ಭಾರತದಲ್ಲಿತ್ತು 1000 ಕಿಲೋ ತೂಕದ ಜಗತ್ತಿನ ಅತಿದೊಡ್ಡ ಹಾವು ವಾಸುಕಿ..! ಅದರ ಪಳೆಯುಳಿಕೆ ಪತ್ತೆ…ಅದರ ಉದ್ದ ಎಷ್ಟು ಗೊತ್ತೆ..?

ನವದೆಹಲಿ: ಜಗತ್ತಿನ ಅತೀ ದೊಡ್ಡ ಹಾಗೂ ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತಿನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ ಪಳೆಯುಳಿಕೆಗಳು (follisls) ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತು ಎಂಬುದನ್ನು ಸೂಚಿಸಿವೆ.
ವಿಜ್ಞಾನಿಗಳು ಇದನ್ನು ‘ವಾಸುಕಿ ಇಂಡಿಕಸ್’ ಎಂದು ಹೆಸರಿಸಿದ್ದು, 2005 ರಲ್ಲಿ ಐಐಟಿ-ರೂರ್ಕಿಯ ವಿಜ್ಞಾನಿಗಳು ಇದನ್ನು ಪತ್ತೆ ಮಾಡಿದ್ದಾರೆ ಮತ್ತು ಇತ್ತೀಚೆಗೆ ಇದು ಪ್ರಪಂಚದಲ್ಲಿ ಈವರೆಗೆ ಕಂಡುಬಂದ ಅತಿದೊಡ್ಡ ಹಾವು ಎಂದು ದೃಢಪಡಿಸಿದ್ದಾರೆ. ಈ ಹಾವುಗಳು 4.7 ಕೋಟಿ ವರ್ಷಗಳ ಹಿಂದೆ ಗುಜರಾತಿನ ಕಚ್‌ ಪ್ರದೇಶದ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು ಎಂದು ವಿಶ್ಲೇಷಿಸಲಾಗಿದೆ.

ಇದು ವಿಶೇಷವಾಗಿ ಸರೀಸೃಪಗಳ ಮೂಲ ಮತ್ತು ವಿಕಾಸದ ಪ್ರಕ್ರಿಯೆಯಲ್ಲಿ ಭಾರತದ ನಿರ್ಣಾಯಕ ಲಿಂಕ್ ಅನ್ನು ಸ್ಥಾಪಿಸುತ್ತದೆ. ಸಂಶೋಧಕರು ಹಾವಿನಿಂದ 27 ಕಶೇರುಖಂಡಗಳನ್ನು ಕಂಡುಹಿಡಿದಿದ್ದಾರೆ ಮತ್ತು ಅವುಗಳಲ್ಲಿ ಕೆಲವು ದೊಡ್ಡ ಹೆಬ್ಬಾವಿನಂತೆ ಕಾಣುತ್ತವೆ. ಈ ಹಾವಿನ ಉದ್ದವು 11-15 ಮೀಟರ್ (ಸುಮಾರು 50 ಅಡಿ) ಇರಬಹುದು ಮತ್ತು ಅದು 1 ಟನ್ ತೂಕದ್ದಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.ʼ
ಗುರುವಾರ ‘ಸ್ಪ್ರಿಂಗರ್ ನೇಚರ್’ ಕುರಿತು ‘ವೈಜ್ಞಾನಿಕ ರಿಪೋರ್ಟ್ಸ್‌’ (‘Scientific Reports’ on ‘Springer Nature) ನಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಲಾಗಿದೆ.

“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿದ್ದು ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತಹ ಸಂಕೋಚನ ಕ್ರಿಯೆಯ ಮೂಲಕ ತನ್ನ ಬೇಟೆಯಾಡುತ್ತಿತ್ತು. ಈ ಹಾವು ಕರಾವಳಿಯ ಸಮೀಪವಿರುವ ಜವುಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು ಎಂದು ಐಐಟಿ-ರೂರ್ಕಿಯ ಪ್ಯಾಲಿಯಂಟಾಲಜಿಯಲ್ಲಿ ಪೋಸ್ಟ್‌ ಡಾಕ್ಟರಲ್ ಸಂಶೋಧಕರು ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ದೇಬಜಿತ್ ದತ್ತಾ ಅವರು ದಿ ಗಾರ್ಡಿಯನ್‌ಗೆ ತಿಳಿಸಿದ್ದಾರೆ.
ಈ ಬೃಹತ್‌ ಹಾವಿನ ಪಳೆಯುಳಿಕೆಗೆ ಶಿವನೊಂದಿಗೆ ಸಂಬಂಧ ಹೊಂದಿರುವ ನಾಗ ಹಾವುಗಳ ರಾಜ ವಾಸುಕಿಯ ಹೆಸರನ್ನು ಇಡಲಾಗಿದೆ.

ಈ ವಾಸುಕಿಯ ಗಾತ್ರವು ಟೈಟಾನೊಬೊವಾಕ್ಕಿಂತ ದೊಡ್ಡದಾಗಿದೆ. ಟೈಟಾನೊಬೊವಾ ಕೊಲಂಬಿಯಾದಲ್ಲಿ ಸುಮಾರು 6 ಕೋಟಿ ವರ್ಷಗಳ ಹಿಂದೆ ವಾಸಿಸುತ್ತಿತ್ತು. ಇದು ಸುಮಾರು 43 ಅಡಿ ಉದ್ದ ಮತ್ತು ಒಂದು ಟನ್‌ಗಿಂತ ಹೆಚ್ಚು ತೂಕವನ್ನು ಹೊಂದಿತ್ತು.
“ವಾಸುಕಿಯ ಅಂದಾಜಿನ ದೇಹದ ಉದ್ದವನ್ನು ಟೈಟಾನೊಬೊವಾಕ್ಕೆ ಹೋಲಿಸಬಹುದು, ಆದರೂ ಟೈಟಾನೊಬೊವಾದ ಕಶೇರುಖಂಡವು ವಾಸುಕಿಗಿಂತ ಸ್ವಲ್ಪ ದೊಡ್ಡದಾಗಿದೆ. ಆದಾಗ್ಯೂ, ಈ ಹಂತದಲ್ಲಿ, ಟೈಟಾನೊಬೊವಾಗೆ ಹೋಲಿಸಿದರೆ ವಾಸುಕಿ ಹೆಚ್ಚು ದಪ್ಪವಾಗಿತ್ತೋ ಅಥವಾ ತೆಳ್ಳಗಿತ್ತೋ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ ಎಂದು ರೂರ್ಕಿಯ ಪ್ರೊಫೆಸರ್ ಹಾಗೂ ಅಧ್ಯಯನದ ಸಹ-ಲೇಖಕ, ಪ್ಯಾಲಿಯಂಟಾಲಜಿಸ್ಟ್ ಸುನೀಲ್ ಬಾಜಪೇಯಿ ಅವರು ಔಟ್ಲೆಟ್‌ ಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

10 ಮೀಟರ್ (33 ಅಡಿ) ಉದ್ದವಾಗಿರುವ ಏಷ್ಯಾದ ರೆಟಿಕ್ಯುಲೇಟೆಡ್ ಹೆಬ್ಬಾವು ಈಗ ಜೀವಂತವಾಗಿರುವ ಅತಿದೊಡ್ಡ ಹಾವು ಎಂದು ಪರಿಗಣಿಸಲ್ಪಟ್ಟಿದೆ.
ವಾಸುಕಿಯ ಪಳಯುಳಿಕೆಗಳು ಈಗ ಶುಷ್ಕ ಮತ್ತು ಧೂಳಿನ ಪ್ರದೇಶದಲ್ಲಿ ಪಳೆಯುಳಿಕೆ ಕಂಡುಬಂದಿದೆಯಾದರೂ, ವಾಸುಕಿಯು ಭೂಮಿಯಲ್ಲಿ ಸಂಚರಿಸಿದಾಗ ಅದು ಜೌಗು ಪ್ರದೇಶವಾಗಿತ್ತು ಎಂದು ಬಾಜಪೇಯಿ ಹೇಳಿದ್ದಾರೆ.
ಆವಿಷ್ಕಾರವು ವಿಜ್ಞಾನಿಗಳಿಗೆ ಹಾವುಗಳ ವಿಕಸನದ ಬಗ್ಗೆ ಒಂದು ಒಳ ನೋಟವನ್ನು ನೀಡುತ್ತದೆ. ಆದರೆ ಖಂಡಗಳು ಕಾಲಾನಂತರದಲ್ಲಿ ಹೇಗೆ ಭೌತಿಕವಾಗಿ ಬದಲಾಗಿವೆ ಮತ್ತು ಪ್ರಪಂಚದಾದ್ಯಂತ ವಿವಿಧ ಜಾತಿಯ ಪ್ರಾಣಿಗಳು ಹೇಗೆ ಹರಡಿವೆ ಎಂಬುದರ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನೀಲ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.
ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು.
“ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದು ಎಂದು ಗೊತ್ತಾಯಿತು” ಎಂದು ಬಾಜಪೇಯಿ ತಿಳಿಸಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement