
ರಸ್ತೆಯಲ್ಲಿ ಗೂಳಿ ಕಾಳಗದ ಹಲವು ವಿಡಿಯೋಗಳು ವೈರಲ್ ಆಗಿದ್ದು, ಹಲವು ವೀಡಿಯೊಗಳಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಗೂಳಿ ಕಾಳಗದಿಂದ ಹಲವು ಬಾರಿ ಕಾರು, ಬೈಕ್‌ಗಳು ಹಾನಿಗೊಳಗಾಗಿವೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ರೈಲ್ವೇ ಹಳಿ ಮೇಲೆಯೇ ಕಾದಾಟ ಮಾಡುತ್ತಿದ್ದ ಎರಡು ಹೋರಿಗಳನ್ನು ಗೇಟ್‌ನಲ್ಲಿದ್ದ ರೈಲ್ವೇಮನ್ ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೊನೆಗೆ ಲೋಕೋ ಪೈಲಟ್ ರೈಲನ್ನೇ ನಿಲ್ಲಿಸಬೇಕಾಯಿತು.
ವೈರಲ್ ವೀಡಿಯೊದಲ್ಲಿನ ಘಟನೆ ಎಲ್ಲಿ ನಡೆದದ್ದು ಎಂಬುದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲ, ಆದರೆ ವೀಡಿಯೊವು ಭಾರತದ್ದು ಎಂದು ಹೇಳಲಾಗಿದೆ. ಗೇಟ್ ಬಳಿ ಎರಡು ಗೂಳಿಗಳು ಕಾದಾಡುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ದೂಡಾಡುತ್ತಲೇ ಎರಡೂ ದೈತ್ಯ ಗೂಳಿಗಳು ರೈಲ್ವೆ ಹಳಿ ಮೇಲೆ ಬಂದಿವೆ. ರೈಲು ಹಾರ್ನ್ ಹೊಡೆಯುತ್ತ ಬಂದರೂ ಗೂಳಿ ಕಾಳಗ ನಿಲ್ಲಲಿಲ್ಲ.

ಕ್ಯಾರೇ ಎನ್ನದ ಎರಡು ದೈತ್ಯಾಕಾರದ ಗೂಳಿಗಳು ತಮಗೆ ಯಾವುದೂ ಸಂಬಂಧವಿಲ್ಲ ಎಂಬಂತೆ ಕಾದಾಟ ಮುಂದುವರಿಸಿದ್ದವು. ದೂರದಿಂದಲೇ ಗೂಳಿ ಕಾಳಗ ನೋಡಿದ್ದ ಲೋಕೋ ಪೈಲಟ್ ರೈಲಿನ ವೇಗ ಕಡಿಮೆ ಮಾಡಿದ್ದಾನೆ. ಒಂದು ಹಂತದಲ್ಲಿ ಗೇಟ್‌ನಲ್ಲಿದ್ದ ರೈಲ್ವೇಮನ್ ಅದನ್ನು ಓಡಿಸಲು ಪ್ರಯತ್ನಿಸಿದರೂ ದೈತ್ಯಾಕಾರದ ಗೂಳಿಗಳ ಮುಂದೆ ಹೋಗಲು ಧೈರ್ಯಸಾಲದೆ ಹಿಂಜರಿದಿದ್ದಾನೆ. ಕೊನೆಗೆ ರೈಲಿನ ವೇಗ ಕಡಿಮೆ ಮಾಡುತ್ತ ಬಂದ ಲೋಕೋ ಪೈಲಟ್ ತಾನೇ ರೈಲನ್ನು ಕೆಲಕಾಲ ನಿಲ್ಲಿಸಿದ್ದಾನೆ…!
ನಂತರ ಗೇಟ್‌ನಲ್ಲಿದ್ದ ರೈಲ್ವೆ ಕಾರ್ಮಿಕರು ದೊಣ್ಣೆಯನ್ನು ತಂದು ದೈತ್ಯಗೂಳಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಅವುಗಳ ಮೇಲೆ ನೀರು ಎರಚಲಾಯಿತು. ಇದಾದ ಬಳಿಕ ಎತ್ತುಗಳು ಅಲ್ಲಿಂದ ಓಡಿ ಹೋದವು. ಈ ಸಂಪೂರ್ಣ ಘಟನೆಯನ್ನು ಯಾರೋ ರೆಕಾರ್ಡ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೊಕ್ಕೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈಗ ರೈಲ್ವೇ ಅತಿಕ್ರಮಣ ಆರೋಪದ ಮೂಲಕ ಗೂಳಿಗಳ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ ಎಂದು ಒಬ್ಬರು ಬರೆದಿದ್ದಾರೆ. ಇಬ್ಬರು ನೆರೆಹೊರೆಯವರ ನಡುವೆ ಜಗಳವಾಗಿದೆ ಮತ್ತು ಮೂರನೇ ವ್ಯಕ್ತಿ ಭಾರವನ್ನು ಹೊರಬೇಕಾಗುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ ಈಗ ಗೂಳಿಗಳು ರಸ್ತೆ ಬಿಟ್ಟು ರೈಲ್ವೇ ಹಳಿ ತಲುಪಿವೆ, ರೈಲಿನ ವೇಗ ಕಡಿಮೆ ಇದ್ದದ್ದು ಚೆನ್ನಾಯಿತು, ಇಲ್ಲದಿದ್ದರೆ ದೊಡ್ಡ ಅವಘಡ ಸಂಭವಿಸುತ್ತಿತ್ತು ಎಂದು ಮತ್ತೊಬ್ಬ ಬರೆದಿದ್ದಾನೆ.


ನಿಮ್ಮ ಕಾಮೆಂಟ್ ಬರೆಯಿರಿ