ಇದು ಸಾಮಾನ್ಯ ಅನಾಹುತವಲ್ಲ… : ವಯನಾಡು ಭೂಕುಸಿತ ಪೀಡಿತ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ

ವಯನಾಡು: ವಿನಾಶಕಾರಿ ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ. 400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿ ನೂರಾರು ಜನ ಗಾಯಗೊಂಡಿರುವ ಕೇರಳದ ವಯನಾಡು ಜಿಲ್ಲೆಯ ಮುಂಡಕೈ-ಚೂರಲ್‌ಮಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕಲ್ಪೆಟ್ಟಾದ ಎಸ್.ಕೆ.ಎಂ.ಜೆ. ಶಾಲಾ ಮೈದಾನದಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಚೂರಲ್‌ಮಲಗೆ ತೆರಳಿದರು. ಭೂಕುಸಿತದಿಂದ ಹಾನಿಗೊಂಡ ಚೂರಲ್‌ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳನ್ನು ವೀಕ್ಷಿಸಿದರು.
ಚೂರಲ್‌ಮಲ ತಲುಪಿದ ನಂತರ ತಮ್ಮ ವಾಹನದಿಂದ ಇಳಿದು, ರಕ್ಷಣಾ ಸಿಬ್ಬಂದಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿ ವೇಣು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಬಂಡೆಗಳು ಮತ್ತು ಅವಶೇಷಗಳಿಂದ ಆವೃತವಾದ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಸಮೀಕ್ಷೆ ಮಾಡಿದರು.
ಪ್ರಧಾನಿಯವರೊಂದಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ ಗೋಪಿ ಇದ್ದರು.

ವಿಪತ್ತು ಸಾಮಾನ್ಯವಲ್ಲ : ಪ್ರಧಾನಿ ಮೋದಿ…
ಪರಿಶೀಲನೆಯ ನಂತರ, ಪ್ರಧಾನಿ ಮೋದಿ ಅವರು ಈ “ವಿಪತ್ತು ಸಾಮಾನ್ಯವಲ್ಲ” ಎಂದು ಹೇಳಿದರು ಮತ್ತು ಪುನರ್ವಸತಿ ಮತ್ತು ಪ್ರದೇಶವನ್ನು ಪುನರ್ನಿರ್ಮಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂಕುಸಿತದಿಂದ ತೊಂದರೆಗೊಳಗಾದ ಸಂತ್ರಸ್ತರ ಪುನರ್ವಸತಿಗೆ ಯೋಜನೆ ರೂಪಿಸಲು ಸ್ಥಳೀಯ ಪರಿಸ್ಥಿತಿ ಅವಲೋಕನ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ಮಾತನಾಡಿದರು.
ಬದುಕುಳಿದವರು ಅಲ್ಲಿ ತಾವು ಕಂಡ ಮತ್ತು ಅನುಭವಿಸಿದ್ದನ್ನು ಹೇಳಿದ್ದಾರೆ. ಭೂಕುಸಿತವು ಪ್ರಕೃತಿಯ “ಉಗ್ರ ಸ್ವರೂಪವನ್ನು” ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ್ ಗೋಪಿ, ವಿಪತ್ತು ಸ್ಥಳದ ಬಳಿ ಕ್ಯಾಂಪ್ ಮಾಡುತ್ತಿರುವ ಸಂಪುಟ ಉಪ ಸಮಿತಿಯ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಭೂ ಕುಸಿತದ ಪ್ರದೇಶ ವೀಕ್ಷಣೆ
ನಂತರ, ಅವರು ಇಲ್ಲಿನ ಕಲ್ಪೆಟ್ಟಾದ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆಗೆ ಬಂದಿಳಿದ ಅವರು ನಂತರ ರಸ್ತೆಯ ಮೂಲಕ ಚೂರಲ್‌ಮಲಾಗೆ ಪ್ರಯಾಣಿಸಿದರು, ಅಲ್ಲಿ ದುರಂತದ ನಂತರ ಸೇನೆ ನಿರ್ಮಿಸಿದ 190 ಅಡಿ ಉದ್ದದ ಬೈಲಿ ಸೇತುವೆ ಪರಿಶೀಲಿಸಿದರು.
“ಭೂಕುಸಿತದ ಬಗ್ಗೆ ನನಗೆ ತಿಳಿದಾಗಿನಿಂದ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ, ದುರಂತದಲ್ಲಿ ಸಹಾಯ ಮಾಡಬಹುದಾದ ಕೇಂದ್ರ ಸರ್ಕಾರದ ಎಲ್ಲಾ ಸಂಸ್ಥೆಗಳನ್ನು ತಕ್ಷಣವೇ ಸಜ್ಜುಗೊಳಿಸಲಾಯಿತು. ಈ ಅನಾಹುತ ಸಾಮಾನ್ಯವಲ್ಲ. ಸಾವಿರಾರು ಕುಟುಂಬಗಳ ಕನಸು ಬತ್ತಿ ಹೋಗಿದೆ. ಈ ದುರಂತವನ್ನು ಎದುರಿಸಿದ ಸಂತ್ರಸ್ತರನ್ನು ನಾನು ಸ್ಥಳದಲ್ಲಿಯೇ ನೋಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಪ್ರಧಾನಿ ಮೋದಿಯವರೊಂದಿಗೆ ಜುಲೈ 30 ರಂದು ಮುಂಜಾನೆ ಸಂಭವಿಸಿದ ದುರಂತದ ಪ್ರಮಾಣವನ್ನು ವಿವರಿಸಿದರು.
ಚೂರಲ್ಮಲಾದಲ್ಲಿ ಕಾಲ್ನಡಿಗೆಯಲ್ಲಿ ಭೂಕುಸಿತ ಪೀಡಿತ ಪ್ರದೇಶಕ್ಕೆ ತೆರಳಿದ ಪ್ರಧಾನಿ, ಭೂಕುಸಿತದಲ್ಲಿ ಕುಸಿದು ಬಿದ್ದಿರುವ ವೆಲ್ಲರ್ಮಲಾ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿದರು.
ಅನಾಹುತದ ನಂತರ ಸೇನೆ ನಿರ್ಮಿಸಿದ 190 ಅಡಿ ಉದ್ದದ ಬೈಲಿ ಸೇತುವೆಯ ಮೂಲಕ ನಡೆದಾಡಿದ ಅವರು ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

ಪ್ರಮುಖ ಸುದ್ದಿ :-   ಪಶ್ಚಿಮ ಘಟ್ಟದಲ್ಲಿ ನೆಲದಡಿ ವಾಸಿಸುವ ಕಾಲುಗಳಿಲ್ಲದ ಹೊಸ ಉಬಯಚರ ಜೀವಿ ಪತ್ತೆ

ಬಳಿಕ ಮೆಪ್ಪಾಡಿಯ ಶಾಲೆಯೊಂದರ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆ ಕಾಲ ಕಳೆದರು. ಭೂಕುಸಿತದಲ್ಲಿ ತಮ್ಮ ಕುಟುಂಬದ ಸದಸ್ಯರೆಲ್ಲರನ್ನು ಕಳೆದುಕೊಂಡ ಇಬ್ಬರು ಮಕ್ಕಳು ಸೇರಿದಂತೆ ಬದುಕುಳಿದ ಕೆಲವರೊಂದಿಗೆ ಅವರು ಸಂವಾದ ನಡೆಸಿದರು.
ಬದುಕುಳಿದವರು ಪ್ರಧಾನಿಯವರಿಗೆ ತಮ್ಮ ಸಂಕಟವನ್ನು ವಿವರಿಸಿದರು, ಮಾತನಾಡುವ ಸಮಯದಲ್ಲಿ ಕಣ್ಣೀರು ಹಾಕಿದರು, ಪ್ರಧಾನಿಯವರು ಅವರನ್ನು ಸಾಂತ್ವನ ಮಾಡಲು ಪ್ರಯತ್ನಿಸಿದರು.
ಚೂರಲ್ಮಲಾಗೆ ಭೇಟಿ ನೀಡಿದ ನಂತರ, ಪ್ರಧಾನಿ ಮೋದಿ ಅವರು ಮೆಪ್ಪಾಡಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದರು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳೊಂದಿಗೆ ಸಂವಾದ ನಡೆಸಿದರು.
ಇದಕ್ಕೂ ಮೊದಲು, ಅವರು ವೈಮಾನಿಕ ಸಮೀಕ್ಷೆ ಮೂಲಕ ಭೂಕುಸಿತದ ಮೂಲವನ್ನು ಮತ್ತು ಪಂಚಿರಿಮಟ್ಟಂ, ಮುಂಡಕ್ಕೈ ಮತ್ತು ಚೂರಲ್ಮಲಾಗಳ ವಿಪರೀತ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದರು. ಅವರೊಂದಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇದ್ದರು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement