ರಾಯ್ಪುರ : ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ನಡುವೆ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ 30 ಮಾವೋವಾದಿಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಈ ಎನ್‌ಕೌಂಟರ್ ಛತ್ತೀಸ್‌ಗಢದಲ್ಲಿ ಮಾವೋವಾದಿ ದಂಗೆಯ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ಒಂದು ದೊಡ್ಡ ಯಶಸ್ಸನ್ನು ಸೂಚಿಸುತ್ತದೆ. ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಅಬುಜ್ಮದ್ ಅರಣ್ಯದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎನ್‌ಕೌಂಟರ್ ಆರಂಭವಾಗಿದೆ.
ಅಧಿಕಾರಿಯೊಬ್ಬರ ಪ್ರಕಾರ, ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಸ್ತುತ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಿನ್ನೆ ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ಎನ್‌ಕೌಂಟರ್ ಶುರುವಾಗಿದ್ದು, ಎನ್‌ಕೌಂಟರ್ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎಕೆ ಸರಣಿ ಮತ್ತು ಇತರ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವಾರು ಆಕ್ರಮಣಕಾರಿ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೆಂದೂರು-ತುಳತುಳಿ ಸಮೀಪದ ಅರಣ್ಯದಲ್ಲಿ ಇಂದು ಮಧ್ಯಾಹ್ನ ಎನ್‌ಕೌಂಟರ್ ನಡೆದಿದೆ. ತೀವ್ರ ಎಚ್ಚರಿಕೆ ವಹಿಸಿ, ಭದ್ರತಾ ಪಡೆಗಳು ಕಾಡಿನೊಳಗೆ ಪ್ರವೇಶಿಸಿವೆ. ಹಾಗೂ ಪಲಾಯನ ಮಾಡಿರುವ ಉಳಿದ ಮಾವೋವಾದಿಗಳನ್ನು ಹಿಂಬಾಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಮಾವೋವಾದಿ ಹತ್ಯೆಯ ವರದಿಗಳು ಹೊರಬಂದ ಕೂಡಲೇ, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ ಸಾಯಿ ಅವರು ಭದ್ರತಾ ಪಡೆಗಳ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. “ಸೈನಿಕರು ಸಾಧಿಸಿದ ಈ ಮಹಾನ್ ಯಶಸ್ಸು ಶ್ಲಾಘನೀಯ. ಅವರ ಧೈರ್ಯ ಮತ್ತು ಅದಮ್ಯ ಶೌರ್ಯಕ್ಕೆ ನಾನು ವಂದಿಸುತ್ತೇನೆ” ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಗುರುವಾರ, ಭದ್ರತಾ ಪಡೆಗಳು ಸುಕ್ಮಾ ಜಿಲ್ಲೆಯ ಬಸ್ತಾರ್ ಪ್ರದೇಶದ ನಕ್ಸಲೈಟ್ ಶಿಬಿರವನ್ನು ಎನ್‌ಕೌಂಟರ್ ನಂತರ ಕೆಡವಿದವು. ಕಾರ್ಯಾಚರಣೆಯ ಸಮಯದಲ್ಲಿ ಅವರು ಸ್ಫೋಟಕಗಳು ಮತ್ತು ಇತರ ಶಶ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡರು.
ಸಿಆರ್‌ಪಿಎಫ್‌ನ ಗಣ್ಯ ಘಟಕವಾದ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) 206, 208, 204 ಮತ್ತು 203 ನೇ ಬೆಟಾಲಿಯನ್‌ಗಳ ಜೊತೆಗೆ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ಬಸ್ತಾರ್ ಫೈಟರ್ಸ್ ಮತ್ತು ಡಿಸ್ಟ್ರಿಕ್ಟ್ ಫೋರ್ಸ್‌ನ ಸಿಬ್ಬಂದಿಗಳು ಗುರುವಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. .
ನಿಮ್ಮ ಕಾಮೆಂಟ್ ಬರೆಯಿರಿ