ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಶಾಹದೋಲ್ ಪ್ರದೇಶದ ದಕ್ಷಿಣ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಚಿರತೆ ದಾಳಿ ಮಾಡಿದ ಘಟನೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.
ಪಿಕ್‌ನಿಕ್‌ಗೆ ಬಂದ ಗುಂಪು ಚಿರತೆಯನ್ನು ಕೆಣಕಿ ಪ್ರಚೋದಿಸಿದ ನಂತರ ಅದು ದಾಳಿ ಮಾಡದ ಘಟನೆ ಖಿತೌಲಿ ನದಿ ತೀರದಲ್ಲಿ ಭಾನುವಾರ ನಡೆದಿದೆ. ಗಾಯಗೊಂಡವರ ಪೈಕಿ ಇಬ್ಬರ ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗಾಯಗೊಂಡ ಒಬ್ಬರು ಚಿತ್ರೀಕರಿಸಿದ 30 ಸೆಕೆಂಡುಗಳ ವೀಡಿಯೊ ಕ್ಲಿಪ್ ಚಿರತೆ ಪೊದೆಗಳಲ್ಲಿ ಸುಮ್ಮನೆ ಕುಳಿತಿರುವುದನ್ನು ತೋರಿಸಿದೆ, ಈ ಗುಂಪು ಚಿರತೆಯನ್ನು ಕರೆಯಲು ಪ್ರಾರಂಭಿಸಿದೆ. ಚಿರತೆಯನ್ನು ನೋಡಿದ ಗುಂಪು ‘ಆಜಾ, ಆಜಾ’ (ಇಲ್ಲಿ ಬನ್ನಿ, ಇಲ್ಲಿಗೆ ಬನ್ನಿ) ಎಂದು ಕೂಗಿದೆ. ವಿನೋದದಿಂದ ತುಂಬಿದ ಪಿಕ್ನಿಕ್ ಕೆಲವೇ ಸೆಕೆಂಡುಗಳಲ್ಲಿ ಭಯಾನಕವಾಯಿತು.
ಗುಂಪು ಕೆಣಕ್ಕಿದ್ದರಿಂದ ಅಸಮಾಧಾನಗೊಂಡ ಚಿರತೆ ಕೋಪದಿಂದ ಗುಂಪಿನತ್ತ ಧಾವಿಸಿದೆ. ಚಿರತೆ ಇಬ್ಬರ ಮೇಲೆ ದಾಳಿ ಮಾಡಿದೆ ಮತ್ತು ನಂತರ ಇನ್ನೊಬ್ಬ ವ್ಯಕ್ತಿಯನ್ನು ಎಳೆದು ಸೀಳಲು ಪ್ರಯತ್ನಿಸಿದೆ. ಭಯಭೀತರಾದ ಗುಂಪು ನಂತರ ವೀಡಿಯೊದಲ್ಲಿ ‘ಭಾಗ್’ (ಓಡು) ಎಂದು ಕಿರುಚುವುದು ಕೇಳಿಸುತ್ತದೆ. ಗುಂಪು ಕೂಗಿಕೊಂಡಾಗ ಚಿರತೆ ವ್ಯಕ್ತಿಯನ್ನು ಬಿಟ್ಟು ಕಾಡಿನೊಳಗೆ ಓಡಿಹೋಗಿದೆ.
ಗಾಯಗೊಂಡವರನ್ನು ಶಹದೋಲ್ ಪೊಲೀಸ್ ಇಲಾಖೆಯ ಎಎಸ್‌ಐ ನಿತಿನ್ ಸಮ್ದಾರಿಯಾ, ಆಕಾಶ ಕುಶ್ವಾಹಾ ಮತ್ತು ನಂದಿನಿ ಸಿಂಗ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಶಹದೋಲ್ ಪಟ್ಟಣದ ನಿವಾಸಿಗಳು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
“ಚಿರತೆ ತನ್ನ ಉಗುರುಗಳನ್ನು ಆಕೆಯ ತಲೆಗೆ ಬಡಿದಿದ್ದರಿಂದ ಮಹಿಳೆಗೆ ತೀವ್ರ ಗಾಯಗಳಾಗಿವೆ” ಎಂದು ಸೊಹಗಪುರ ಪೊಲೀಸ್ ಠಾಣೆಯ ಉಸ್ತುವಾರಿ ಭೂಪೇಂದ್ರ ಮಣಿ ಪಾಂಡೆ ವರದಿ ಮಾಡಿದ್ದಾರೆ. ಗಾಯಗೊಂಡವರಿಗೆ ತಕ್ಷಣದ ವೈದ್ಯಕೀಯ ಆರೈಕೆ ನೀಡಲಾಗಿದೆ.
ಶಾಹದೋಲ್ ಉಪವಿಭಾಗೀಯ ಅರಣ್ಯಾಧಿಕಾರಿ ಬಾದಶಾ ರಾವತ್ ಪ್ರಕಾರ, ಈ ಪ್ರದೇಶದಲ್ಲಿ ಹುಲಿ ದಾಳಿಯ ಮತ್ತೊಂದು ಘಟನೆ ನಡೆದಿದ್ದು, ಅದರ ನಂತರ ಜನರಿಗೆ ಅರಣ್ಯಕ್ಕೆ ಹೋಗದಂತೆ ಸಲಹೆ ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ