ಕುಮಟಾ : ನಿವೃತ್ತ ಮುಖ್ಯಾಧ್ಯಾಪಕ ಹೊಲನಗದ್ದೆ ಆರ್.ಎನ್.ಹೆಗಡೆ ನಿಧನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಆರ್.ಎನ್.ಹೆಗಡೆ (66) ಅವರು ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಆರ್.ಎನ್.ಹೆಗಡೆ ಅವರು ಪ್ರಾಥಮಿಕ ಶಾಲಾ ಮುಖ್ಯಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಮಾಜ ಕಾರ್ಯದಲ್ಲಿಯೂ ಗುರುತಿಸಿ ಕೊಂಡಿದ್ದ ಅವರು ಕಾಂಚಿಕಾಂಬಾ ಹವ್ಯಕ ವಲಯದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಕುಮಟಾ ಕನ್ನಡ ಸಂಘದ ಸದಸ್ಯರಾಗಿದ್ದ ಅನೇಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಿದ್ದರು.
ಆರ್.ಎನ್.ಹೆಗಡೆ ಅವರನ್ನು ಕಳೆದುಕೊಂಡ ಸಮಾಜ ಬಡವಾಗಿದೆ ಎಂದು ಶಾಸಕರಾದ ದಿನಕರ ಶೆಟ್ಟಿ, ಹವ್ಯಕ ಸಂಘದ ಅಧ್ಯಕ್ಷ ಕೆ.ಆರ್.ಭಟ್ಟ, ಉಪಾಧ್ಯಕ್ಷ ಎನ್.ವಿ. ಹೆಗಡೆ, ಹೊಲನಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಎಂ. ಎಂ. ಹೆಗಡೆ, ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯ ಆಡಳಿತ ಮಂಡಳಿಯ ಡಾ. ಎಸ್. ಎಸ್. ಹೆಗಡೆ, ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ಭಂಡಾರಿ ಮೊದಲಾದವರು ಕಂಬನಿ ಮಿಡಿದಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement