ಶಾರ್ಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ : ಒಂದೇ ಕುಟುಂಬದ 7 ಮಂದಿ ಸಾವು

ಮುಂಬೈ: ಮುಂಬೈನ ಚೆಂಬೂರಿನಲ್ಲಿ ಎರಡು ಅಂತಸ್ತಿನ ಅಂಗಡಿ ಮತ್ತು ವಸತಿ ಕಟ್ಟಡದಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಜನರು ಸಾವಿಗೀಡಾಗಿದ್ದಾರೆ.
ಸಿದ್ದಾರ್ಥ ಕಾಲೋನಿಯಲ್ಲಿರುವ ಕಟ್ಟಡದಲ್ಲಿ ಭಾನುವಾರ ಮುಂಜಾನೆ 5:20ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಟ್ಟಡದ ನೆಲ ಮಹಡಿಯನ್ನು ಅಂಗಡಿಯಾಗಿ ಮತ್ತು ಮೇಲಿನ ಮಹಡಿಯನ್ನು ನಿವಾಸವಾಗಿ ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಬೆಂಕಿ ಅವಘಡದ ನಂತರ ತೀವ್ರ ಸುಟ್ಟಗಾಯಗಳಾಗಿದ್ದವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅಂತಿಮವಾಗಿ ತೀವ್ರ ಸುಟ್ಟಗಾಯಗಳಿಂದಾಗಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಪ್ರೆಸಿ ಪ್ರೇಮ್ ಗುಪ್ತಾ (7), ಮಂಜು ಪ್ರೇಮ್ ಗುಪ್ತಾ (30), ಅನಿತಾ ಧರಂದೇವ ಗುಪ್ತಾ (39), ಪ್ರೇಮ್ ಚೇದಿರಾಮ ಗುಪ್ತಾ (30) ಮತ್ತು ನರೇಂದ್ರ ಗುಪ್ತಾ (10), ವಿಧಿ ಚೇದಿರಾಮ ಗುಪ್ತಾ (15) ಮತ್ತು ಗೀತಾದೇವಿ ಧರ್ಮದೇವ ಗುಪ್ತಾ (60) ಎಂದು ಗುರುತಿಸಲಾಗಿದೆ.
ನೆಲ ಮಹಡಿಯಲ್ಲಿನ ವಿದ್ಯುತ್ ವೈರಿಂಗ್ ಬಳಿ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಅಪಘಾತದ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ವಲಯ 6 ರ ಡಿಸಿಪಿ ಹೇಮರಾಜ ಸಿಂಗ್ ರಜಪೂತ್ ಹೇಳಿದ್ದಾರೆ. “ನಮಗೆ ಬೆಳಿಗ್ಗೆ 6 ಗಂಟೆಯ ಸುಮಾರಿಗೆ G+2 ಕಟ್ಟಡದ ಮೇಲೆ ಕರೆ ಬಂದಿತು, ನೆಲ ಮಹಡಿಯಲ್ಲಿ ಅಂಗಡಿ ಇತ್ತು ಮತ್ತು ಕುಟುಂಬಗಳು ಇತರ ಎರಡು ಮಹಡಿಗಳಲ್ಲಿ ಉಳಿದುಕೊಂಡಿವೆ. ಈ ದುರ್ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದು, ಅಂಗಡಿಯಲ್ಲಿ ಮಲಗಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಆರ್‌.ಜಿ. ಕರ್ ಕಾಲೇಜ್‌ ವೈದ್ಯೆ ಅತ್ಯಚಾರ-ಕೊಲೆ ಪ್ರಕರಣ ; ಮಾಜಿ ಪ್ರಾಂಶುಪಾಲ ಸಂದೀಪ ಘೋಷ್‌ ಗೆ ಜಾಮೀನು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement