ಒಂದು ಇಟ್ಟಿಗೆ ಬೆಲೆ ಎಷ್ಟು…? ಈ ಪಂಚಾಯತದಲ್ಲಿ ದರಕ್ಕಿಂತ 10 ಪಟ್ಟು ಹೆಚ್ಚು ಬಿಲ್‌ ಮಾಡಿದ್ರೂ ಅದಕ್ಕೆ ಓಕೆ….!

ಮಧ್ಯಪ್ರದೇಶದ ಶಹದೋಲ್‌ನ ಪಟೇರಾ ಟೋಲಾದಲ್ಲಿ ಅಂಗನವಾಡಿ ಕಟ್ಟಡದ ಗಡಿ ಗೋಡೆ ನಿರ್ಮಾಣಕ್ಕಾಗಿ, 2,500 ಇಟ್ಟಿಗೆಗಳಿಗೆ 1.25 ಲಕ್ಷ ರೂ. ಬಿಲ್ ಅನ್ನು ಮಧ್ಯಪ್ರದೇಶದ ಶಹದೋಲಿನ ಗ್ರಾಮ ಪಂಚಾಯತ ಅನುಮೋದಿಸಿದೆ. ಪೆರಿಬಹರಾ ಗ್ರಾಮದ ಚೇತನಪ್ರಸಾದ ಕುಶ್ವಾಹ ಅವರ ಹೆಸರಿನಲ್ಲಿ, ಸರಪಂಚ ಮತ್ತು ಪಂಚಾಯತ ಕಾರ್ಯದರ್ಶಿಯ ಶಾಮೀಲಿನಿಂದ ಬಿಲ್‌ ಸ್ವೀಕರಿಸಲಾಗಿದೆ ಎಂದು ಹೇಳಲಾದ ಈ ಬಿಲ್‌ ಸಾಮಾಜಿಕ ಮಾಧ್ಯಮ … Continued

ಮನಕಲಕುವ ವೀಡಿಯೊ : ವಾಹನ ಡಿಕ್ಕಿಯಾಗಿ ಒದ್ದಾಡುತ್ತಿದ್ದ ಮರಿಯನ್ನು ಕಾಪಾಡಲು ಪ್ರಯತ್ನಿಸಿ ಗೋಳಾಡಿದ ತಾಯಿ ಕರಡಿ

ಶಹದೋಲ್ : ತಾಯಿಯ ಪ್ರಪಂಚ ಮಕ್ಕಳು ಮತ್ತು ಮನುಷ್ಯ ಅಥವಾ ಪ್ರಾಣಿ ಇರಲಿ ಯಾವುದೇ ತಾಯಿ ಮಕ್ಕಳನ್ನು ಕಳೆದುಕೊಳ್ಳುವುದನ್ನು ಸಹಿಸಿಕೊಳ್ಳಲುವುದಿಲ್ಲ… ಇಂಥದ್ದೇ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಿಂದ ತಾಯಿ ಕರಡಿಯೊಂದು ವಾಹನ ಬಡಿದು ತನ್ನ ಗಾಯಗೊಂಡ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ತಾಯಿ ಕರಡಿ ತೀವ್ರ ಆತಂಕದಿಂದಲೇ ತನ್ನ … Continued

ಇದೆಂಥ ಪವಾಡ…| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ…! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

ಸಕಂಡಿ: ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಗಣಿತ ಮತ್ತು ಮಾನವಶಕ್ತಿಯ ಪವಾಡವೇ ನಡೆದಿದೆ ಎಂದು ವರದಿಯಾಗಿದೆ. ಸಕಂಡಿ ಗ್ರಾಮದ ಸರ್ಕಾರಿ ಶಾಲೆಯ ಒಂದು ಗೋಡೆಗೆ ನಾಲ್ಕು ಲೀಟರ್ ಬಣ್ಣವನ್ನು ಹಚ್ಚಲು 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ. ಇದರ ಬಿಲ್‌ ಈಗ ಆನ್ಲೈನ್‌ನಲ್ಲಿ ವೈರಲ್‌ ಆದ ನಂತರ ವ್ಯಾಪಕ ಟೀಕೆಗೆ ಗುರಿಯಾಗಿದೆ. … Continued

ವೀಡಿಯೊ…| ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಬಾ..ಬಾ..ಬಾ..ಎಂದು ಕರೆದು ʼಚಿರತೆʼ ಕೆಣಕಿದ ಗುಂಪು : ದಾಳಿ ಮಾಡಿ ಮೂವರನ್ನು ಗಾಯಗೊಳಿಸಿದ ಚಿರತೆ

ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಶಾಹದೋಲ್ ಪ್ರದೇಶದ ದಕ್ಷಿಣ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಚಿರತೆ ದಾಳಿ ಮಾಡಿದ ಘಟನೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಪಿಕ್‌ನಿಕ್‌ಗೆ ಬಂದ ಗುಂಪು ಚಿರತೆಯನ್ನು ಕೆಣಕಿ ಪ್ರಚೋದಿಸಿದ ನಂತರ ಅದು ದಾಳಿ ಮಾಡದ ಘಟನೆ ಖಿತೌಲಿ ನದಿ ತೀರದಲ್ಲಿ ಭಾನುವಾರ ನಡೆದಿದೆ. ಗಾಯಗೊಂಡವರ ಪೈಕಿ ಇಬ್ಬರ ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ … Continued