ಹುಲಿಗಳು ಮತ್ತು ಸಿಂಹಗಳಂತಹ ಪರಭಕ್ಷಕಗಳು ಕಾಡಿನಲ್ಲಿ ಅತ್ಯಂತ ಅಪಾಯಕಾರಿ ಮತ್ತು ನಿರ್ಭೀತ ಪ್ರಾಣಿಗಳು ಎಂಬುದು ಜನರಲ್ಲಿ ಒಂದು ಸಾಮಾನ್ಯ ಊಹೆಯಾಗಿದೆ. ಆದರೆ, ಸಿಂಹ ಅಥವಾ ಹುಲಿಗಳ ಮೇಲೆ ದಾಳಿ ಮಾಡಲೂ ಹಿಂಜರಿಯದ ಮತ್ತೊಂದು ಪ್ರಾಣಿ ಜೇನು ಬ್ಯಾಡ್ಜರ್. ಇದು ಪ್ರಪಂಚದ ಅತ್ಯಂತ ನಿರ್ಭೀತ ಪ್ರಾಣಿ ಎಂಬ ಖ್ಯಾತಿ ಗಳಿಸಿದೆ. ಅದರ ಸಣ್ಣ ಗಾತ್ರದ ಹೊರತಾಗಿಯೂ, ಈ ಪರಭಕ್ಷಕವು ಅದರ ಉಗ್ರ ರಕ್ಷಣಾ ಕೌಶಲ್ಯ ಮತ್ತು ಆಕ್ರಮಣಕಾರಿ ಸ್ವಭಾವದಿಂದ ನಿರ್ಭೀತ ಪ್ರಾಣಿ ಎಂದು ಖ್ಯಾತಿ ಗಳಿಸಿದೆ.
ಇಂಡಿಪೆಂಡೆಂಟ್ ಪ್ರಕಾರ, ಜೇನು ಬ್ಯಾಡ್ಜರ್ ಅನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ‘ವಿಶ್ವದ ಅತ್ಯಂತ ನಿರ್ಭೀತ ಪ್ರಾಣಿ’ ಎಂದು ಹೆಸರಿಸಲಾಗಿದೆ ಮತ್ತು ಈ ಪ್ರಾಣಿಗಳು ಸಿಂಹಗಳು ಮತ್ತು ಹೈನಾಗಳಂತಹ ದೊಡ್ಡ ಮಾಂಸಹಾರಿ ಪ್ರಾಣಿಗಳನ್ನು ಸಹ ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿವೆ.
ಹನಿ ಬ್ಯಾಡ್ಜರ್‌ಗಳು ನಿರ್ಭೀತ ಪ್ರಾಣಿ ಮಾತ್ರವಲ್ಲದೆ ಸಾಕಷ್ಟು ಬುದ್ಧಿವಂತ ಪ್ರಾಣಿ ಕೂಡ ಹೌದು. ಇದರ ಚೂಪಾದ ಹಲ್ಲುಗಳು ಮತ್ತು ಉಗುರುಗಳು ಇದನ್ನು ಇನ್ನಷ್ಟು ಅಪಾಯಕಾರಿಯಾಗಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ, ಈ ಜಾತಿ ಪ್ರಾಣಿಗಳು ವೇಗವಾಗಿ ನಾಶವಾಗುತ್ತಿವೆ. ಇದನ್ನು ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳ ವರ್ಗಕ್ಕೆ ಸೇರಿಸುವ ಮೂಲಕ ರಕ್ಷಿಸಲಾಗಿದೆ. ಆದಾಗ್ಯೂ, ಜೇನು ಬ್ಯಾಡ್ಜರ್‌ಗಳು ಸಾಮಾನ್ಯವಾಗಿ ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬರುತ್ತವೆ. ಅಲ್ಲದೆ, ಈ ಪ್ರಾಣಿಗಳು ಉಪ-ಸಹಾರನ್ ಆಫ್ರಿಕಾ, ಸೌದಿ ಅರೇಬಿಯಾ, ಇರಾನ್ ಮತ್ತು ಪಶ್ಚಿಮ ಏಷ್ಯಾದಾದ್ಯಂತ ಕಂಡುಬರುತ್ತವೆ. ದಕ್ಷಿಣ ಆಫ್ರಿಕಾದ ಕಂಟ್ರಿ ಲೈಫ್ ಪ್ರಕಾರ, ಇತರ ಮಾಂಸಹಾರಿ ಪ್ರಾಣಿಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಪ್ರಾಣಿಗಳ ದೇಹ ವಿನ್ಯಾಸಗೊಂಡಿದೆ. ಅವುಗಳ ಚೂಪಾದ ಉಗುರುಗಳು ಮತ್ತು ನಂಬಲಾಗದಷ್ಟು ಬಲವಾದ ದವಡೆಗಳು ಹಾಗೂ ದಪ್ಪ ಚರ್ಮ ವೈರಿ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಇದಕ್ಕೆ ಪ್ರಮುಖ ಅಸ್ತ್ರಗಳಾಗಿವೆ.
ಇತ್ತೀಚೆಗೆ, ಒಂದು ಜೋಡಿ ಜೇನು ಬ್ಯಾಡ್ಜರ್‌ಗಳು ಅನೇಕ ಸಿಂಹಗಳನ್ನು ಎದುರಿಸಿದ ಅಸಾಮಾನ್ಯ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಅಧಿಕಾರಿ ಸುಸಂತ ನಂದಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಎರಡು ಜೇನು ಬ್ಯಾಡ್ಜರ್‌ಗಳು ಸಿಂಹಗಳಿಗೆ ಕ್ಯಾರೆ ಅನ್ನದೆ ಅವುಗಳನ್ನೇ ಹಿಮ್ಮೆಟ್ಟಿಸುವುದನ್ನು ಕಾಣಬಹುದು. ಗಾತ್ರದಲ್ಲಿ ಚಿಕ್ಕದಾಗಿದ್ದರೂ ತನಗಿಂತ ಬಹಳ ದೊಡ್ಡ ಪ್ರಾಣಿಯಾದ ಹಾಗೂ ತನಗಿಂತ ಹೆಚ್ಚಿನ ಸಂಖ್ಯೆಗಳಲ್ಲಿದ್ದ ಸಿಂಹಗಳ ವಿರುದ್ಧವೇ ಜೇನು ಬ್ಯಾಡ್ಜರ್‌ಗಳು ಹೋರಾಡಿ ಅವುಗಳನ್ನು ಹೆದರಿಸುವುದನ್ನು ನೋಡಬಹುದು.
ಜೇನು ಬ್ಯಾಡ್ಜರ್ ಸುಮಾರು ಎರಡು ಅಡಿ ಉದ್ದವಿರುತ್ತದೆ ಮತ್ತು ಅದರ ಬಾಲವು ಅದರ ಉದ್ದಕ್ಕೆ ಮತ್ತೊಂದು ಅಡಿ ಉದ್ದವನ್ನು ಸೇರಿಸುತ್ತದೆ. ಒಂದು ಪಾದವು 12 ಇಂಚುಗಳು ಇರುತ್ತದೆ. ಜೇನು ಬ್ಯಾಡ್ಜರ್ ಸುಮಾರು 10-12 ಕಿಲೋ ತೂಗುತ್ತದೆ, ಇದು ಸರಾಸರಿ ಎರಡು ವರ್ಷದ ಇದರ ಆಹಾರವು ಸಣ್ಣ ಸಸ್ತನಿಗಳು ಮತ್ತು ದೊಡ್ಡ ಸಸ್ತನಿಗಳ ಮರಿಗಳು, ಪಕ್ಷಿಗಳು, ಸರೀಸೃಪಗಳು, ಕೀಟಗಳು, ಸತ್ತ ಪ್ರಾಣಿಗಳು ಮತ್ತು ರಸಭರಿತವಾದ ಹಣ್ಣುಗಳಾಗುತ್ತವೆ. ಜೇನು ಬ್ಯಾಡ್ಜರ್ ತನ್ನ ಬಲವಾದ ಉಗುರುಗಳಿಂದ ಜೇನುಗೂಡುಗಳಿಗೆ ದಾಳಿ ಇಡುತ್ತವೆ. ಜೇನು ಕಂಡರೆ ಬಿಡುವುದಿಲ್ಲ. ಹನಿ ಬ್ಯಾಜರ್‌ಗಳ ಮುಖ್ಯ ಬೆದರಿಕೆ ಮಾನವ. ಇವುಗಳು ಹೆಚ್ಚಾಗಿ ವಿಷ ಪ್ರಾಶನ ಮತ್ತು ಅಥವಾ ಬಲೆ ಬಿದ್ದು ಸಾಯುತ್ತಿವೆ.
ನಿಮ್ಮ ಕಾಮೆಂಟ್ ಬರೆಯಿರಿ