ಹಜ್ ಯಾತ್ರೆ ವೇಳೆ ಶಾಖದ ಅಲೆಯಿಂದಾಗಿ 68 ಭಾರತೀಯರು ಸೇರಿ 1000ಕ್ಕೂ ಹೆಚ್ಚು ಸಾವು ; ವರದಿ

ರಿಯಾದ್‌ : ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಈ ವರ್ಷದ ಹಜ್ ಯಾತ್ರೆಯ ಸಮಯದಲ್ಲಿ ಬಿಸಿಲಿನ ತಾಪದ ನಡುವೆ ಮೃತಪಟ್ಟವರ ಸಂಖ್ಯೆ 1,000 ಮೀರಿದೆ ಎಂದು ಎಎಫ್‌ಪಿ (AFP) ಗುರುವಾರ (ಜೂನ್ 20) ವರದಿ ಮಾಡಿದೆ. ಇವರಲ್ಲಿ 68 ಭಾರತೀಯರು ಸಾವಿಗೀಡಾದ್ದಾರೆ ಎಂದು ಹೇಳಲಾಗಿದೆ.
ವರದಿಯಾದ ಸಾವುಗಳಲ್ಲಿ, ಅರ್ಧದಷ್ಟು ಜನರು ನೋಂದಾಯಿಸದ ಯಾತ್ರಿಗಳಾಗಿದ್ದಾರೆ. ಅವರು ಪವಿತ್ರ ನಗರವಾದ ಮೆಕ್ಕಾದಲ್ಲಿ ವಾರ್ಷಿಕ ಆಚರಣೆಗಳನ್ನು ಮಾಡುವಾಗ ತೀವ್ರವಾದ ಶಾಖದಿಂದಾಗಿ ಮೃತಪಟ್ಟಿದ್ದಾರೆ.
ಹೊಸದಾಗಿ ವರದಿಯಾದ ಸಾವುಗಳ ವಿವರವನ್ನು ಒದಗಿಸಿದ ಅರಬ್ ರಾಜತಾಂತ್ರಿಕರ ಪ್ರಕಾರ, ಒಟ್ಟು 658 ಸಾವುಗಳಲ್ಲಿ, 630 ನೋಂದಣಿ ಆಗದವರಾಗಿದ್ದಾರೆ. ಗುರುವಾರ ವರದಿಯಾದ ಹೊಸ ಸಾವುಗಳಲ್ಲಿ ಈಜಿಪ್ಟ್‌ನಿಂದ ಬಂದ 58 ಮಂದಿ ಸೇರಿದ್ದಾರೆ.

ಇಸ್ಲಾಂ ಧರ್ಮದ ಪವಿತ್ರ ನಗರದಲ್ಲಿ ಬುಧವಾರ (ಜೂನ್ 19) ತಾಪಮಾನವು 50 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದ ಕಾರಣ ಜನರು ಕಾಣೆಯಾದ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಹುಡುಕುತ್ತಿದ್ದರು. ಮೊನ್ನೆ ಸೋಮವಾರ ಮೆಕ್ಕಾದಲ್ಲಿ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಪ್ರತಿ ವರ್ಷ, ಪ್ರಪಂಚದಾದ್ಯಂತದ ಸುಮಾರು 18 ಲಕ್ಷ ಜನರು ತೀರ್ಥಯಾತ್ರೆಯಲ್ಲಿ ಪಾಲ್ಗೊಳ್ಳಲು ಮೆಕ್ಕಾಗೆ ಭೇಟಿ ನೀಡುತ್ತಾರೆ. ಹಜ್ ಅನ್ನು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಮತ್ತು ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಭೇಟಿ ನೀಡಲು ಸಲಹೆ ನೀಡುತ್ತಾರೆ. ಸೌದಿ ಅರೇಬಿಯಾದ ಅಧಿಕಾರಿಗಳು ಹೇಳುವಂತೆ ನಗರದಲ್ಲಿ ಪ್ರತಿ ದಶಕದಲ್ಲಿ ತಾಪಮಾನವು 0.4 ಡಿಗ್ರಿಗಳಷ್ಟು ಹೆಚ್ಚಾಗುತ್ತಿದೆ. ಇದು ಯಾಯ್ತರಿಗಳ ಮೇಲೆ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಪ್ರಮುಖ ಸುದ್ದಿ :-   ಅಂತಾರಾಷ್ಟ್ರೀಯ ಕ್ರಿಕೆಟಿಗೆ ದಿಢೀರ್‌ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್‌ನ ಅಪ್ರತಿಮ ಬ್ಯಾಟರ್‌ ಕೇನ್ ವಿಲಿಯಮ್ಸನ್

’68 ಭಾರತೀಯರ ಸಾವು’…
ಮೆಕ್ಕಾದಲ್ಲಿ ಮಾರಣಾಂತಿಕ ತಾಪಮಾನದ ಕಾರಣದಿಂದ ಕನಿಷ್ಠ 68 ಭಾರತೀಯರು ಸಾವಿಗೀಡಾದ್ದಾರೆ ಎಂದು ಏಷ್ಯಾದ ರಾಜತಾಂತ್ರಿಕರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ AFP ವರದಿ ಮಾಡಿದೆ. “ಕೆಲವರು ನೈಸರ್ಗಿಕ ಕಾರಣಗಳಿಂದಾಗಿ (ಮರಣ ಹೊಂದಿದ್ದಾರೆ) ಮತ್ತು ಕೆಲವರು ಹವಾಮಾನ ಪರಿಸ್ಥಿತಿಗಳಿಂದಾಗಿ, ನಾವು ಊಹಿಸಿಕೊಳ್ಳುತ್ತೇವೆ” ಎಂದು ರಾಜತಾಂತ್ರಿಕರು ಹೇಳಿದ್ದಾರೆ.
ಜೋರ್ಡಾನ್, ಇಂಡೋನೇಷ್ಯಾ, ಇರಾನ್, ಸೆನೆಗಲ್, ಟುನೀಶಿಯಾ ಮತ್ತು ಇರಾಕ್‌ನ ಸ್ವಾಯತ್ತ ಕುರ್ದಿಸ್ತಾನ್ ಪ್ರದೇಶಗಳು ಸಹ ಸಾವುಗಳನ್ನು ದೃಢಪಡಿಸಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement