ಬೀಳಗಿ : ಮೊಸಳೆ ದಾಳಿಯಿಂದ ಮಾಲೀಕನ ಪ್ರಾಣ ಉಳಿಸಿದ ಎತ್ತು…!

ಬಾಗಲಕೋಟೆ : ಮೊಸಳೆ ದಾಳಿಯಿಂದ ತನ್ನ ಮಾಲೀಕನನ್ನು ಎತ್ತು ಕಾಪಾಡಿದೆ. ಬಾಗಲಕೋಟೆ (Bagalkot) ‌ಜಿಲ್ಲೆ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಧರಿಯಪ್ಪ ಮೇಟಿ (32) ಎಂಬ ರೈತ ಎತ್ತಿನ ಮೈತೊಳೆಯಲು ಹೋದಾಗ ಈ ಘಟನೆ ನಡೆದಿದೆ.
ಎತ್ತಿನ‌ ಮೈ ತೊಳೆಯಲು ಆಲಮಟ್ಟಿ ಜಲಾಶಯದ ಹಿನ್ನೀರು ಕೃಷ್ಣಾ ನದಿಗೆ ಧರಿಯಪ್ಪ ಮೇಟಿ ಹೋಗಿದ್ದರು. ಅವರು ಎತ್ತಿನ ಸಮೇತ ನದಿಗೆ ಇಳಿದಾಗ ದಾಳಿ ಮಾಡಿದ ಮೊಸಳೆ ಮೊದಲು ಎತ್ತಿನ ಕಾಲು ಹಿಡಿದಿದೆ. ಆದರೆ ಎತ್ತಿನ ಕಾಲನ್ನು ಝಾಡಿಸಿ ತಪ್ಪಿಸಿಕೊಂಡಿದೆ. ನಂತರ ಅದು ಧರಿಯಪ್ಪ ಮೇಟಿ ಅವರ ಬಲಗೈ ಹಿಡಿಕೊಂಡಿದೆ. ತಕ್ಷಣವೇ ಧರಿಯಪ್ಪ ಮೇಟಿ ಎಡಗೈಯಿಂದ ಎತ್ತಿನ ಹಗ್ಗ ಗಟ್ಟಿಯಾಗಿ ಹಿಡಿದ್ದಾರೆ. ಆಗ ಮೊಸಳೆ ಅವರನ್ನು ನೀರಿಗೆ ಎಳೆದಿದೆ. ಆದರೆ ಹಗ್ಗ ಜಗ್ಗಿ ಹಿಡಿದು ಎತ್ತಿಗೆ ಸೂಚನೆ ಕೊಡುತ್ತಿದ್ದಂತೆಯೇ ಎತ್ತು ಮಾಲೀಕನನ್ನು ಮೊಸಳೆ ಸಮೇತ ಎಳದೆಕೊಂಡು ದಡಕ್ಕೆ ತಂದಿದೆ. ದಡಕ್ಕೆ ಬರುತ್ತಿದ್ದಂತೆ ಹೆದರಿದ ಮೊಸಳೆ ಧರಿಯಪ್ಪ ಮೇಟಿಯವರನ್ನು ನದಿಯೊಳಗೆ ಹೋಗಿದೆ. ಮೊಸಳೆ ಬಲವಾಗಿ ಕೈಯನ್ನು ಕಚ್ಚಿ ಹಿಡಿದಿದ್ದರಿಂದ ಧರಿಯಪ್ಪ ಮೇಟಿ ಅವರ ಬಲಗೈ ಕಟ್​ ಆಗಿದೆ. ಎತ್ತು ಇಲ್ಲದಿದ್ದರೆ ಧರಿಯಪ್ಪ ಮೇಟಿ ಅವರ ಜೀವಕ್ಕೆ ಅಪಾಯವಾಗುವ ಸಂಭವವಿತ್ತು. ಗಾಯಗೊಂಡಿರುವ ವ್ಯಕ್ತಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಭಾರಿ ಮಳೆ ಮುನ್ಸೂಚನೆ : ಜೂನ್ 16 ರಂದು ದ.ಕ. ಜಿಲ್ಲೆಯ 5 ತಾಲೂಕುಗಳೂ, ಉಡುಪಿ ಜಿಲ್ಲೆ ಎಲ್ಲ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement