ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಮೊಬೈಲ್ ಬಳಕೆ ನಿಷೇಧ

ಅಯೋಧ್ಯೆ : ಜನವರಿ 22ರಂದು ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರದ ಆವರಣ ಮತ್ತು ಮಂದಿರದ ಒಳಗೆ ಇನ್ಮುಂದೆ ಮೊಬೈಲ್ ಬಳಕೆ ಮಾಡುವಂತಿಲ್ಲ. ದೇಗುಲದ ಆವರಣದ ಮತ್ತು ಮಂದಿರದ ಒಳಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.
ರಾಮಮಂದಿರ ಟ್ರಸ್ಟ್ ನ ಪದಾಧಿಕಾರಿಗಳು ಐಜಿ ಹಾಗೂ ಕಮಿಷನರ್ ಜೊತೆಗಿನ ಸಭೆ ನಡೆಸಲಾಗಿದ್ದು, ಭದ್ರತಾ ದೃಷ್ಟಿಯಿಂದ  ಈ ಸಭೆಯಲ್ಲಿ ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇವಸ್ಥಾನಕ್ಕೆ ಸಾರ್ವಜನಿಕರು ಮೊಬೈಲ್ ಕೊಂಡೊಯ್ಯುವುದಕ್ಕೆ ಈಗಾಗಲೇ ನಿಷೇಧ ಹೇರಲಾಗಿತ್ತು. ಆದರೀಗ ವಿಐಪಿಗಳು ಮತ್ತು ವಿವಿಐಪಿಗಳೂ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನದ ಟ್ರಸ್ಟ್ ನ ಟ್ರಸ್ಟಿ ರಾಮ ಮಂದಿರಕ್ಕೆ ಬರುವ ಭಕ್ತರ ಮೊಬೈಲ್‌ಗಳನ್ನು ಇಡಲು ಲಾಕರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಜನರು ತಮ್ಮ ಮೊಬೈಲ್ ಜೊತೆಗೆ ಇತರ ಬೆಲೆಬಾಳುವ ವಸ್ತುಗಳನ್ನು ಅಲ್ಲಿ ಇಟ್ಟುಕೊಳ್ಳಬಹುದು. ಜನರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ದೇವಸ್ಥಾನದ ಆವರಣದಲ್ಲಿ ಸುವ್ಯವಸ್ಥೆ ಕಾಪಾಡಲು ಟ್ರಸ್ಟಿಗೆ ಸಹಕರಿಸಬೇಕು. ಭಕ್ತರು ಲಾಕರ್ ಸೌಲಭ್ಯ ದಲ್ಲಿ ತಮ್ಮ ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಇಟ್ಟು ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರಾವಳಿಯಲ್ಲಿ ಭಾರೀ ಗಾಳಿ ಮಳೆ ಮುನ್ಸೂಚನೆ : ದೈತ್ಯ ಅಲೆಗಳ ಎಚ್ಚರಿಕೆ ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement