ವೀಡಿಯೊ..| ಟಿ20 ವಿಶ್ವಕಪ್‌ 2024 ; ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ ಆಸ್ಟ್ರೇಲಿಯಾದ ವೇಗಿ

ನಾರ್ತ್ ಸೌಂಡ್: ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ ಎಂಟರ ಹಂತದ ಪಂದ್ಯದ ವೇಳೆ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಮೊದಲ ಹ್ಯಾಟ್ರಿಕ್ ಗಳಿಸಿದ್ದಾರೆ.
31 ವರ್ಷ ವಯಸ್ಸಿನ ಪ್ಯಾಟ್‌ ಕಮಿನ್ಸ್‌ ಅವರು 18 ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಮಹಮುದ್ದುಲ್ಲಾ ಮತ್ತು ಮಹೇದಿ ಹಸನ್ ಅವರನ್ನು ಔಟ್‌ ಮಾಡಿದರು ಮತ್ತು ನಂತರ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ತೌಹೀದ್‌ ಹೃದೋಯ್‌ ಅವರನ್ನು ಔಟ್ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ-20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ 7ನೇ ಆಟಗಾರ ಎನಿಸಿದರು. ಹಾಗೂ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 2ನೇ ಆಸೀಸ್ ಬೌಲರ್ ಎಂಬ ಖ್ಯಾತಿಗೆ ಪ್ಯಾಟ್ ಪಾತ್ರರಾದರು ಅವರ ಪಂದ್ಯದಲ್ಲಿ 29 ರನ್‌ಗಳಿಗೆ ಮೂರು ವಿಕೆಟ್‌ ಪಡೆದರು.

ಈ ಸಾಧನೆ ಮಾಡುವ ಮೂಲಕ ಕಮ್ಮಿನ್ಸ್ ಹೀಗೆ ತಮ್ಮ ದೇಶವಾದ ಆಸ್ಟ್ರೇಲಿಯಾದ ಬ್ರೆಟ್ ಲೀ ಜೊತೆ ಸಾಧನೆ ಮಾಡಿದವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಬ್ರೆಟ್‌ ಲೀ ಸಹ ಬಾಂಗ್ಲಾದೇಶದ ವಿರುದ್ಧ T20 ವಿಶ್ವಕಪ್ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
ಬ್ರೆಟ್‌ ಲೀ ಅವರು 2007 ರಲ್ಲಿ ಮಾರ್ಕ್ಯೂ ಈವೆಂಟ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲಿಗರಾಗಿದ್ದರು ಮತ್ತು ಐರ್ಲೆಂಡ್ ವೇಗಿ ಕರ್ಟಿಸ್ ಕ್ಯಾಂಫರ್ (2021), ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ (2021) ಮತ್ತು ದಕ್ಷಿಣ ಆಫ್ರಿಕಾದ ವೇಗಿ ಕಗಿಸಾ ರಬಾಡ, ಯುಎಇಯ ಕಾರ್ತಿಕ್ ಮೇಯಪ್ಪನ್ (2022) ಮತ್ತು ಐರ್ಲೆಂಡ್‌ನ ಜೋಶುವಾ ಲಿಟಲ್ (2022) ಟಿ 20 ವಿಶ್ವಕಪ್‌ನಲ್ಲಿ ಸಾಧನೆ ಮಾಡಿದ ಇಯರ ಆಟಗಾರರಾಗಿದ್ದಾರೆ.

ಆಸ್ಟ್ರೇಲಿಯಾ-ಬಾಂಗ್ಲಾದೇಶದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿರುವ ಆಸ್ಟ್ರೇಲಿಯಾ ತಂಡ ಮಳೆಯಿಂದ ಪಂದ್ಯ ನಿಂತಾಗ 11.2 ಓವರ್‌ಗಳಲ್ಲಿ 2 ವಿಕೆಟ್ ಕಳೆದಕೊಂಡು 100 ರನ್ ಗಳಿಸಿತ್ತು. ನಂತರ ಡಕ್‌ ವರ್ಥ್‌ ಲೂಯಿಸ್‌ ನಿಯಮದಂತೆ 29 ರನ್‌ಗಳ ಜಯಗಳಿಸಿತು.

ಪ್ರಮುಖ ಸುದ್ದಿ :-   ಒಪ್ಪಂದವಿದ್ರೂ ಕೈಕೊಟ್ಟ ಪಾಕಿಸ್ತಾನ ; ಹೌತಿಗಳ ವಿರುದ್ಧ ಹೋರಾಟಕ್ಕೆ ಇಸ್ರೇಲ್‌ ಸಹಾಯ ಕೋರಿದ ಸೌದಿ ಅರೇಬಿಯಾ : ವರದಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement