ವೀಡಿಯೊ..| ಇಬ್ಬರ ಮೇಲೆ ನರಿ ದಾಳಿ ; ತಪ್ಪಿಸಿಕೊಳ್ಳಲು ನರಿಯನ್ನು 15 ಅಡಿ ದೂರ ಎಸೆದ ವ್ಯಕ್ತಿ…!

ಭೋಪಾಲ್ : ಮಧ್ಯಪ್ರದೇಶದಲ್ಲಿ ಜನರಿಗೆ ನರಿಗಳ ಭಯ ಕಾಡುತ್ತಿದೆ. ಸೆಹೋರ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಇಬ್ಬರ ಮೇಲೆ ನರಿ ದಾಳಿ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಈ ಭಯಾನಕ ಕ್ಷಣವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೆಹ್ತಿ ತಹಸಿಲ್‌ನ ಸಗೋನಿಯಾ ಪಂಚಾಯತದ ರಸ್ತೆಬದಿಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿದ್ದಾಗ ನರಿ ಅವರ ಮೇಲೆ ದಾಳಿ ಮಾಡುವುದನ್ನು ವೀಡಿಯೊ ತೋರಿಸಿದೆ.
ಅವರು ಕಲ್ಲುಗಳನ್ನು ಎಸೆಯುವ ಮೂಲಕ ನರಿಯನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ಪ್ರಯತ್ನ ವಿಫಲವಾಯಿತು. ನಂತರ ಅವರಲ್ಲಿ ಒಬ್ಬರು ನರಿಯನ್ನು ಹಿಡಿದು ಸುಮಾರು 15 ಅಡಿ ದೂರ ಎಸೆದಿರುವುದನ್ನು ವಿಡಿಯೋ ತೋರಿಸಿದೆ.

ಗಾಯಾಳುಗಳಾದ ಶ್ಯಾಂ ಯಾದವ್ ಮತ್ತು ನರ್ಮದಾ ಪ್ರಸಾದ ಅವರು ನರ್ಮದಾಪುರಂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಜನರು ಈ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಒಂಟಿಯಾಗಿ ಹೊರಹೋಗುವುದನ್ನು ತಪ್ಪಿಸಬೇಕು ಎಂದು ಸೂಚಿಸಿದ್ದಾರೆ.
“ನಾವು ನರಿಗಳಿಂದ ದೂರವಿರಲು ಮತ್ತು ಗುಂಪುಗಳಾಗಿ ಪ್ರಯಾಣಿಸಲು ನಾವು ಗ್ರಾಮಸ್ಥರಿಗೆ ವಿನಂತಿಸಿದ್ದೇವೆ. ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಮತ್ತು ರೇಂಜರ್ ಹರೀಶ ಮಹೇಶ್ವರಿ ಗಾಯಾಳುಗಳನ್ನು ಭೇಟಿ ಮಾಡಿ ಪರಿಹಾರವನ್ನು ಭರವಸೆ ನೀಡಿದ್ದಾರೆ” ಎಂದು ಗ್ರಾಮ ಪಂಚಾಯತ ಸಹಾಯಕ ಕಾರ್ಯದರ್ಶಿ ರಾಮಕೃಷ್ಣ ಉಯಿಕೆ ಹೇಳಿದ್ದಾರೆ.

ನರಿ ದಾಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅನೇಕ ನಿವಾಸಿಗಳು ಈಗ ತಮ್ಮ ಮನೆಯಿಂದ ಹೊರಡುವಾಗ ದೊಣ್ಣೆಗಳನ್ನು ಒಯ್ಯುತ್ತಿದ್ದಾರೆ. ಹಳ್ಳಿಯ ಸುತ್ತಲಿನ ದಟ್ಟವಾದ ಅರಣ್ಯವು ನರಿಗಳಿಗೆ ಸಂಭಾವ್ಯ ಅಡಗಿಕೊಳ್ಳುವ ಸ್ಥಳವಾಗಿದೆ. ಸೋಮವಾರ ನಡೆದ ಮತ್ತೊಂದು ಘಟನೆಯಲ್ಲಿ, ಸಲ್ಕಾನಪುರದಲ್ಲಿ ನರಿಯು ಐವರ ಮೇಲೆ ದಾಳಿ ಮಾಡಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಪ್ರಮುಖ ಸುದ್ದಿ :-   ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ ; 6 ಕೆನಡಾ ರಾಜತಾಂತ್ರಿಕರನ್ನು ಹೊರಹಾಕಿದ ಭಾರತ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement