ಗಾಜಾದಲ್ಲಿ 5 ಒತ್ತೆಯಾಳುಗಳ ಶವ ವಶಪಡಿಸಿಕೊಂಡ ಇಸ್ರೇಲ್ ಸೇನೆ

ಜೆರುಸಲೇಂ: ದಕ್ಷಿಣ ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯ ಸಂದರ್ಭದಲ್ಲಿ ಗಾಜಾ ಪಟ್ಟಿಯಿಂದ ಒತ್ತೆಯಾಳಾಗಿ ಕರೆದೊಯ್ದಿದ್ದ ಐವರ ಶವಗಳನ್ನು ಇಸ್ರೇಲಿ ಪಡೆಗಳು ವಶಕ್ಕೆ ಪಡೆದಿವೆ ಎಂದು ಮಿಲಿಟರಿ ಗುರುವಾರ ತಿಳಿಸಿದೆ.
ಒತ್ತೆಯಾಳು ಮಾಯಾ ಗೊರೆನ್ ಮತ್ತು ಸೈನಿಕರಾದ ರವಿದ್ ಆರ್ಯೆಹ್ ಕಾಟ್ಜ್, ಓರೆನ್ ಗೋಲ್ಡಿನ್, ಟೋಮರ್ ಅಹಿಮಾಸ್ ಮತ್ತು ಕಿರಿಲ್ ಬ್ರಾಡ್ಸ್ಕಿ ಅವರ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.
ಪ್ಯಾಲಸ್ತೈನ್‌ ಗಾಜಾ ಪಟ್ಟಿಯ ದಕ್ಷಿಣದಲ್ಲಿರುವ ಪ್ರಮುಖ ನಗರವಾದ ಖಾನ್ ಯೂನಿಸ್‌ನಲ್ಲಿ ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಅಕ್ಟೋಬರ್ 7 ರಂದು ಹಮಾಸ್‌ ಗುಂಪು ಅಪಹರಿಸಿ ಗಾಜಾಕ್ಕೆ ಕೊಂಡೊಯ್ಯಲ್ಪಟ್ಟ ಗೋರೆನ್‌ನ ಮೃತಪಟ್ಟಿದ್ದಾರೆ ಎಂದು ಮಿಲಿಟರಿ ಪ್ರಕಟಿಸಿತ್ತು.
ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲಿ ಸಮುದಾಯಗಳ ಮೇಲೆ ದಾಳಿ ಮಾಡಿದರು, ಇದು 1,197 ಜನರ ಸಾವಿಗೆ ಕಾರಣವಾಯಿತು. ಹೆಚ್ಚಾಗಿ ನಾಗರಿಕರು ಮೃತಪಟ್ಟಿದ್ದರು.
ಹಮಾಸ್‌ ಉಗ್ರಗಾಮಿಗಳು 251 ಜನರನ್ನು ಒತ್ತೆಯಾಳುಗಳನ್ನಾಗಿ ಗಾಜಾಕ್ಕೆ ಒಯ್ದರು. ಅವರಲ್ಲಿ 111 ಮಂದಿ ಗಾಜಾದಲ್ಲಿ ಉಳಿದಿದ್ದಾರೆ, ಇದರಲ್ಲಿ 39 ಮಂದಿ ಸತ್ತಿದ್ದಾರೆ ಎಂದು ಮಿಲಿಟರಿ ಹೇಳಿದೆ.
ಹಮಾಸ್ ನಡೆಸುತ್ತಿರುವ ಪ್ರದೇಶದಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ ಗಾಜಾದಲ್ಲಿ ಇಸ್ರೇಲ್‌ನ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆಯಲ್ಲಿ ಕನಿಷ್ಠ 39,145 ಜನರು ಸಾವಿಗೀಡಾಗಿದ್ದಾರೆ.

ಪ್ರಮುಖ ಸುದ್ದಿ :-   ಬಲೂಚಿಸ್ತಾನದಲ್ಲಿ ‘ಸ್ವಾತಂತ್ರ್ಯದ ಘೋಷಣೆ’: ಪಾಕ್‌ ಆಕ್ರಮಿತ ಕಾಶ್ಮೀರಕ್ಕಿಂತಲೂ ಇದು ಪಾಕಿಸ್ತಾನಕ್ಕೆ ಹೆಚ್ಚು ಆತಂಕದ ವಿಷಯ ಯಾಕೆ ?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement