತ್ಯದ್ಭುತ ದೃಶ್ಯಗಳನ್ನು ಸೆರೆ ಹಿಡಿದ ಚೀನಾದ ಡ್ರೋನ್‌...ವೀಕ್ಷಿಸಿ

“ಇದು ಭೀಕರ ಘಟನೆಯಾಗಿದೆ. ಕೆಲವು ಸರಕು ಅಥವಾ ಧಾರಕಗಳು ಸೇತುವೆ ಅವಶೇಷಗಳಲ್ಲಿ ನೇತಾಡುತ್ತಿವೆ, ಅಸುರಕ್ಷಿತ ಮತ್ತು ಅಸ್ಥಿರ ಪರಿಸ್ಥಿತಿಗಳಿರುವುದರಿಂದ ತುರ್ತು ಸ್ಪಂದನೆ ನೀಡುವ ತಂಡದವರು ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಸೇತುವೆ 1977 ರಲ್ಲಿ ಪ್ರಾರಂಭವಾಯಿತು. ಈ ಸೇತುವೆ ಮೇಲೆ ವರ್ಷಕ್ಕೆ 1.1 ಕೋಟಿ ವಾಹನಗಳು ಓಡಾಡುತ್ತವೆಯಂತೆ. ಇದು ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಜಾಲದ ಪ್ರಮುಖ ಭಾಗವಾಗಿದೆ, ಇದು ರಾಜಧಾನಿ ವಾಷಿಂಗ್ಟನ್ ಡಿಸಿ ಪಕ್ಕದಲ್ಲಿರುವ ಅಮೆರಿಕದ ಪೂರ್ವ ಕರಾವಳಿಯ ಕೈಗಾರಿಕಾ ನಗರವಾಗಿದೆ.
ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರವು ಅಂತಾರಾಜ್ಯ ಹೆದ್ದಾರಿಯ ಭಾಗವಾಗಿರುವ ಸೇತುವೆ ಮಾರ್ಗದಲ್ಲಿ ಚಲಿಸದಂತೆ ಹಾಗೂ ಪರ್ಯಾಯ ಮಾರ್ಗದಲ್ಲಿ ಹೋಗುವಂತೆ ಚಾಲಕರಿಗೆ ಸೂಚಿಸಿದೆ. ಶಿಪ್ ಮಾನಿಟರಿಂಗ್ ವೆಬ್‌ಸೈಟ್ MarineTraffic ಮಂಗಳವಾರ ಮುಂಜಾನೆ ಸೇತುವೆಯ ಕೆಳಗೆ ನಿಲ್ಲಿಸಿದ ಡಾಲಿ ಎಂಬ ಸಿಂಗಾಪುರದ ಧ್ವಜದ ಕಂಟೈನರ್ ಹಡಗನ್ನು ತೋರಿಸಿದೆ.

ಪ್ರಮುಖ ಸುದ್ದಿ :-   2100ರ ಹೊತ್ತಿಗೆ ಭಾರತದ ಜನಸಂಖ್ಯೆಯಲ್ಲಿ ಕುಸಿತ, ಆದ್ರೂ ಚೀನಾಕ್ಕಿಂತ 2.5 ಪಟ್ಟು ಹೆಚ್ಚು...! ಭಾರತದ ಜನಸಂಖ್ಯೆ ಎಷ್ಟಾಗಲಿದೆ ಗೊತ್ತಾ..?

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement