ಜಪಾನಿನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ

ಓಸ್ಲೋ : ಜಪಾನ್‌ನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಪರಮಾಣು ಶಸ್ತ್ರಾಸ್ತ್ರ ಮುಕ್ತ ಜಗತ್ತನ್ನು ನಿರ್ಮಿಸಲು ದಣಿವರಿಯದ ಪ್ರಯತ್ನಗಳಿಗಾಗಿ ಈ ಬಹುಮಾನವನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿಯ ಅಧ್ಯಕ್ಷ ಜಾರ್ಗೆನ್ ವಾಟ್ನೆ ಫ್ರೈಡ್ನೆಸ್ ತಿಳಿಸಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನಕ್ಕಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎಂದು ಸಾಕ್ಷಿಗಳ ಮೂಲಕ ಪ್ರದರ್ಶಿಸಿದ್ದಕ್ಕಾಗಿ ಹಿಬಾಕುಶಾ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ, ”ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

1956 ರಲ್ಲಿ ಸ್ಥಾಪನೆಯಾದ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಯನ್ನು ಹಿಬಾಕುಶಾ (ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರನ್ನು ಪ್ರತಿನಿಧಿಸುವ ಜಪಾನೀಸ್ ಸಂಸ್ಥೆ) ಎಂದೂ ಕರೆಯಲಾಗುತ್ತದೆ.
ಸಂಘರ್ಷದಲ್ಲಿ ಬಳಸಲಾದ ಎರಡು ಪರಮಾಣು ಬಾಂಬ್‌ಗಳ ಸಾಕ್ಷಿಗಳು ಪರಮಾಣು ಮುಕ್ತ ಪ್ರಪಂಚದ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
ಈ ವರ್ಷದ ಬಹುಮಾನಕ್ಕಾಗಿ ಪರಿಗಣಿಸಲು 286 ಅಭ್ಯರ್ಥಿಗಳನ್ನು ನೋಂದಾಯಿಸಲಾಗಿದೆ ಎಂದು ನಾರ್ವೇಜಿಯನ್ ನೊಬೆಲ್ ಸಂಸ್ಥೆ ಹೇಳಿದೆ, ಅದರಲ್ಲಿ 197 ವ್ಯಕ್ತಿಗಳು ಮತ್ತು 89 ಸಂಸ್ಥೆಗಳಾಗಿವೆ.

ಈ ಬಗ್ಗೆ ನಿಹಾನ್ ಹಿಡಾಂಕ್ಯೊ ಸಹ ಮುಖ್ಯಸ್ಥರು ಪ್ರತಿಕ್ರಿಯಿಸಿ, ನೊಬೆಲ್ ಪುರಸ್ಕಾರ ಗೆಲ್ಲುತ್ತೇವೆ ಎಂದು ಕನಸು ಕಂಡಿರಲಿಲ್ಲ ಎಂದು ಹೇಳಿದ್ದಾರೆ.
ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ ನಡೆಸಿದ ಪರಮಾಣು ದಾಳಿಯ ಸಂತ್ರಸ್ತರ ಬಗ್ಗೆ ಅನೇಕ ಸಾಕ್ಷ್ಯ ಚಿತ್ರಗಳನ್ನು ಈ ಸಂಸ್ಥೆ ನಿರ್ಮಿಸಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಯಾವ ದೇಶವು ಪರಮಾಣು ದಾಳಿ ನಡೆಸಬಾರದು ಎಂದೂ ಮನವಿ ಮಾಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement