ಲೆಬನಾನಿನ ಬೈರುತ್ನಲ್ಲಿ ಭೂಗತ ಬಂಕರ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಶುಕ್ರವಾರ ಕೊಲ್ಲಲ್ಪಟ್ಟರು. ಇಸ್ರೇಲಿ ಏರ್ ಫೋರ್ಸ್ ನಡೆಸಿದ ನಿಖರವಾದ ಯೋಜಿತ ದಾಳಿಯು ಬಹು ಗುಪ್ತಚರ ಸಂಸ್ಥೆಗಳ ಸಹಯೋಗವನ್ನು ಒಳಗೊಂಡಿತ್ತು ಮತ್ತು ಇಸ್ರೇಲಿನ ಈ ದಾಳಿಯಲ್ಲಿ ನಸ್ರಲ್ಲಾ ಜೊತೆಗೆ ಹಲವಾರು ಹಿರಿಯ ಹಿಜ್ಬುಲ್ಲಾ ಅಧಿಕಾರಿಗಳ ಸಾವಿಗೀಡಾದರು.
ಇಸ್ರೇಲ್ ದಕ್ಷಿಣ ಬೈರುತ್ನಲ್ಲಿರುವ ಹಿಜ್ಬೊಲ್ಲಾ ಪ್ರಬಾಲ್ಯದ ಪ್ರದೇಶಗಳ ಮೇಲೆ ದಾಳಿ ನಡೆಸಿತು. ಮತ್ತು ಭೂಮಿಯ ಕೆಳಗೆ 60 ಅಡಿಗಳಷ್ಟು ಆಳದಲ್ಲಿದ್ದ ಭಾರೀ ಭದ್ರವಾದ ಬಂಕರ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ವಾಲ್ ಸ್ಟ್ರೀಟ್ ಜರ್ನಲ್ನ ವರದಿಯ ಪ್ರಕಾರ, ತಕ್ಷಣದ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳದಂತೆ ತೆಹ್ರಾನಿನ ಒತ್ತಡದ ನಡುವೆ ಇರಾನ್ ಬೆಂಬಲಿತ ಹಿಜ್ಬೊಲ್ಲಾ ಗುಂಪಿನ ಇತರ ಉನ್ನತ-ಶ್ರೇಯಾಂಕದ ನಾಯಕರು ಇಸ್ರೇಲ್ ವಿರುದ್ಧ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಒಟ್ಟುಗೂಡಿದ್ದರು.
ಇತ್ತೀಚಿನ ಇತಿಹಾಸದಲ್ಲಿ ಬೈರುತ್ ನಗರ ಕೇಂದ್ರದ ಮೇಲೆ ನಡೆದ ಅತಿ ದೊಡ್ಡ ದಾಳಿಯಲ್ಲಿ ಒಂದೆಂದು ವರ್ಣಿಸಲಾದ ಈ ದಾಳಿಯಲ್ಲಿ ಇಸ್ರೇಲಿ ಸೇನೆಯು ಸುಮಾರು 80 ಟನ್ಗಳಷ್ಟು ಸ್ಫೋಟಕಗಳನ್ನು ಬಳಸಿದೆ ಎಂದು ಹೇಳಲಾಗಿದೆ. ಇದರಲ್ಲಿ ಸುಮಾರು 85 ವಿಶೇಷವಾದ “ಬಂಕರ್-ಬಸ್ಟರ್” ಬಾಂಬುಗಳನ್ನು ಭೂಗತ ಬಂಕರ್ಗಳನ್ನು ನಾಶ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಯುದ್ಧಸಾಮಗ್ರಿಗಳು, 30 ಮೀಟರ್ಗಳಷ್ಟು ಭೂಮಿಯ ಆಳಕ್ಕೆ ಅಥವಾ ಆರು ಮೀಟರ್ ಬಲವಾದ ಕಾಂಕ್ರೀಟ್ನ ಮೂಲಕ ನುಗ್ಗುವ ಸಾಮರ್ಥ್ಯವನ್ನು ಹೊಂದಿವೆ. ಯೋಜಿಸಿದ ಎಲ್ಲವನ್ನೂ ಇಸ್ರೇಲ್ ಮಿಲಿಟರಿ ನಿಖರವಾಗಿ ಕಾರ್ಯಗತಗೊಳಿಸಿದೆ.
ಬಂಕರ್-ಬಸ್ಟರ್ ಬಾಂಬ್ಗಳ ತೂಕ 907 ಕೆಜಿಯಿಂದ 1,814 ಕೆಜಿ ವರೆಗೆ ಇರುತ್ತದೆ. ಲೆಬನಾನ್ನಲ್ಲಿ 2,000 ಕ್ಕೂ ಹೆಚ್ಚು ವೈಮಾನಿಕ ದಾಳಿಗಳು ನಡೆದವು. ದಾಳಿಯು ಹೆಜ್ಬೊಲ್ಲಾದ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ.
ಇಸ್ರೇಲ್ ವೈಮಾನಿಕ ದಾಳಿಗಳು ಹಿಜ್ಬೊಲ್ಲಾ ಸಂಗ್ರಹಿಸಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕ್ಷಿಪಣಿಗಳ ಸಂಗ್ರಹವನ್ನು ನಾಶಪಡಿಸಿತು. ದಾಳಿಯ ಸಮಯದಲ್ಲಿ ಬಂಕರ್ನಲ್ಲಿ ನಸ್ರಲ್ಲಾ ಇರುವುದನ್ನು ಗುಪ್ತಚರ ದೃಢಪಡಿಸಿದ ನಂತರ ದಾಳಿಗಳು ನಡೆದಿವೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. “ನಸ್ರಲ್ಲಾ ಅವರು ಹಿರಿಯ ಭಯೋತ್ಪಾದಕರನ್ನು ಭೇಟಿಯಾಗುತ್ತಿದ್ದಾರೆ ಎಂದು ನಮಗೆ ಗುಪ್ತಚರ ಮಾಹಿತಿ ಇತ್ತು ಮತ್ತು ನಾವು ಅದರಂತೆ ಯೋಜನೆ ರೂಪಿಸಿದೆವು ಎಂದು ಇಸ್ರೇಲಿ ವಕ್ತಾರ ನಾದವ್ ಶೋಶಾನಿ ಅವರು ವಾಲ್ ಸ್ಟ್ರೀಟ್ ಜರ್ನಲ್ (WSJ)ಗೆ ತಿಳಿಸಿದ್ದಾರೆ.
ಸಂಘರ್ಷವು ಈಗಾಗಲೇ ಇಸ್ರೇಲ್-ಲೆಬನಾನ್ ಗಡಿಯ ಎರಡೂ ಬದಿಗಳಲ್ಲಿ ಸಾವಿರಾರು ಜನರ ಸ್ಥಳಾಂತರಕ್ಕೆ ಕಾರಣವಾಗಿದೆ. ಕಳೆದ ವಾರವೊಂದರಲ್ಲೇ 2,00,000 ಕ್ಕೂ ಹೆಚ್ಚು ಲೆಬನಾನಿನ ನಾಗರಿಕರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ, ಹೋರಾಟವು ತೀವ್ರಗೊಳ್ಳುತ್ತಿದ್ದಂತೆ ಇನ್ನೂ ಅನೇಕರು ಪಲಾಯನ ಮಾಡುವ ನಿರೀಕ್ಷೆಯಿದೆ.
ಹಿಜ್ಬೊಲ್ಲಾ ಗುಂಪು ತನ್ನ ದಾಳಿಯನ್ನು ನಿಲ್ಲಿಸುವವರೆಗೂ ಹಿಜ್ಬೊಲ್ಲಾ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯ ಮುಂದುವರಿಯಲಿದೆ ಎಂದು ಇಸ್ರೇಲ್ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ