ಮುಂಬೈ : ಬುಧವಾರ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ)ಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದೆ ಸ್ಟಾಕ್ ಮಾರುಕಟ್ಟೆಯ ದಲ್ಲಾಳಿಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಹೆಚ್ಚಿನ ತೆರಿಗೆಗಳ ಬಗ್ಗೆ ಸ್ಟಾಕ್ ಬ್ರೋಕರ್ ಪ್ರಸ್ತಾಪಿಸಿದಾಗ ಸವಾಲಿನ ಕ್ಷಣ ಎದುರಿಸಬೇಕಾಯಿತು.
ಸರ್ಕಾರವನ್ನು “ಸ್ಲೀಪಿಂಗ್ ಪಾರ್ಟ್ನರ್ (sleeping partner)” ಎಂದು ವಿವರಿಸಿದ ಬ್ರೋಕರ್ ತಮ್ಮ ಮೇಲೆ ಬೀಳುವ ಅಸಮಾನ ಹೊರೆಯನ್ನು ಎತ್ತಿ ತೋರಿಸಿದರು. ಹಾಗೂ ಅಲ್ಲಿ ಕಾರ್ಯಾಚರಣೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳದೆ ಸರ್ಕಾರವು ಲಾಭ ಮಾತ್ರ ಪಡೆಯುತ್ತದೆ ಎಂದು ಬ್ರೋಕರ್ ಹೇಳಿದರು.
ನಾವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಸೇರಿದಂತೆ ಹಲವಾರು ತೆರಿಗೆಗಳನ್ನು ಕಟ್ಟುತ್ತೆವೆ. ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT), ಇಂಟಿಗ್ರೇಟೆಡ್ ಗೂಡ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ (IGST), ಸ್ಟ್ಯಾಂಪ್ ಡ್ಯೂಟಿ ಮತ್ತು ದೀರ್ಘಾವಧಿಯ ಬಂಡವಾಳ ಲಾಭ (LTCG) ತೆರಿಗೆ ಇಷ್ಟು ತೆರಿಗೆಯನ್ನು ನಾವು ಕಟ್ಟುತ್ತೇವೆ, ನಮಗೆ ಏನೂ ಲಾಭ ಸಿಗುವುದಿಲ್ಲ. ಆದರೆ ಭಾರತ ಸರ್ಕಾರ ಮಾತ್ರ ವಿವಿಧ ತೆರಿಗೆಗಳ ಮೂಲಕ ಯಾವುದೇ ರಿಸ್ಕ್ ಇಲ್ಲದೆ ನಮಗಿಂತ ಜಾಸ್ತಿ ಗಳಿಸುತ್ತಿದೆ ಎಂದು ಹೈಲೈಟ್ ಮಾಡಿದರು.
“ನಾನು ಎಲ್ಲವನ್ನೂ ಹೂಡಿಕೆ ಮಾಡುತ್ತಿದ್ದೇನೆ, ನಾನು ಸಂಪೂರ್ಣ ಅಪಾಯವನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಭಾರತ ಸರ್ಕಾರವು ಸಂಪೂರ್ಣ ಲಾಭವನ್ನು ತೆಗೆದುಕೊಳ್ಳುತ್ತಿದೆ. ಭಾರತ ಸರ್ಕಾರವು ನನ್ನ ಸ್ಲೀಪಿಂಗ್ ಪಾರ್ಟ್ನರ್ ಮತ್ತು ನಾನು ಯಾವುದೇ ಆದಾಯವಿಲ್ಲದೆ ಕೆಲಸ ಮಾಡುವ ವರ್ಕಿಂಗ್ ಪಾರ್ಟ್ನರ್ ಆಗಿದ್ದೇನೆ. ಇಷ್ಟೊಂದು ತೆರಿಗೆಗಳೊದಿಗೆ ಬ್ರೋಕರ್ ಹೇಗೆ ಕಾರ್ಯನಿರ್ವಹಿಸಬಹುದು ಎಂದು ಪ್ರಶ್ನಿಸಿದರು.
ಎರಡನೇ ಪ್ರಶ್ನೆಯಲ್ಲಿ ” ಮನೆಯನ್ನು ಖರೀದಿಸಿದಾಗ ನೀವು ಎಷ್ಟು ತೆರಿಗೆ ಪಾವತಿಸಬೇಕು ಎಂಬ ಬಗ್ಗೆಯೂ ಬ್ರೋಕರ್ ಹೈಲೈಟ್ ಮಾಡಿದ್ದಾರೆ.
ಸರ್ಕಾರವು ಮನೆ ಖರೀದಿಯಿಂದ ನಗದು ಅಂಶವನ್ನೂ ತೆಗೆದುಹಾಕಿದೆ. ಈಗಿನ ಕಾಲದಲ್ಲಿ, ಮುಂಬೈಯಂತಹ ಸ್ಥಳದಲ್ಲಿ ಮನೆ ಖರೀದಿಸುವುದು ದುಃಸ್ವಪ್ನವಾಗಿದೆ. ಏಕೆಂದರೆ ನಾನು ತೆರಿಗೆ ಪಾವತಿಸುತ್ತಿದ್ದೇನೆ ಮತ್ತು ನನ್ನ ಬಳಿ ಬಿಳಿ ಹಣವಿದೆ … ಈಗ ನಾವು ಎಲ್ಲವನ್ನೂ ಚೆಕ್‌ನಲ್ಲಿ ಪಾವತಿಸಬೇಕಾಗಿದೆ, ನನ್ನ ಬ್ಯಾಂಕ್ ಬ್ಯಾಲೆನ್ಸ್ ಎಂಬುದು ನಾನು ಸರ್ಕಾರಕ್ಕೆ ತೆರಿಗೆ ಪಾವತಿಸಿದ ನಂತರವೇ ಉಳಿದಿರುವ ಹಣವಾಗಿದೆ. .ಈಗ ನಾನು ಮನೆಯನ್ನು ಖರೀದಿಸಲು ಹೋದಾಗ ನಾನು ಮತ್ತೊಮ್ಮೆ ಸ್ಟ್ಯಾಂಪ್ ಡ್ಯೂಟಿ, ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ, ಅದು ಶೇಕಡಾ 11 ರಷ್ಟಿದೆ ಎಂದು ಹೇಳಿದ ಅವರು, ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ವ್ಯಕ್ತಿಗೆ ಮನೆ ಖರೀದಿಸಲು ಹಣಕಾಸು ಸಚಿವರು ಹೇಗೆ ಸಹಾಯ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಈ ಸವಾಲಿನ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಎಂದ ನಿರ್ಮಲಾ ಸೀತಾರಾಮನ್, ಕೊನೆಗೆ ಸರ್ಕಾರ ಸ್ಲೀಪಿಂಗ್ ಪಾರ್ಟ್ನರ್ ಅಲ್ವಾ, ಹೀಗಾಗಿ ಕುಳಿತು ಉತ್ತರಿಸಲ್ಲ ಎಂದು ಹಾಸ್ಯ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ