ವೀಡಿಯೊ..| ಹಮಾಸ್ ಮುಖ್ಯಸ್ಥನ ಹತ್ಯೆಯ ನಂತರ ಇಸ್ರೇಲ್ ಪ್ರಧಾನಿ ಮನೆ ಮೇಲೆ ಹಿಜ್ಬೊಲ್ಲಾ ಡ್ರೋನ್ ದಾಳಿ ವಿಫಲಗೊಳಿಸಿದ ಭದ್ರತಾ ಸಿಬ್ಬಂದಿ

ಟೆಲ್ ಅವೀವ್: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಪ್ರತಿಕಾರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆ ಮೇಲೆ ಡ್ರೋನ್ ದಾಳಿ ನಡೆಸಿರುವ ಹಿಜ್ಬೊಲ್ಲಾ ಉಗ್ರಸಂಘಟನೆ ಪ್ರಯತ್ನವನ್ನು ಇಸ್ರೇಲ್‌ ಭದ್ರತಾ ಸಿಬ್ಬಂದಿ ಇದನ್ನು ವಿಫಲಗೊಳಿಸಿವೆ. ಅವರು ಡ್ರೋನ್ ಹೊಡೆದುರುಳಿಸುವ ಮೂಲಕ‌ ಹತ್ಯೆ ಯತ್ನವನ್ನು ವಿಫಲಗೊಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸವನ್ನು ಗುರಿಯಾಗಿಸಿಕೊಂಡು ಹಿಜ್ಬುಲ್ಲಾ ಡ್ರೋನ್ ದಾಳಿ ನಡೆಸಿದೆ. ಪ್ರಧಾನಿ ನೆತನ್ಯಾಹು ಅವರ ಖಾಸಗಿ ನಿವಾಸವಿರುವ ಹೈಫಾದ ಸಿಸೇರಿಯಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟದ ಸದ್ದು ಕೇಳಿಬಂದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅವರ ಪತ್ನಿ ಇರಲಿಲ್ಲ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಈ ಸಮಯದಲ್ಲಿ ಲೆಬನಾನ್‌ನಿಂದ ಉಡಾವಣೆಯಾದ ಡ್ರೋನ್ ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲಿ ಸೇನೆ (ಐಡಿಎಫ್) ಹೇಳಿದೆ. ಜೆರುಸಲೆಮ್ ಪೋಸ್ಟ್ ವರದಿಯ ಪ್ರಕಾರ, ಸಿಸೇರಿಯಾದಲ್ಲಿ ಡ್ರೋನ್ ದಾಳಿಯ ಸಮಯದಲ್ಲಿ ಟೆಲ್ ಅವಿವ್‌ನಲ್ಲಿ ಸೈರನ್‌ಗಳ ಶಬ್ದ ಸಹ ಕೇಳಿಸಿದೆ.

ಡ್ರೋನ್ ದಾಳಿಗೆ ಗುರಿಯಾದ ಕಟ್ಟಡವು ನೆತನ್ಯಾಹು ಅವರ ಮನೆಯ ಭಾಗವಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಿಕೊಂಡಿವೆ. ಎರಡು ಡ್ರೋನ್‌ಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗಿದ್ದು, ಅವುಗಳನ್ನು ತಡೆಹಿಡಿಯಲಾಗಿದೆ ಎಂದು ಐಡಿಎಫ್ ಹೇಳಿದೆ. ಈ ಕಾರಣದಿಂದಾಗಿ, ಗಿಲೋಟ್ ಮಿಲಿಟರಿ ನೆಲೆಯಲ್ಲಿ ಸೈರನ್‌ಗಳ ಕೂಗಿಕೊಂಡಿದ್ದವು. ಆದರೆ ನಂತರ ಆ ಪ್ರದೇಶದಲ್ಲಿ ಡ್ರೋನ್‌ಗಳು ಇರಲಿಲ್ಲ ಎಂದು ಸೇನೆ ಹೇಳಿದೆ.
ಶನಿವಾರ ಬೆಳಿಗ್ಗೆಯಿಂದಲೇ ಲೆಬನಾನ್‌ ಪ್ರದೇಶದಿಂದ ಇಸ್ರೇಲಿನ ಟಿಬೇರಿಯಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ರಾಕೆಟ್ ದಾಳಿಗಳನ್ನು ನಡೆಸಲಾಗಿದೆ.

ಹಲವಾರು ರಾಕೆಟ್‌ಗಳು ಗಲಿಷಿಯಾ ಸಮುದ್ರಕ್ಕೆ ಬೀಳುತ್ತಿರುವುದು ಕಂಡುಬಂದಿದೆ. ಯಾರಿಗೂ ಗಾಯಗಳಾಗಿಲ್ಲ. ಟೆಲ್ ಅವಿವ್ ಮತ್ತು ನಗರದ ಉತ್ತರ ಪ್ರದೇಶಗಳಲ್ಲಿ ಡ್ರೋನ್ ದಾಳಿಯ ಎಚ್ಚರಿಕೆಯ ಸೈರನ್‌ಗಳು ಕೂಗಿಕೊಂಡರೂ, ಆದರೆ ಅಲ್ಲಿ ಯಾವುದೇ ಸ್ಫೋಟಗಳು ಕೇಳಿಬಂದಿಲ್ಲ ಎಂದು ವರದಿಗಳು ಹೇಳಿವೆ.
ಕಳೆದ ಕೆಲ ಗಂಟೆಗಳ ನಂತರ ಲೆಬನಾನ್‌ನಿಂದ ಇಸ್ರೇಲಿ ಪ್ರದೇಶವನ್ನು ಪ್ರವೇಶಿಸಿದ ಮೂರು ಯುಎವಿ (UAV)ಗಳನ್ನು ಗುರುತಿಸಲಾಗಿದೆ. ಮತ್ತೊಂದು ಸಿಸೇರಿಯಾ ಪ್ರದೇಶದಲ್ಲಿ ಕಟ್ಟಡಕ್ಕೆ ಅಪ್ಪಳಿಸಿತು. ಯಾರಿಗೂ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement