ಕುಮಟಾ : ಗುಡ್ಡ ಕುಸಿದು ಎರಡು ದಿನಗಳಿಂದ ಬಂದ್ ಆಗಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಸಿದ್ದಾಪುರ ಮಾರ್ಗ ಈಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರುಮಠ ಕ್ರಾಸ್ ಸಮೀಪ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಮಣ್ಣು ರಸ್ತೆಯ ಮೇಲೆ ಬಂದು ಬಿದ್ದಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಮರ ಹಾಗೂ ಮಣ್ಣನ್ನು ತೆರವುಗೊಳಿಸಲಾಗಿದ್ದು, ಕುಮಟಾ-ಸಿದ್ದಾಪುರ ನಡುವಿನ ವಾಹನ ಸಂಚಾರ ಪುನರಾರಂಭಗೊಂಡಿದೆ.
ಎಕರೆಗಳಷ್ಟು ವ್ಯಾಪ್ತಿಯಲ್ಲಿ ಗುಡ್ಡ ಕುಸಿದು ಮಣ್ಣು ಹಾಗೂ ಮರಗಳು ರಸ್ತೆ ಮೇಲೆ ಬಂದು ಬಿದ್ದಿತ್ತು. ಗುಡ್ಡ ಕುಸಿದ ಪರಿಣಾಮ ಕುಮಟಾ-ಸಿದ್ದಾಪುರ ರಸ್ತೆಯನ್ನು 2 ದಿನಗಳ ಕಾಲ ಬಂದ್ ಮಾಡಲಾಗಿತ್ತು. ಗುಡ್ಡ ಬಹಳ ದೂರದಲ್ಲಿ ಕುಸಿದು ಬೃಹತ್ ಪ್ರಮಾಣದ ಮಣ್ಣು ರಸ್ತೆ ಮೇಲೆ ಬಿದ್ದಿತ್ತು. ಸಿಬ್ಬಂದಿ ರಸ್ತೆ ಮೇಲೆ ಬಿದ್ದಿದ್ದ ಮರ, ಮಣ್ಣು ತೆರವುಗೊಳಿಸಿದ್ದು ಇದರಿಂದ ಕುಮಟಾ-ಸಿದ್ದಾಪುರ ನಡುವಿನ ಸಂಚಾರ ಪುನರಾರಂಭಗೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ