ತನ್ನ 17 ವರ್ಷದ ಮಗಳನ್ನು ಕೊಲೆ ಮಾಡಲು ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದ 42 ವರ್ಷದ ಮಹಿಳೆಯನ್ನು ಅದೇ ಗುತ್ತಿಗೆ ಕೊಲೆಗಾರನೇ ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ಬಾಡಿಗೆ ಕೊಲೆಗಾರ ತನ್ನ ಮಗಳ ಪ್ರಿಯಕರ ಎಂಬುದು ಬಹಿರಂಗವಾದಾಗ ಪ್ರಕರಣಕ್ಕೆ ಈ ಪ್ರಕರಣ ಈ ರೀತಿಯ ಟ್ವಿಸ್ಟ್ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದ ಇತಾಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಕಾ ಎಂದು ಗುರುತಿಸಲಾದ ಮಹಿಳೆಯು ಅಕ್ಟೋಬರ್ 6 ರಂದು ರಾಗಿ ಹೊಲದಲ್ಲಿ ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಪತಿ ರಮಾಕಾಂತ ಅವರು ಆಕೆ ಮನೆಯಿಂದ ಹೊರಹೋದವಳು ಮನೆಗೆ ಹಿಂತಿರುಗಿ ಬಾರದ ಕಾರಣ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಪೋಲೀಸರ ಪ್ರಕಾರ, ಅಲ್ಕಾ ತನ್ನ ಾಪ್ರಾಪ್ತ ಮಗಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರಿಂದ ತೀವ್ರವಾಗಿ ಘಾಸಿಗೊಂಡಿದ್ದಳು. ನಂತರ ಅವಳನ್ನು ಕೊಲ್ಲು ನಿರ್ಧರಿಸಿದ್ದಳು. ಹೀಗಾಗಿ ಆಕೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಸುಭಾಷ್ ಎಂಬಾತನನ್ನು ಸಂಪರ್ಕಿಸಿದಳು. ಹಾಗೂ ಮಗಳನ್ನು ಕೊಲ್ಲಲು ಸುಭಾಷಗೆ 50,000 ರೂ. ಸುಪಾರಿ ನೀಡುವುದಾಗಿ ತಿಳಿಸಿದ್ದಳು.
ಆದರೆ ಇದೇ ಸುಭಾಷ ಜೊತೆಯೇ ತನ್ನ ಮಗಳ ಲವ್ವಿಡವ್ವಿ ಇತ್ತು ಎಂದು ಎಂಬುದು ಅಲ್ಕಾಗೆ ತಿಳಿದಿರಲಿಲ್ಲ. ಸುಭಾಷ್ ನೀಡಿದ ಮೊಬೈಲ್ ಫೋನ್ ಮೂಲಕ ಅಲ್ಕಾಳ ಅಪ್ರಾಪ್ತ ಮಗಳು ಹಾಗೂ ಈತ ಇಬ್ಬರೂ ಮಾತನಾಡುತ್ತಿದ್ದರು ಎಂಬುದು ಅಲ್ಕಾಗೆ ಗೊತ್ತಿರಲಿಲ್ಲ.
ಅಲ್ಕಾಳ ಯೋಜನೆ ಬಗ್ಗೆ ಸುಭಾಷ ಆ ಹುಡುಗಿಗೆ ತಿಳಿಸಿದ್ದ. ಆಗ ಮಗಳು ತಾಯಿಯನ್ನು ಕೊಲ್ಲಲು ಸುಭಾಷಗೆ ಸುಪಾರಿ ನೀಡಿದ್ದಾಳೆ. ತನ್ನ ತಾಯಿಯನ್ನು ಕೊಂದರೆ ನಿನ್ನನ್ನೇ ಮದುವೆಯಾಗುವುದಾಗಿ ಆತನ ಮುಂದೆ ಪ್ರಸ್ತಾವನೆ ಇಟ್ಟಿದ್ದಾಳೆ. ಆಗ ಸುಭಾಷ ಕೊಲೆ ಮಾಡಲು ಒಪ್ಪಿಕೊಂಡಿದ್ದಾನೆ. ನಂತರ ಇಬ್ಬರೂ ಸೇರಿ ಅಲ್ಕಾಳನ್ನು ಕೊಲ್ಲಲು ಯೋಜನೆ ರೂಪಿಸಿದರು.
ಸುಭಾಷ ತನ್ನ ಮಗಳ ಕೊಲೆ ಮಾಡಿದ್ದನ್ನು ಬಿಂಬಿಸಲು ಫೋಟೋಗಳನ್ನು ಅಲ್ಕಾಗೆ ಕಳುಹಿಸಿದ. ಹಾಗೂ ಒಪ್ಪಂದದ ಪ್ರಕಾರ 50,000 ರೂ. ಕೇಳಿದ್ದಾನೆ.. ಇಬ್ಬರು ಆಗ್ರಾದಲ್ಲಿ ಭೇಟಿಯಾದರು. ಅಲ್ಲಿ ಸುಭಾಷ ಆಕೆಯ ಮಗಳನ್ನು ಕೊಂದಿಲ್ಲ ಎಂದು ಅಲ್ಕಾಗೆ ತಿಳಿಸಿದ್ದಾನೆ.
ಇದರ ನಂತರ, ಅಲ್ಕಾ, ಮಗಳು ಹಾಗೂ ಮತ್ತು ಸುಭಾಷ ಒಟ್ಟಿಗೆ ಪ್ರಯಾಣಿಸಿದ್ದಾರೆ. ನಂತರ ಅಲ್ಕಾಳನ್ನು ಇಟಾಹದಲ್ಲಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಆಕೆಯ ದೇಹವನ್ನು ರಾಗಿ ಹೊಲದಲ್ಲಿ ಬಿಸಾಡಿ ಪರಾರಿಯಾಗಿದ್ದರು. ಈಗ ಪೊಲೀಸರು ಮಗಳು ಹಾಗೂ ಬಾಡಿಗೆ ಹಂತನನ್ನು ಬಂಧಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ