ದಕ್ಷಿಣ ಬೈರುತ್‌ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಿಜ್ಬೊಲ್ಲಾದ ಸೆಕ್ರೆಟರಿ ಜನರಲ್ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯಾದ ಹಶೆಮ್ ಸಫಿದ್ದೀನ್ ಕೂಡ ಇಸ್ರೇಲಿ ದಾಳಿಯಲ್ಲಿ ತಮ್ಮ ಸಹಚರರೊಂದಿಗೆ ಕೊಲ್ಲಲ್ಪಟ್ಟರು ಎಂದು ಸೌದಿ ಸುದ್ದಿ ಮಾಧ್ಯಮ ಅಲ್ ಹದತ್ ಶನಿವಾರ ವರದಿ ಮಾಡಿದೆ.
ಇಸ್ರೇಲಿ ವಾಯುದಾಳಿಯಲ್ಲಿ ಲೆಬನಾನಿನ ರಾಜಧಾನಿ ಬೈರುತ್‌ನಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಕೊಲ್ಲಲ್ಪಟ್ಟ ಒಂದು ವಾರದ ನಂತರ, ಅವರ ಉತ್ತರಾಧಿಕಾರಿ ಎಂದು ಭಾವಿಸಲಾದ ಹಶೆಮ್ ಸಫಿದ್ದೀನ್ ದಕ್ಷಿಣ ಬೈರುತ್‌ನಲ್ಲಿ ಕೊಲ್ಲಲ್ಪಟ್ಟರು ಎಂದು ಹೇಳಲಾಗಿದೆ.
ಸಫೀದ್ದೀನ್ ಮತ್ತು ಉಗ್ರಗಾಮಿ ಗುಂಪಿನ ಇತರ ಉನ್ನತ ಶ್ರೇಣಿಯ ಸದಸ್ಯರು ಭೂಗತ ಬಂಕರ್‌ನಲ್ಲಿ ಸೇರಿದ್ದ ವೇಳೆ ಇಸ್ರೇಲಿ ರಖ್ಷಣಾ ಪಡೆಗಳ (IDF) ವೈಮಾನಿಕ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು. ಹಶೆಮ್ ಸಫೀದಿನ್ ಸಾವನ್ನು ಇಸ್ರೇಲ್ ದೃಢಪಡಿಸಿದೆ ಎಂದು ಅಲ್ ಹದತ್ ಹೇಳಿಕೊಂಡಿದೆ. ಆದರೆ, ಇಸ್ರೇಲ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ಲೆಬನಾನಿನ ಮೂಲಗಳನ್ನು ಉಲ್ಲೇಖಿಸಿ ಇಸ್ರೇಲಿ ಮಾಧ್ಯಮವು ಶುಕ್ರವಾರ ಮತ್ತು ಶನಿವಾರದ ನಡುವೆ ರಾತ್ರಿಯಿಡೀ ಬೈರುತ್‌ನ ದಹೀಹ್ ಉಪನಗರದಲ್ಲಿ ಹಾಶೆಮ್ ಸಫೀದ್ದೀನ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿ ಮಾಡಿದೆ. ಶುಕ್ರವಾರ, ದಕ್ಷಿಣ ಉಪನಗರಗಳಲ್ಲಿನ ಹಿಜ್ಬೊಲ್ಲಾದ ಗುಪ್ತಚರ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದೆ ಮತ್ತು ಹಿಜ್ಬೊಲ್ಲಾ ಪ್ರಮುಖ ವ್ಯಕ್ತಿಗಳ ಮೇಲೆ ಸರಣಿ ದಾಳಿಯ ನಂತರದ ಹಾನಿಯನ್ನು ನಿರ್ಣಯಿಸುತ್ತಿದೆ ಎಂದು ಹೇಳಿದೆ.
https://twitter.com/alexplitsas/status/1842387527006667263?ref_src=twsrc%5Etfw%7Ctwcamp%5Etweetembed%7Ctwterm%5E1842387527006667263%7Ctwgr%5E1a6d1306f9dfad5aa3ecaa925a7b29f2c6e025f5%7Ctwcon%5Es1_&ref_url=https%3A%2F%2Fwww.news18.com%2Fworld%2Fhezbollah-chief-nasrallahs-presumed-successor-hashem-safieddine-killed-in-israeli-strike-in-beirut-report-9074498.htmlಗುರುವಾರ ರಾತ್ರಿ ಬೈರುತ್‌ನ ಭೂಗತ ಬಂಕರ್‌ನಲ್ಲಿ ಹಶೆಮ್ ಸಫೀದ್ದೀನ್ ಅವರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ನ್ಯೂಸ್ ಪೋರ್ಟಲ್ ಆಕ್ಸಿಯೋಸ್ ಮೂರು ಇಸ್ರೇಲಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇಸ್ರೇಲಿ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಅವರು ಶನಿವಾರ X ನಲ್ಲಿ ಸಫಿದ್ದೀನ್ ಮತ್ತು ನಸ್ರಲ್ಲಾ ಅವರ ಫೋಟೋವನ್ನು ಪೋಸ್ಟ್ ಮಾಡಿದರು ಮತ್ತು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ “ನಿಮ್ಮ ಪ್ರಾಕ್ಸಿಗಳನ್ನು ಕರೆದುಕೊಂಡು ಲೆಬನಾನ್ ತೊರೆಯಿರಿ” ಎಂದು ಹೇಳಿದ್ದಾರೆ.
ಸೆಪ್ಟಂಬರ್ 27 ರಂದು ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ ಹಿಜ್ಬೊಲ್ಲಾದ ಹಿರಿಯ ಮಿಲಿಟರಿ ಹಿರಿಯ ನಾಯಕರು ಸಾವಿಗೀಡಾಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ