5,000 ‘ಸೈಬರ್ ಕಮಾಂಡೋಸ್’, ಆನ್‌ಲೈನ್ ನೋಂದಣಿ : ಸೈಬರ್ ಅಪರಾಧ ತಡೆಗೆ ಕೇಂದ್ರದಿಂದ ನೂತನ ಕ್ರಮಗಳು

ನವದೆಹಲಿ: ಸೈಬರ್ ಭದ್ರತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ 5,000 ‘ಸೈಬರ್ ಕಮಾಂಡೋ’ಗಳಿಗೆ ತರಬೇತಿ, ವೆಬ್ ಆಧಾರಿತ ಡೇಟಾ ರಿಜಿಸ್ಟ್ರಿ ಮತ್ತು ಸೈಬರ್ ಅಪರಾಧ ಮಾಹಿತಿ ಹಂಚಿಕೊಳ್ಳಲು ಪೋರ್ಟಲ್ ಮತ್ತು ರಾಷ್ಟ್ರೀಯ ನೋಂದಣಿ ಸೇರಿದಂತೆ ಹಲವಾರು ನೂತನ ಉಪಕ್ರಮಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (ಐ4ಸಿ) ಮೊದಲ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅಮಿತ್‌ ಶಾ, ಸೈಬರ್ ವಂಚನೆ ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಬ್ಯಾಂಕ್‌ಗಳು, ಹಣಕಾಸು ಮಧ್ಯವರ್ತಿಗಳು, ಪಾವತಿ ಸಂಗ್ರಾಹಕರು, ಟೆಲಿಕಾಂ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸೇವಾ ಪೂರೈಕೆದಾರರು, IT ಮಧ್ಯವರ್ತಿಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಸೈಬರ್ ಫ್ರಾಡ್ ಮಿಟಿಗೇಷನ್ ಸೆಂಟರ್ (CFMC) ಸ್ಥಾಪಿಸುವುದಾಗಿ ಘೋಷಿಸಿದರು.

ಆನ್‌ಲೈನ್ ಹಣಕಾಸು ಅಪರಾಧಗಳನ್ನು ನಿಭಾಯಿಸಲು ತಕ್ಷಣದ ಕ್ರಮ ಮತ್ತು ತಡೆರಹಿತ ಸಹಕಾರಕ್ಕಾಗಿ ಈ ಎಲ್ಲಾ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಸಿಎಫ್‌ಎಂಸಿ (CFMC)ಯು, ಕಾನೂನು ಜಾರಿಯಲ್ಲಿ “ಸಹಕಾರಿ ಫೆಡರಲಿಸಂ” ನ ಉದಾಹರಣೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.
ಮೇವಾತ್, ಜಮ್ತಾರಾ, ಅಹಮದಾಬಾದ್, ಚಂಡೀಗಢ, ವಿಶಾಖಪಟ್ಟಣಂ ಮತ್ತು ಗುವಾಹಟಿಯಲ್ಲಿ ಏಳು ಜಂಟಿ ಸೈಬರ್ ಸಮನ್ವಯ ತಂಡಗಳ ರಚನೆಯು ಉತ್ತಮ ಫಲಿತಾಂಶವನ್ನು ನೀಡಿದೆ ಮತ್ತು ಸೈಬರ್‌ ದೋಸ್ಟ್‌ ಉಪಕ್ರಮದ ಅಡಿಯಲ್ಲಿ ವಿವಿಧ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಐ4ಸಿ (I4C) ಪರಿಣಾಮಕಾರಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.”ನಮ್ಮ ಗುರಿಯನ್ನು ಸಾಧಿಸಲು, ನಾವು ನಿಖರವಾದ ಕಾರ್ಯತಂತ್ರವನ್ನು ರೂಪಿಸಬೇಕು ಮತ್ತು ಅದೇ ದಿಕ್ಕಿನಲ್ಲಿ ಒಟ್ಟಾಗಿ ಮುನ್ನಡೆಯಬೇಕು” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದ ದಾಳಿಗೆ ಭಾರತದ ಪ್ರತಿದಾಳಿ: ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತ...

ಜಂಟಿ ಸೈಬರ್ ಕ್ರೈಮ್ ಇನ್ವೆಸ್ಟಿಗೇಷನ್ ಫೆಸಿಲಿಟೇಶನ್ ಸಿಸ್ಟಮ್ ಆಗಿರುವ ಸಮನ್ವೇ ಪ್ಲಾಟ್‌ಫಾರ್ಮ್ ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಇದು ವೆಬ್-ಆಧಾರಿತ ಮಾಡ್ಯೂಲ್ ಆಗಿದ್ದು, ಸೈಬರ್ ಕ್ರೈಮ್‌ನ ಡೇಟಾ ರೆಪೊಸಿಟರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಡೇಟಾ ಹಂಚಿಕೆ, ಕ್ರೋಂ ಮ್ಯಾಪಿಂಗ್, ಡೇಟಾ ವಿಶ್ಲೇಷಣೆ, ಸಹಕಾರ ಮತ್ತು ಸಮನ್ವಯಕ್ಕಾಗಿ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಜಾಗತಿಕ ಡಿಜಿಟಲ್ ವಹಿವಾಟುಗಳಲ್ಲಿ 46% ಭಾರತದಲ್ಲಿ ನಡೆಯುತ್ತದೆ ಎಂದು ಸೂಚಿಸಿದ ಗೃಹ ಸಚಿವರು ಮತ್ತು ಮಾರ್ಚ್ 31 2014 ರಂದು ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 25 ಕೋಟಿಯಿಂದ ಮಾರ್ಚ್ 31 2024 ರಂದು 95 ಕೋಟಿಗೆ ಏರಿಕೆಯಾಗಿದೆ. ಡಿಜಿಟಲ್ ಇಂಡಿಯಾ ಉಪಕ್ರಮದಿಂದ 2024 ರಲ್ಲಿ ₹ 20.64 ಲಕ್ಷ ಕೋಟಿ ಮೌಲ್ಯದ ವಹಿವಾಟುಗಳನ್ನು ಡಿಜಿಟಲ್ ಮೂಲಕ ಮಾಡಲಾಗಿದೆ ಎಂದು ಅವರು ತಿಳಿಸಿದರು.

5 / 5. 5

ನಿಮ್ಮ ಕಾಮೆಂಟ್ ಬರೆಯಿರಿ

advertisement