ಮಂಗಳೂರು: ಜೆಸಿಬಿಯಿಂದ ಹಳೆ ಮನೆ ಕೆಡವುತ್ತಿದ್ದಾಗ ಕಾಂಕ್ರೀಟ್ ಬೀಮ್ ಕುಸಿದು ಬಿದ್ದು ಅಲ್ಲಿಯೇ ಕೆಳಗೆ ನಿಂತು ನೋಡುತ್ತಿದ್ದ ಇಬ್ಬರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ.
ಮನೆ ಮಾಲೀಕ ಜೇಮ್ಸ್ ಜತ್ತನ್ನ (56) ಹಾಗೂ ಅಡ್ವಿನ್ ಹೆರಾಲ್ಡ್ ಮಾಬೇನ್ (54) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮನೆಯ ಮಾಲಿಕ ಸೇರಿದಂತೆ ಇಬ್ಬರು ಕರಂಗಲ್ಪಾಡಿಯ ಸಿ.ಜೆ. ಕಾಮತ್ ರಸ್ತೆಯ ಮಿಷನ್ ಕಾಂಪೌಂಡ್ ನಲ್ಲಿ ಹಳೆ ಮನೆಯನ್ನು ಜೆಸಿಬಿಯಿಂದ ಕೆಡವುತ್ತಿದ್ದುದನ್ನು ನೋಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಜೇಮ್ಸ್ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಉದ್ದೇಶದಿಂದ ಬಹರೈನ್ ನಿಂದ ಬಂದಿದ್ದರು. ಅಡ್ವಿನ್ ಪಕ್ಕದ ಮನೆಯವರಾಗಿದ್ದು ಸೋದರ ಸಂಬಂಧಿಯಾಗಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ