ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ; 11 ದಿನಗಳ ಪ್ರಾಯಶ್ಚಿತಕ್ಕೆ ಮುಂದಾದ ಆಂಧ್ರ ಡಿಸಿಎಂ ಪವನ ಕಲ್ಯಾಣ

 ಅಮರಾವತಿ: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿದ್ದಕ್ಕಾಗಿ ವೆಂಕಟೇಶ್ವರ ದೇವರಿಗೆ ಪ್ರಾಯಶ್ಚಿತ್ತ ಮಾಡಲು 11 ದಿನಗಳ ಕಠಿಣ ವ್ರತ ಕೈಗೊಳ್ಳುವುದಾಗಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ ಕಲ್ಯಾಣ ಶನಿವಾರ ಹೇಳಿದ್ದಾರೆ.
ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರದಿಂದ ವ್ರತ ಆರಂಭಿಸುವುದಾಗಿ ನಟ-ರಾಜಕಾರಣಿ ಪವನ ಕಲ್ಯಾಣ ತಿಳಿಸಿದ್ದಾರೆ.
“11 ದಿನಗಳ ಪ್ರಾಯಶ್ಚಿತ ಕೈಗೊಂಡ ನಂತರ ನಾನು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡುತ್ತೇನೆ ಎಂದು ಕಲ್ಯಾಣ ‘ಎಕ್ಸ್’ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ. ಹಿಂದಿನ ವೈಎಸ್‌ಆರ್‌ಪಿ ಸರ್ಕಾರ ಮಾಡಿದ ಪಾಪಗಳನ್ನು ನಿವಾರಿಸಲು ಧಾರ್ಮಿಕ ಶುದ್ಧೀಕರಣ ಮಾಡುವ ಅಧಿಕಾರವನ್ನು ನೀಡುವಂತೆ ದೇವರಿಗೆ ಬೇಡಿಕೊಂಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಲ್ಲದೆ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನೌಕರರು ಮತ್ತು ಮಂಡಳಿಯ ಸದಸ್ಯರು ಈ ಅಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ವೈಎಸ್ಆರ್‌ಪಿ ಸರ್ಕಾರವು ಪವಿತ್ರ ತಿರುಪತಿ ಲಡ್ಡುಗಳನ್ನು ತಯಾರಿಸಲು ಕಳಪೆ ಗುಣಮಟ್ಟದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಆರೋಪಿಸಿದ್ದರು. ನಾಯ್ಡು ಅವರ ಆರೋಪಗಳು ದೇಶಾದ್ಯಂತ ಭಾರಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದವು.
ತಿರುಪತಿ ಲಡ್ಡುಗಳಲ್ಲಿ ಗೋವಿನ ಕೊಬ್ಬು, ಮೀನಿನ ಎಣ್ಣೆ ಮತ್ತು ಹಂದಿ ಕೊಬ್ಬು ಪತ್ತೆಯಾಗಿದೆ ಎಂದು ಲ್ಯಾಬ್‌ ವರದಿಗಳನ್ನು ಟಿಡಿಪಿ ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಬಾಬಾ ಸಿದ್ದಿಕ್‌ ಹತ್ಯೆ ನಂತರ ನಟ ಸಲ್ಮಾನ್ ಖಾನ್‌ ಭದ್ರತೆ ಹೆಚ್ಚಳ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement