T20 ವಿಶ್ವಕಪ್ 2024 ರ ಸೂಪರ್ ಎಂಟರ ಹಂತದಲ್ಲಿ ಅಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾ ವಿರುದ್ಧ 21 ರನ್‌ಗಳ ಐತಿಹಾಸಿಕ ಜಯವನ್ನು ದಾಖಲಿಸಿದೆ. ಹಾಗೂ ಇದು ಆಸ್ಟರೇಲಿಯಾ ತಂಡದ ಗೆಲುವಿನ ಓಟಕ್ಕೆ ತಡೆ ಹಾಕಿದೆ. ಗೆಲುವಿನ ಸರಣಿಯು ಅಂತ್ಯಗೊಂಡಿತು,
ಆಸ್ಟ್ರೇಲಿಯ ವಿರುದ್ಧ ಅಫ್ಘಾನಿಸ್ತಾನದ 21 ರನ್‌ಗಳ ಗೆಲುವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಘಾನಿಸ್ತಾನದ ಆರು ಪ್ರಯತ್ನಗಳಲ್ಲಿ ಮೊದಲನೆಯದು. ಅಫ್ಘಾನಿಸ್ತಾನವು ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ ಹಿಂದಿನ ಪಂದ್ಯಗಳನ್ನು ಸೋತಿದೆ, ಇದರಲ್ಲಿ ನಾಲ್ಕು ಏಕದಿನದ (ODI) ಪಂದ್ಯಗಳು ಸೇರಿವೆ.
ಶನಿವಾರದ ಮೊದಲು 2024 ರ T20 ವಿಶ್ವಕಪ್‌ನಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದಿತ್ತು.
ಮೊದಲು ಬ್ಯಾಟ್ ಮಾಡಿದ ಅಫ್ಗಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಪೇರಿಸಿತು. ಗುರ್ಬಾಜ್ 60, ಇಬ್ರಾಹಿಂ 51 ರನ್ ಹೊಡೆದು ಗಮನ ಸೆಳೆದರು. ಅಪಘಾನಿಸ್ತಾನ ತಂಡದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಜೊತೆಯಾಟದಲ್ಲಿ ಆಸ್ಟ್ರೇಲಿಯ ವಿರುದ್ಧ 118 ರನ್ ಗಳಿಸಿದರು.
ಗುರ್ಬಾಜ್ ಮತ್ತು ಇಬ್ರಾಹಿಂ ನಡುವಿನ ಜೊತೆಯಾಟ ಪುರುಷರ T20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯಾವುದೇ ಜೋಡಿಯ ಮೂರನೇ ಅತ್ಯುನ್ನತ ಜೊತೆಯಾಟ ಹಾಗೂ ಆರಂಭಿಕ ಜೋಡಿಯ ಎರಡನೇ ಅತಿ ಹೆಚ್ಚು ರನ್‌ಗಳ ಜೊತೆಯಾಟವಾಗಿದೆ. ಆಸ್ಟ್ರೇಲಿಯಾ ಪರ ಕಮಿನ್ಸ್ 3 ವಿಕೆಟ್ ಪಡೆದರೆ, ಜಂಪಾ 2 ವಿಕೆಟ್ ಪಡೆದರು.
ಪ್ಯಾಟ್ ಕಮ್ಮಿನ್ಸ್ T20 ವಿಶ್ವಕಪ್‌ನಲ್ಲಿ ಎರಡು ಹ್ಯಾಟ್ರಿಕ್‌ಗಳನ್ನು ಪಡೆದ ಮೊದಲ ಆಟಗಾರ. ಆ್ಯಂಟಿಗುವಾದಲ್ಲಿ ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾದ ಹಿಂದಿನ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ಸಾಧಿಸಿದ್ದರು. ಅವರು ಲಸಿತ್ ಮಾಲಿಂಗ, ಟಿಮ್ ಸೌಥಿ, ಮಾರ್ಕ್ ಪಾವ್ಲೋವಿಕ್ ಮತ್ತು ವಸೀಮ್ ಅಬ್ಬಾಸ್ ನಂತರ ಪುರುಷರ T20I ಗಳಲ್ಲಿ ಬಹು ಹ್ಯಾಟ್ರಿಕ್‌ಗಳೊಂದಿಗೆ ಐದನೇ ಬೌಲರ್ ಆಗಿದ್ದಾರೆ. ಕಮ್ಮಿನ್ಸ್ ಸತತ ಟಿ20 ಪಂದ್ಯಗಳಲ್ಲಿ ಹ್ಯಾಟ್ರಿಕ್ ಗಳಿಸಿದ ಮೊದಲಿಗರಾಗಿದ್ದಾರೆ.
ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 127 ರನ್ ಮಾತ್ರ ಗಳಿಸಿತು. ಈ ಮೂಲಕ ಕಾಂಗರೂ ಪಡೆ ಅಫ್ಗಾನಿಸ್ತಾನಕ್ಕೆ ಶರಣಾಯಿತು. ಆಸ್ಟ್ರೇಲಿಯಾ ಪರ ಮ್ಯಾಕ್ಸ್‌ವೆಲ್ 59 ರನ್ ಹೊಡೆದರು. ಅಫ್ಗಾನಿಸ್ತಾನದ ಗಲ್ಬಾದಿನ್ 4 ವಿಕೆಟ್ ಪಡೆದರೆ ನವೀನ್ ವುಲ್ ಹಕ್ 2 ವಿಕೆಟ್ ಪಡೆದರು. ಗುಲ್ಬದಿನ್ ನೈಬ್ ಅವರ ಬೌಲಿಂಗ್ 20ಕ್ಕೆ4 ಸಾಧನೆ T20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯಾವುದೇ ಬೌಲರನ ಎರಡನೇ ಅತ್ಯುತ್ತಮ ಸಾಧನೆಯಾಗಿದೆ. 2014 ರ ಆವೃತ್ತಿಯಲ್ಲಿ ಮೀರ್‌ಪುರದಲ್ಲಿ ಆರ್ ಅಶ್ವಿನ್ 11 ಕ್ಕೆ 4 ವಿಕೆಟ್ ಪಡೆದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ