ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ : ಪತ್ನಿ ಸೇರಿ ಮೂವರ ಬಂಧನ

ಬೆಳಗಾವಿ: ಬೆಳಗಾವಿಯ ಖ್ಯಾತ ಉದ್ಯಮಿ ಹಾಗೂ ಗುತ್ತಿಗೆದಾರ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪತ್ನಿ ಉಮಾ ಆಲಿಯಾಸ್ ಸರಿತಾ, ಶೋಭಿತ್ ಗೌಡ ಮತ್ತು ಪವನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಾಳ ಮಾರುತಿ ಪೊಲೀಸರು   ಗುರುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಈ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವಿಧಿಸಲಾಗಿದೆ. ಅ. ೯ರಂದು ಸಂತೋಷ ಪದ್ಮಣ್ಣವರ ಸಾವಿಗೀಡಾಗಿದ್ದರು, ಆದರೆ ಆಗ ಪತ್ನಿ ಉಮಾ ಹೃದಯಾಘಾತ ಎಂದು ಸಂಬಂಧಿಕರಿಗೆ ಹೇಳಿ ಅಂತ್ಯಸಂಸ್ಕಾರ ಮಾಡಿದ್ದರು, ಆದರೆ ಪುತ್ರಿ ಸಂಜನಾ ಬಂದ ನಂತರ ಸಿಸಿಟಿವಿ ದೃಶ್ಯ ಗಮನಿಸಲು ಹೋಗಿದ್ದ ಸಂದರ್ಭದಲ್ಲಿ ಇದು ಆಕಸ್ಮಿಕ ಅಲ್ಲ ಎಂದು ಅವರಿಗೆ ಅನುಮಾನ ಬಂದಿತ್ತು, ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾಳಮಾರುತಿ ಸಿಪಿಐ ಉಮಾ ಪದ್ಮಣ್ಣವರ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಅವರ ಮರಣೋತ್ತರ ಪರೀಕ್ಷಾ ವರದಿ ನಂತರ ಪ್ರಕರಣಕ್ಕೆ ಇನ್ನಷ್ಟು ಸ್ಪಷ್ಟತೆ ಸಿಗಲಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement